ಮೇಕಪ್, ಎಡಿಟಿಂಗ್ ಮಾಡಿ ಸಿಕ್ಸ್ ಪ್ಯಾಕ್ ತೋರಿಸಿದ್ದಾರೆ: ಗದರ್ 2 ಗೆ ಪಾಕಿಸ್ತಾನಿಗಳ ಪ್ರತಿಕ್ರಿಯೆ
ಆಗಸ್ಟ್ 11 ರಂದು ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ನೀಡುತ್ತಿರುವ ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಗದರ್ 2 ಗಲ್ಲಾಪೆಟ್ಟಿಗೆಯಲ್ಲಿ ತನ್ನ ಓಟವನ್ನು ಮುಂದುವರೆಸುತ್ತಿದೆ. ಚಿತ್ರಕ್ಕೆ ವಿಮರ್ಶಕರು ಮಿಶ್ರ ಪ್ರತಿಕ್ರಿಯೆ ನೀಡಿದ್ದರೂ ಕೂಡ, ಜನರು ಸಿನಿಮಾವನ್ನು ಗೆಲ್ಲಿಸಿದ್ದಾರೆ. ಎಲ್ಲಾ ಥಿಯೇಟರ್‌ಗಳಲ್ಲಿ ಸಿನಿಮಾ ಹೌಸ್ ಫುಲ್ ಆಗುತ್ತಿದೆ. ಅದರಲ್ಲೂ ಸನ್ನಿ ಡಿಯೋಲ್ ಅವರ ಆಕ್ಷನ್ ಸೀನ್‌ಗಳನ್ನು ಜನ ಎಂಜಾಯ್ ಮಾಡುತ್ತಿದ್ದಾರೆ.
ಇತ್ತ, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಪಾಕಿಸ್ತಾನಿ ನಾಗರಿಕರು ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ವಿಡಿಯೋಗೆ ಫನ್ನಿ ವಿಡಿಯೋ ಎಂದು ಹಲವರು ಶೀರ್ಷಿಕೆ ನೀಡಿದ್ದಾರೆ. ಸಿನಿಮಾದಲ್ಲಿನ ಸನ್ನಿ ಡಿಯೋಲ್ ಅವರ ಆಕ್ಷನ್ ದೃಶ್ಯಗಳಿಗೆ ಇವರು ಪ್ರತಿಕ್ರಿಯೆ ನೀಡಿದ್ದಾರೆ.

ಗದರ್: ಏಕ್ ಪ್ರೇಮ ಕಥಾ ಸಿನಿಮಾ ಕಳೆದ 22 ವರ್ಷಗಳ ಹಿಂದೆ ಬಿಡುಗಡೆಯಾಗಿತ್ತು. ಅದೇ ಸಿನಿಮಾದ ಸೀಕ್ವೆಲ್ ಗದರ್ 2. ಈ ಚಿತ್ರದಲ್ಲಿ 1971 ರಲ್ಲಿ ನಡೆದ ಘಟನೆಗಳನ್ನು ದಾಖಲಿಸಲಾಗಿದೆ. ನಟ ಸನ್ನಿ ಡಿಯೋಲ್ ತಾರಾ ಸಿಂಗ್ ಪಾತ್ರವನ್ನು, ಸಕೀನಾ ಪಾತ್ರವನ್ನು ಅಮಿಶಾ ಪಟೇಲ್ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪಾಕಿಸ್ತಾನಕ್ಕೆ ತೆರಳಿದ್ದ ತಮ್ಮ ಮಗ (ಉತ್ಕರ್ಷ್ ಶರ್ಮಾ)ರನ್ನು ರಕ್ಷಿಸಲು ತಂದೆ ನಡೆಸುವ ಹೋರಾಟದ ಕಥನ ಇದಾಗಿದೆ.
ಗದರ್ 2 ಗೆ ಪಾಕಿಸ್ತಾನಿಗಳ ಪ್ರತಿಕ್ರಿಯೆ
ಸಾಮಾಜಿಕ ಮಾಧ್ಯಮದಲ್ಲಿ ಈಗ ವೈರಲ್ ಆಗುತ್ತಿರುವ ವಿಡಿಯೋದಲ್ಲಿ, ಪಾಕಿಸ್ತಾನದ ಸ್ಥಳೀಯ ವರದಿಗಾರರೊಬ್ಬರು ಸನ್ನಿ ಡಿಯೋಲ್ ಅವರ ಆಕ್ಷನ್ ಸೀನ್‌ಗಳನ್ನು ಜನರಿಗೆ ತೋರಿಸಿದ್ದಾರೆ. ಈ ದೃಶ್ಯದಲ್ಲಿ ತಾರಾ ಸಿಂಗ್ ದೊಡ್ಡ ಸುತ್ತಿಗೆಯಿಂದ ಪೊಲೀಸರು ಮತ್ತು ಜನರನ್ನು ಹೊಡೆದು ಕೊಲ್ಲುತ್ತಾರೆ. ಈ ಪಾತ್ರ ಹೇಗನಿಸಿತು ಎಂದು ಕೇಳಿದ್ದಾರೆ.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ವ್ಯಕ್ತಿಯೊಬ್ಬ, "ಹೀಗೆ ಸನ್ನಿ ಡಿಯೋಲ್‌ಗೂ ಹೊಡೆಯಬೇಕು. ಆದರೆ ಆ ಧೈರ್ಯ ಯಾರಿಗಿದೆ?" ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ಸನ್ನಿ ಡಿಯೋಲ್‌ರನ್ನು ಪಾಕಿಸ್ತಾನಕ್ಕೆ ಕರೆಸಿ ಎಲ್ಲಾ ದಿನಚರಿಯ ಕೆಲಸಗಳನ್ನು ಮಾಡಿಸಬೇಕು. ಆತ ತನ್ನ ಶಕ್ತಿಯನ್ನು ಪ್ರದರ್ಶಿಸಲು ನೀರಿನ ಬಕೆಟ್‌ಗಳನ್ನು ಒಯ್ಯಬೇಕು, ಸಕ್ಕರೆ ಪ್ಯಾಕೆಟ್‌ಗಳನ್ನು ಲೋಡ್ ಮಾಡಿಸಬೇಕು ಎಂದಿದ್ದಾರೆ.
ಸನ್ನಿ ಡಿಯೋಲ್ ಪಾಕಿಸ್ತಾನಿ ಪ್ರಜೆಗಳನ್ನು ಸುತ್ತಿಗೆಯಿಂದ ಕೊಲ್ಲುತ್ತಿರುವ ದೃಶ್ಯಕ್ಕೆ ಪ್ರತಿಕ್ರಿಯಿಸಿದ ಮತ್ತೊಬ್ಬರು, "ಇದೇಲ್ಲಾ ಸಿನಿಮಾದಲ್ಲಿ ತೋರಿಸಲಾಗಿದೆ. ಅವನು ಒಮ್ಮೆ ಇಲ್ಲಿಗೆ ಬರಲಿ, ನಾವು ಏನು ಎಂದು ಅವರಿಗೆ ತೋರಿಸುತ್ತೇವೆ. ಇಲ್ಲಿನ ಮಕ್ಕಳು ಕೂಡ ಎಷ್ಟು ಶಕ್ತಿವಂತರು ಎಂದು" ಎಂದು ಕಿಡಿಕಾರಿದ್ದಾರೆ.

ಇಬ್ಬೊನ್ನ ಯುವಕ, "ಸಿನಿಮಾದಲ್ಲಿ ತೋರಿಸಿದೆಲ್ಲ ಸುಳ್ಳು... ಅವರು ಇಲ್ಲಿಗೆ ಬಂದರೆ ನನ್ನ ಒಂದು ಕೈ ಸಾಕು.. ಈ ಸಿಕ್ಸ್ ಪ್ಯಾಕ್ ಆಬ್ಸ್ ಎಲ್ಲಾ ಮೇಕಪ್. ಇಲ್ಲಿ ಅದ್ಯಾವುದು ಉಪಯೋಗಕ್ಕೆ ಬರಲ್ಲ.. ಒಮ್ಮೆ ಅವರಿಗೆ ಕರೆ ಮಾಡಿ" ಎಂದು ವ್ಯಂಗ್ಯವಾಡಿದ್ದಾರೆ.
ಗದರ್ 2 ಸಿನಿಮಾವನ್ನು ಅನಿಲ್ ಶರ್ಮಾ ನಿರ್ದೇಶಿಸಿದ್ದು, ಸನ್ನಿ ಡಿಯೋಲ್, ಅಮೀಶಾ ಪಟೇಲ್ ಜೊತೆಗೆ ಉತ್ಕರ್ಷ್ ಶರ್ಮಾ, ಮನೀಶ್ ವಾಧ್ವಾ, ಗೌರವ್ ಚೋಪ್ರಾ, ಸಿಮ್ರತ್ ಕೌರ್, ಲವ್ ಸಿನ್ಹಾ, ರೋಹಿತ್ ಚೌಧರಿ, ಮಧುಮಲ್ತಿ ಕಪೂರ್, ರಾಕೇಶ್ ಬೇಡಿ, ಮುಷ್ತಾಕ್ ಖಾನ್ ಮತ್ತು ಡಾಲಿ ಬಿಂದ್ರಾ ಸಹ ನಟಿಸಿದ್ದಾರೆ. ಚಿತ್ರವು ದೇಶಾದ್ಯಂತ ಒಟ್ಟು 263.48 ಕೋಟಿ ರೂಪಾಯಿ ಗಳಿಸಿದೆ.


Click it and Unblock the Notifications











