For Quick Alerts
  ALLOW NOTIFICATIONS  
  For Daily Alerts

  ಕೋಟಿ-ಕೋಟಿ ಗಳಿಸುವ ಸಲ್ಮಾನ್ ಖಾನ್ ಮೊದಲ ಸಿನಿಮಾಕ್ಕೆ ಪಡೆದಿದ್ದ ಸಂಭಾವನೆ ಎಷ್ಟು?

  |

  ನಟ ಸಲ್ಮಾನ್ ಖಾನ್ ಸಿನಿಮಾಗಳು ಚೆನ್ನಾಗಿರಲಿ, ಇಲ್ಲದಿರಲಿ ಕನಿಷ್ಟ 100 ಕೋಟಿ ಲಾಭ ಖಾಯಂ. ಸಲ್ಮಾನ್ ಖಾನ್ ಮಾರುಕಟ್ಟೆ ಅಷ್ಟು ದೊಡ್ಡದು.

  ಸಲ್ಮಾನ್ ಖಾನ್ ನಟನೆಯ ಸಿನಿಮಾಗಳಿಗೆ ನೂರಾರು ಕೋಟಿಗಳು ಲೆಕ್ಕವೇ ಇಲ್ಲ. ಸಿನಿಮಾ ಬಿಡುಗಡೆ ಆಗುವ ಮುನ್ನವೇ ಹಾಕಿದ ಬಂಡವಾಳವನ್ನು ನಿರ್ಮಾಪಕ ವಾಪಸ್ ಪಡೆದಿರುತ್ತಾನೆ. ಹೀಗಾಗಿಯೇ ಸಲ್ಮಾನ್ ಖಾನ್ ಜೊತೆಗೆ ಸಿನಿಮಾ ಮಾಡಲು ನಿರ್ಮಾಪಕರು ನಾ ಮುಂದು-ತಾ ಮುಂದು ಕಾಯುತ್ತಿರುತ್ತಾರೆ.

  ಕೆಲವು ಮೂಲಗಳ ಪ್ರಕಾರ ಸಲ್ಮಾನ್ ಖಾನ್ ತಾವು ನಟಿಸುವ ಪ್ರತಿ ಸಿನಿಮಾಕ್ಕೂ ಸಹ ನಿರ್ಮಾಪಕರಾಗಿರುತ್ತಾರೆ. ಸಂಭಾವನೆ ಜೊತೆಗೆ ಲಾಭದ ಷೇರನ್ನೂ ಪಡೆದುಕೊಳ್ಳುತ್ತಾರೆ. ಸಿನಿಮಾ ಒಂದಕ್ಕೆ ನೂರಾರು ಕೋಟಿ ಬಾಚುವ ಸಲ್ಮಾನ್ ಖಾನ್ ತಮ್ಮ ಮೊದಲ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು?

  ನಟ ಸಲ್ಮಾನ್ ಖಾನ್ ಮೊದಲ ಬಾರಿಗೆ ಸಿನಿಮಾದಲ್ಲಿ ನಟಿಸಿದ್ದು 1988ರಲ್ಲಿ. 'ಬೀವಿ ಹೋ ತೊ ಐಸಿ' ಹೆಸರಿನ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೀರೋನ ಸಹೋದರನ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಫಾರುಕ್ ಶೇಖ್ ಮತ್ತು ರೇಖಾ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ಅಟ್ಟರ್ ಫ್ಲಾಪ್ ಆಗಿತ್ತು. ಸಿನಿಮಾವನ್ನು ಜೆಕೆ ಬಿಹಾರಿ ಎಂಬುವರು ನಿರ್ದೇಶಿಸಿ, ಸುರೇಶ್ ಭಗತ್ ನಿರ್ಮಾಣ ಮಾಡಿದ್ದರು.

  ಮೊದಲ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು?

  ಮೊದಲ ಸಿನಿಮಾಕ್ಕೆ ಪಡೆದ ಸಂಭಾವನೆ ಎಷ್ಟು?

  ಮೊದಲ ಸಿನಿಮಾಕ್ಕೆ ಕೇವಲ 11,000 ರುಪಾಯಿ ಸಂಭಾವನೆಯನ್ನು ಸಲ್ಮಾನ್ ಖಾನ್ ಪಡೆದಿದ್ದರು. ಆಗಿನ ಕಾಲಕ್ಕೆ ಇದು ಸಣ್ಣ ಮೊತ್ತವೇನೂ ಅಲ್ಲ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಬಾಲಿವುಡ್‌ನಲ್ಲಿ ಬಹಳ ದೊಡ್ಡ ಚಿತ್ರಕತೆಗಾರರಾಗಿದ್ದರು. ಆದರೂ ಸಲ್ಮಾನ್ ಖಾನ್‌ಗೆ ಯಾವುದೇ ಸಿನಿಮಾ ಸಿಕ್ಕಿರಲಿಲ್ಲ. ಮೊದಲ ಬಾರಿಗೆ 'ಬೀವಿ ಹೋ ತೊ ಐಸಿ' ಸಿನಿಮಾದಲ್ಲಿ ಅವಕಾಶ ಸಿಕ್ಕಿತು. ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಕಿರುವ ಬಟ್ಟೆಗಳೆಲ್ಲವೂ ಅವರದ್ದೇ ಅಂತೆ.

  ಸಲ್ಮಾನ್ ಸ್ಟಾರ್ ಆದರೆ ಬಾಲಿವುಡ್ ಬಿಡುತ್ತೇನೆ ಎಂದಿದ್ದ ನಿರ್ದೇಶಕ

  ಸಲ್ಮಾನ್ ಸ್ಟಾರ್ ಆದರೆ ಬಾಲಿವುಡ್ ಬಿಡುತ್ತೇನೆ ಎಂದಿದ್ದ ನಿರ್ದೇಶಕ

  'ಬೀವಿ ಹೋ ತೊ ಐಸಿ' ಸಿನಿಮಾದ ನಿರ್ಮಾಪಕ ಸುರೇಶ್ ಭಗತ್ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ, ''ಆ ಸಿನಿಮಾದ ನಿರ್ದೇಶಕ ಬಿಹಾರಿ, 'ಸಲ್ಮಾನ್ ಖಾನ್ ಸ್ಟಾರ್ ಆದರೆ ನಾನು ಚಿತ್ರರಂಗ ಬಿಡುತ್ತೇನೆ ಎಂದಿದ್ದರು. ಸಲ್ಮಾನ್ ಖಾನ್ ಸ್ಟಾರ್ ಆದರೂ ಬಿಹಾರಿ ಸಹ ಚಿತ್ರರಂಗ ಬಿಟ್ಟರು' ಎಂದಿದ್ದಾರೆ. ಆದರೆ ತಮಗೆ ಸಲ್ಮಾನ್ ಖಾನ್ ಮೇಲೆ ನಂಬಿಕೆ ಇತ್ತು. ಸಲ್ಮಾನ್ ಪಕ್ಕಾ ಸ್ಟಾರ್ ಆಗುತ್ತಾರೆ ಎಂಬುದನ್ನು ನಾನು ಆಗಲೇ ಊಹಿಸಿದ್ದೆ'' ಎಂದೂ ಹೇಳಿದ್ದರು.

  ಎಲ್ಲರೂ ಬೇಡವೆಂದಿದ್ದ ಪಾತ್ರ ನನಗೆ ಸಿಕ್ಕಿತ್ತು: ಸಲ್ಮಾನ್

  ಎಲ್ಲರೂ ಬೇಡವೆಂದಿದ್ದ ಪಾತ್ರ ನನಗೆ ಸಿಕ್ಕಿತ್ತು: ಸಲ್ಮಾನ್

  ಸಲ್ಮಾನ್ ಖಾನ್ ನಡೆಸಿಕೊಡುವ 'ದಸ್ ಕಾ ಧಮ್' ಕಾರ್ಯಕ್ರಮದಲ್ಲಿ ಒಮ್ಮೆ ಮಾತನಾಡಿದ್ದ ಸಲ್ಮಾನ್ ಖಾನ್, ''ನನಗೆ ಅವಕಾಶ ಸಿಕ್ಕಿದ್ದು ಕೇವಲ ಅದೃಷ್ಟದಿಂದ. 'ಬೀವಿ ಹೋ ತೊ ಐಸಿ' ಸಿನಿಮಾದ ನಿರ್ದೇಶಕ ಬಿಹಾರಿ ಆ ಸಿನಿಮಾಕ್ಕಾಗಿ ಹಲವು ನಟರನ್ನು ಕೇಳಿದ್ದರಂತೆ. ಆದರೆ ಯಾರೂ ಸಹ ಒಪ್ಪಿಕೊಂಡಿರಲಿಲ್ಲ. ಆಗ ನಿರ್ಧಾರ ಮಾಡಿದ ಬಿಹಾರಿ ಪಾತ್ರ ಕೇಳಿಕೊಂಡು ಯಾರು ನನ್ನ ಕಚೇರಿಗೆ ಬರುತ್ತಾರೊ ಅವರಿಗೆ ಅವಕಾಶ ಕೊಡುತ್ತೇನೆ ಎಂದುಕೊಂಡಿದ್ದರಂತೆ. ಅದೇ ಸಮಯಕ್ಕೆ ನಾನು ಅವರ ಕಚೇರಿಗೆ ಹೋಗಿ. ಹೆಚ್ಚು ಮಾತನಾಡದೆ, ಯಾವುದೇ ಆಡಿಶನ್ ಇಲ್ಲದೆ ನನಗೆ ತಮ್ಮ ಸಿನಿಮಾದಲ್ಲಿ ಅವಕಾಶ ಕೊಟ್ಟರು'' ಎಂದು ಸಲ್ಮಾನ್ ಖಾನ್ ಹೇಳಿಕೊಂಡಿದ್ದರು.

  ಸಲ್ಮಾನ್ ಕೈ ಹಿಡಿದಿದ್ದು 'ಮೈನೆ ಪ್ಯಾರ್ ಕಿಯಾ'

  ಸಲ್ಮಾನ್ ಕೈ ಹಿಡಿದಿದ್ದು 'ಮೈನೆ ಪ್ಯಾರ್ ಕಿಯಾ'

  ಮೊದಲ ಸಿನಿಮಾ ಫ್ಲಾಪ್ ಆಯಿತು. ಆದರೆ ಸಲ್ಮಾನ್ ಕೈ ಹಿಡಿದಿದ್ದು ಅವರ ನಟನೆಯ ಎರಡನೇಯ ಸಿನಿಮಾ 'ಮೈನೆ ಪ್ಯಾರ್ ಕಿಯಾ'. ಭಾಗ್ಯಶ್ರಿ ನಾಯಕಿಯಾಗಿ ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದ್ದ ಆ ಸಿನಿಮಾ ಬಾಲಿವುಡ್‌ನ ಆಲ್‌ ಟೈಮ್ ಸೂಪರ್ ಹಿಟ್ ಸಿನಿಮಾಗಳಲ್ಲಿ ಒಂದಾಯಿತು. ಆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೆಸರು ಪ್ರೇಮ್ ನಂತರ ಪ್ರೇಮ್ ಹೆಸರನ್ನೇ ಉಳ್ಳ ಹಲವು ಪಾತ್ರಗಳಲ್ಲಿ ಸಲ್ಮಾನ್ ಖಾನ್ ನಟಿಸಿದರು. ಅಷ್ಟರ ಮಟ್ಟಿಗೆ ಆ ಪಾತ್ರ ಖ್ಯಾತಿ ಗಳಿಸಿತ್ತು.

  ಹಲವು ಸಿನಿಮಾಗಳು ಸಲ್ಮಾನ್ ಖಾನ್ ಕೈಯಲ್ಲಿವೆ

  ಹಲವು ಸಿನಿಮಾಗಳು ಸಲ್ಮಾನ್ ಖಾನ್ ಕೈಯಲ್ಲಿವೆ

  ಇತ್ತೀಚೆಗಷ್ಟೆ ಸಲ್ಮಾನ್ ಖಾನ್ ನಟನೆಯ 'ರಾಧೆ' ಸಿನಿಮಾ ಬಿಡುಗಡೆ ಆಗಿ ಹಿಟ್ ಆಯಿತು. ಇದೀಗ 'ಅಂತಿಮ್' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಪ್ರಸ್ತುತ ರಷ್ಯಾದಲ್ಲಿರುವ ಸಲ್ಮಾನ್ ಖಾನ್ ಅಲ್ಲಿ 'ಟೈಗರ್ 3' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಅದರ ಬಳಿಕ 'ಡ್ಯಾನ್ಸಿಂಗ್ ಡ್ಯಾಡಿ', 'ವಾಂಟೆಡ್ 2', 'ದಬಾಂಗ್ 4', 'ಕಿಕ್ 2', 'ಬುಲ್ ಬುಲ್ ಮ್ಯಾರೇಜ್ ಹಾಲ್', 'ಇನ್‌ಶಾ ಅಲ್ಲ', 'ಕಭಿ ಈದ್ ಕಭಿ ದಿವಾಲಿ', 'ಭಜರಂಗಿ ಭಾಯಿಜಾನ್ 2', 'ಧಕ್', 'ರಘು ರಾಜಾ ರಾಮ್', 'ಕಿಕ್ 2' ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಜೊತೆಗೆ 'ಲಾಲ್ ಸಿಂಗ್ ಛಡ್ಡಾ'. 'ಪಠಾಣ್' ಸಿನಿಮಾಗಳಲ್ಲಿ ಅತಿಥಿ ಪಾತ್ರಗಳಲ್ಲಿಯೂ ನಟಿಸುತ್ತಿದ್ದಾರೆ.

  English summary
  How much remuneration did Salman Khan received for his first movie 'Diwi Ho Tho Aisi' movie which is released in 1988.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X