ಬದುಕು ಬದಲಿಸಿದ ಸಿನಿಮಾ ಮತ್ತು ಪಾತ್ರ ಮರೆಯದ ವಿಕ್ಕಿ ಕೌಶಲ್ ; ಕತ್ರಿನಾ ಕೈಫ್ ಮಗನ ಹೆಸರೇನು ?
ಕೇವಲ ಗ್ಲ್ಯಾಮರ್ ಮಾತ್ರ ಅಲ್ಲ ಅಭಿನಯದ ಗ್ರಾಮರ್ ಕೂಡ ಗೊತ್ತಿರಬೇಕು ಅನ್ನುವುದನ್ನೂ ಸಾಬೀತು ಮಾಡಿದವರು ಕತ್ರಿನಾ ಕೈಫ್. 1983ರಲ್ಲಿ ಅದೆಲ್ಲೋ ಹಾಂಗ್ ಕಾಂಗ್‌ನಲ್ಲಿ ಜನ್ಮ ಪಡೆದು, ಬಾಲಿವುಡ್‌ನಲ್ಲಿ ಹೆಸರು ಮಾಡಿದ ಕತ್ರಿನಾ ಕೈಫ್ ಅಸಂಖ್ಯಾತ ಅಭಿಮಾನಿಗಳನ್ನು ಕೂಡ ಸಂಪಾದಿಸಿದ್ಧಾರೆ. ಭಾರತದಲ್ಲಿಯೇ ಬಿಡಾರ ಹೂಡಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಇಂಥಾ ಕತ್ರಿನಾ ಕೈಫ್ ಅವರಿಗೆ ಕಳೆದ ನಾಲ್ಕೂವರೆ ವರ್ಷಗಳಿಂದ...
ಹೋದಲ್ಲಿ..ಬಂದಲ್ಲಿ.. ಕುಂತಲ್ಲಿ.. ನಿಂತಲ್ಲಿ ಹಲವರು ''ಗುಡ್ ನ್ಯೂಸ್'' ಯಾವಾಗ ಎನ್ನುವ ಪ್ರಶ್ನೆಯನ್ನೇ ಕೇಳುತ್ತಿದ್ದರು. ಯಾಕೆಂದರೆ ಎಲ್ಲರಿಗೆ ಗೊತ್ತಿರುವಂತೆ ಸಾಮಾನ್ಯವಾಗಿ ಯಾರೇ ಮದುವೆಯಾಗಲಿ ಕೆಲ ದಿನಗಳು ಕಳೆಯುತ್ತಿದ್ದಂತೆ ಕೇಳೋ ಪ್ರಶ್ನೆ ಮಕ್ಕಳ ಕುರಿತಾಗಿಯೇ.

ಇನ್ನು ಸೆಲೆಬ್ರೆಟಿಗಳ ವಿಚಾರದಲ್ಲಿ ಇದು ಇನ್ನೂ ಅತಿಯಾಗಿರುತ್ತೆ. ಇದಕ್ಕೆ ಕೈಗನ್ನಡಿ ಎಂಬಂತೆ ಕತ್ರಿನಾ ಕೈಫ್ ತಾಯ್ತನದ ಸುಖ ಯಾವತ್ತು ಅನುಭವಿಸುತ್ತಾರೆ ಅನ್ನುವ ಚಿಂತೆಯನ್ನು ಹಲವರು ಮಾಡುತ್ತಿದ್ದರು. ಕಾಲ .. ಕಾಲಕ್ಕೆ .. ಸಾಮಾಜಿಕ ಜಾಲತಾಣದಲ್ಲಿ ನೀವು ಗರ್ಭಿಣಿನಾ..? ಎಂದು ನೇರವಾಗಿಯೇ ಪ್ರಶ್ನೆಯನ್ನು ಕೂಡ ಕೇಳುತ್ತಿದ್ದರು. ಕತ್ರಿನಾ ಪತಿ ವಿಕ್ಕಿ ಕೌಶಲ್ ಕೂಡ ಇದರಿಂದ ಹೊರತಾಗಿರಲಿಲ್ಲ.
ಈ ಪ್ರಶ್ನೆಗೆ ಇಬ್ಬರು ಕಳೆದ ವರ್ಷಾಂತ್ಯದಲ್ಲಿ ಉತ್ತರ ನೀಡಿದ್ದರು. ಗಂಡು ಮಗುವನ್ನು ತಮ್ಮ ಪ್ರಪಂಚಕ್ಕೆ ಸ್ವಾಗತಿಸಿದ್ದರು. ಇದೀಗ ತಮ್ಮ ಮುದ್ದಾದ ಮಗನಿಗೆ ನಾಮಕರಣವನ್ನು ಇಬ್ಬರು ಮಾಡಿದ್ದಾರೆ.
ಹೌದು, 2025ರ ನವೆಂಬರ್ 7ರಂದು ಕತ್ರಿನಾ ಕೈಫ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದ ಕತ್ರಿನಾ ಕೈಫ್ ತಮ್ಮ ಮಗುವಿಗೆ ''ವಿಹಾನ್ ಕೌಶಲ್'' ಎಂದು ಹೆಸರು ಇಟ್ಟಿದ್ದಾರೆ. ಪ್ರಾರ್ಥನೆಗಳು ಫಲಿಸಿವೆ. ಬದುಕು ಸುಂದರವಾಗಿದೆ. ನಮ್ಮ ಬದುಕು ಬದಲಾಗಿದೆ. ಪದಗಳನ್ನು ಮೀರಿದ ಕೃತಜ್ಞತೆಗಳು ಎಂದು ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ತಮ್ಮ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಖುಷಿಯನ್ನು ಹಂಚಿಕೊಂಡಿದ್ದಾರೆ.
ಸದ್ಯ ಮಗನ ನಾಮಕರಣ ಮಾಡಿದ ವಿಚಾರವನ್ನು ಇಬ್ಬರು ಹಂಚಿಕೊಂಡ ಬೆನ್ನಲ್ಲೇ ಹಲವರು ಈ ಜೋಡಿಗೆ ಶುಭಾಶಯ ಹೇಳುತ್ತಿದ್ದಾರೆ. ಕೇವಲ ಜನಸಾಮಾನ್ಯರು ಮಾತ್ರವಲ್ಲದೇ ಸೆಲೆಬ್ರಿಟಿಗಳು ಕೂಡ ಈ ಪೋಸ್ಟ್ಗೆ ಕಮೆಂಟ್ ಮಾಡಿದ್ದಾರೆ. ಪರಿಣೀತಿ ಚೋಪ್ರಾ.. ಭೂಮಿ ಪೆಡ್ನೇಕರ್.. ಸಿದ್ಧಾಂತ್ ಚತುರ್ವೇದಿ.. ರಿಚಾ ಚಡ್ಡಾ..ಹೃತಿಕ್ ರೋಷನ್.. ರಾಜ್‌ಕುಮಾರ್ ರಾವ್..ರಕುಲ್ ಪ್ರೀತ್ ಸಿಂಗ್.. ಸೋನಮ್ ಕಪೂರ್.. ಫರ್ಹಾ ಖಾನ್.. ಜೋಯಾ ಅಖ್ತರ್..ನೀಲ್ ನಿತಿನ್ ಮುಖೇಶ್.. ದಿಯಾ ಮಿರ್ಜಾ.. ಹೀಗೆ ಹಲವಾರು ಜನ ಕಮೆಂಟ್ ಮಾಡಿದ್ದಾರೆ.

ಅಂದ್ಹಾಗೇ ವಿಹಾನ್ ಸಂಸ್ಕ್ರತ ಮೂಲದ ಪದ. ಸೂರ್ಯೋದಯದ ಮೊದಲ ಕಿರಣ ಅಥವಾ ಹೊಸ ಆರಂಭ ಎಂದರ್ಥ. ಮಗನ ಆಗಮನದಿಂದ ತಮ್ಮ ಬದುಕಿನಲ್ಲಿ ಹೊಸದೊಂದು ಅಧ್ಯಾಯ ಆರಂಭವಾಗಿದೆ ಎಂಬರ್ಥದಲ್ಲಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಈ ಹೆಸರನ್ನು ಆಯ್ಕೆ ಮಾಡಿದ್ದರು ಮಾಡಿರಬಹುದು. ವಿಶೇಷ ಅಂದರೆ ಈ ಹೆಸರಿಗೂ ಮತ್ತು ವಿಕ್ಕಿ ಕೌಶಲ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ''ಉರಿ'' ನಡುವೆ ಸಂಬಂಧ ಇದೆ.
ಹೌದು, ಎಲ್ಲರಿಗೆ ಗೊತ್ತಿರುವಂತೆ ''ಉರಿ'' ವಿಕ್ಕಿ ಕೌಶಲ್ ವೃತ್ತಿ ಬದುಕಿಗೆ ಮಹತ್ತರವಾದ ತಿರುವು ನೀಡಿದ ಚಿತ್ರ. ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ವಿಹಾನ್ ಶೆರ್ಗಿಲ್ ಎಂಬ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದ ಮೂಲಕ ಮನೆ ಮಾತಾದರು. ಜನ ಮನ ಗೆಲ್ಲುವುದಲ್ಲದೇ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ 2019ರಲ್ಲಿಯೇ ಈ ಚಿತ್ರ ₹ 244.14 ಕೋಟಿಯನ್ನು ಕೇವಲ ಭಾರತದಲ್ಲಿ ಗಳಿಸಿತ್ತು.
ಇದೀಗ ತಮ್ಮ ಬದುಕಿಗೆ ತಿರುವು ನೀಡಿದ ಪಾತ್ರದ ಹೆಸರನ್ನೇ ವಿಕ್ಕಿ ಕೌಶಲ್ ತಮ್ಮ ಮಗನಿಗೆ ಇಟ್ಟಿದ್ದಾರೆ. ಈ ಹಿನ್ನೆಲೆ ಹಲವರು ''ಉರಿ'' ಚಿತ್ರವನ್ನು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ನೆನಪು ಮಾಡಿಕೊಳ್ತಿದ್ದಾರೆ. ''ಉರಿ'' ಕೇವಲ ವಿಕ್ಕಿ ಕೌಶಲ್‌ಗೆ ಮಾತ್ರವಲ್ಲ ಕತ್ರಿನಾ ಕೈಫ್‌ಗೆ ಕೂಡ ತುಂಬಾ ವಿಶೇಷವಾದ ಸಿನಿಮಾ ಎನ್ನುವುದು ಈ ಮೂಲಕ ಗೊತ್ತಾಗುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.


Click it and Unblock the Notifications











