ಆದಿಪುರುಷ್ ಚಿತ್ರ ಲಾಭ ಗಳಿಸಲು ಇನ್ನೆಷ್ಟು ಕಲೆಕ್ಷನ್ ಮಾಡಬೇಕು?

ಕಳೆದ ಶುಕ್ರವಾರ ( ಜೂನ್ 16 ) ಬಿಡುಗಡೆಗೊಂಡ ಆದಿಪುರುಷ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪಾಸಿಟಿವ್ ಅಂಶಗಳಿಗಿಂತ ಹೆಚ್ಚಾಗಿ ನೆಗೆಟಿವ್ ಅಂಶಗಳಿಂದಲೇ ಸುದ್ದಿಗೀಡಾಗಿರುವ ಆದಿಪುರುಷ್ ಚಿತ್ರ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಳ್ತಿದೆ.

ಇದು ಪ್ರಭಾಸ್ ನಟನೆಯ ಮೊದಲ ಬಾಲಿವುಡ್ ಸಿನಿಮಾವಾಗಿದ್ದು ರಾಮನ ಪಾತ್ರದಲ್ಲಿ ನಟಿಸಿದ್ದರೆ, ಕೃತಿ ಸೆನನ್ ಸೀತೆಯ ರೋಲ್‌ನಲ್ಲಿ ಮಿಂಚಿದ್ದಾರೆ ಹಾಗೂ ರಾವಣನ ಪಾತ್ರದಲ್ಲಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಓಂ ರಾವತ್ ನಿರ್ದೇಶನವಿದೆ.

How much share amount Adipurush needs to collect for reaching breakeven point?

ಇನ್ನು ಈ ಚಿತ್ರ ಬಿಡುಗಡೆಗೂ ಮುನ್ನವೇ ಟೀಸರ್‌ನಲ್ಲಿ ಕೆಟ್ಟ ವಿಎಫ್ಎಕ್ಸ್ ಹೊಂದಿದ್ದ ಕಾರಣದಿಂದಾಗಿ ಕಳಪೆ ಪ್ರತಿಕ್ರಿಯೆನ್ನು ಪಡೆದುಕೊಂಡು ಟ್ರೋಲ್ ಆಗಿತ್ತು. ಅದೇ ತರಹ ಈಗಲೂ ಸಹ ಚಿತ್ರದಲ್ಲಿ ಕಳಪೆ ವಿಎಫ್ಎಕ್ಸ್, ಪಾತ್ರಗಳ ವೇ‍ಷಭೂಷಣ ಇಲ್ಲದಿರುವುದು, ವಿವಾದಾತ್ಮಕ ಸಂಭಾಷಣೆ ಇರುವ ಅಂಶಗಳಿಂದಾಗಿ ಆದಿಪುರುಷ್ ಸಿನಿ ರಸಿಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ.

ಹೀಗೆ ಮಿಶ್ರ ಪ್ರತಿಕ್ರಿಯೆ ಎಂಬ ಹಿನ್ನಡೆ ಒಂದೆಡೆಯಾದರೆ, ಮತ್ತೊಂದೆಡೆ ಚಿತ್ರದ ವಿವಾದಗಳು ಹಲವರ ಮೇಲೆ ಪರಿಣಾಮ ಬೀರಿದ್ದು ಬ್ಯಾನ್ ವಿರೋಧ ಪಡೆದುಕೊಳ್ಳುವಷ್ಟು ಹಿನ್ನಡೆ ಅನುಭವಿಸಿದೆ. ಇಷ್ಟೆಲ್ಲಾ ಚಟುವಟಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಜರುಗುತ್ತಿದ್ದರೆ ಅತ್ತ ಆಫ್‌ಲೈನ್‌ನಲ್ಲಿ ಆದಿಪುರುಷ್ ಚಿತ್ರ ಸತತ ಮೂರು ದಿನಗಳ ಕಾಲ ನೂರು ಕೋಟಿ ಕ್ಲಬ್ ಸೇರಿ ಸಮಾಧಾನಕರ ಗಳಿಕೆ ಮಾಡಿದೆ.

ಚಿತ್ರ ನಿನ್ನೆಗೆ ( ಜೂನ್ 19 ) ನಾಲ್ಕು ದಿನಗಳ ಪ್ರದರ್ಶನವನ್ನು ಪೂರೈಸಿದ್ದು ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 375 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ದಿನ 140 ಕೋಟಿ ಗಳಿಸಿದ್ದ ಆದಿಪುರುಷ್ ಎರಡನೇ ದಿನ 100, ಮೂರನೇ ದಿನವೂ ಸಹ 100 ಕೋಟಿ ಗಲ್ಲಾಪೆಟ್ಟಿಗೆ ಸೇರಿತು ಹಾಗೂ ನಾಲ್ಕನೇ ದಿನ 35 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ.

ಹೀಗೆ ನಾಲ್ಕನೇ ದಿನಕ್ಕೆ ಆದಿಪುರುಷ್ ಕಲೆಕ್ಷನ್ ತೀವ್ರ ಕುಸಿತ ಕಂಡಿದ್ದು, ನೆಟ್ಟಿಗರು ಈ ಚಿತ್ರ ಲಾಭದ ಗೆರೆಯನ್ನು ದಾಟುವುದೂ ಕೂಡ ಕಷ್ಟ ಎಂದು ಮತ್ತೊಮ್ಮೆ ಟ್ರೋಲ್ ಮಾಡಿದರು. ಹಾಗಾದರೆ ಆದಿಪುರುಷ್ ಲಾಭ ಗಳಿಸಲು ಎಷ್ಟು ಬೇಕು ಎಂಬ ಮಾಹಿತಿ ಈ ಕೆಳಕಂಡಂತಿದೆ..

ಆದಿಪುರುಷ್ ಚಿತ್ರ 500 ಕೋಟಿ ರೂಪಾಯಿ ಬಜೆಟ್‌ನೊಂದಿಗೆ ತಯಾರಾಗಿದ್ದು, ನಾಲ್ಕು ದಿನಗಳಲ್ಲಿ 375 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿದ್ದು, ಇದರಲ್ಲಿ 170 ಕೋಟಿ ಶೇರ್ ಕಲೆಕ್ಷನ್ ಇದೆ. ಚಿತ್ರ ಬ್ರೇಕ್ ಈವನ್ ಸಾಧಿಸಿ ಲಾಭ ಗಳಿಸಲಾರಂಭಿಸಲು 242 ಗಳಿಸಬೇಕಿದ್ದು, ಇನ್ನೂ 72 ಕೋಟಿ ಶೇರ್ ಕಲೆಕ್ಷನ್ ಮಾಡಬೇಕಿದೆ. ನಾಲ್ಕನೇ ದಿನ ಆದಿಪುರುಷ್ ಕೇವಲ 18 ಕೋಟಿ ಶೇರ್ ಕಲೆಕ್ಷನ್ ಮಾಡಿದೆ. ನಾಲ್ಕನೇ ದಿನದ ಕಲೆಕ್ಷನ್ ಮೊದಲ ಮೂರು ದಿನಗಳ ಕಲೆಕ್ಷನ್‌ಗಿಂತ ತೀರ ಕೆಳಮಟ್ಟದಲ್ಲಿದ್ದು ಆದಿಪುರುಷ್ ಬ್ರೇಕ್ ಈವನ್ ತಲುಪುವುದರಲ್ಲಿ ಸಣ್ಣ ಪ್ರಮಾಣದ ಅನುಮಾನ ಹುಟ್ಟಿಸಿದೆ.

More from Filmibeat

English summary
How much share amount Adipurush needs to collect for reaching breakeven point? Take a look
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X