ಸಿದ್ದಾರ್ಥ್ - ಕಿಯಾರಾ ಗುಪ್ತ್ ಗುಪ್ತ್ ಮದುವೆ: ಅಷ್ಟಕ್ಕೂ ಸಿದ್ದ್‌ಕಿಯಾರಾ ಜೋಡಿ ಲವ್ ಸ್ಟೋರಿ ಶುರುವಾಗಿದ್ಹೇಗೆ?

ಬಾಲಿವುಡ್ ಜೋಡಿ ಹಕ್ಕಿ ಕಿಯಾರಾ ಅದ್ವಾನಿ ಹಾಗೂ ಸಿದ್ದಾರ್ಥ್ ಮಲ್ಹೋತ್ರಾ ಮದುವೆ ಶಾಸ್ತ್ರಗಳು ನಡೀತಿದೆ. ಜೈಸಲ್ಮೇರ್‌ನ ಸೂರ್ಯಘಡ್ ಪ್ಯಾಲೇಸ್ ಹೋಟೆಲ್‌ನಲ್ಲಿ ನಡೆಯುತ್ತಿರುವ ಬಹಳ ಅದ್ಧೂರಿಯಾಗಿ ಮದುವೆ ನಡೆಯಲಿದೆ. ಇಂದು ನಡೆಯಬೇಕಿದ್ದ ಮದುವೆಯನ್ನು ನಾಳೆ ಮುಂದೂಡಿದ್ದಾರೆ ಎನ್ನಲಾಗುತ್ತಿದೆ.

ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಮದುವೆ ಸಮಾರಂಭದಲ್ಲಿ ಭಾಗಿಯಾಗಿ ಬಾಲಿವುಡ್ ಕ್ಯೂಟ್ ಜೋಡಿಗೆ ಶುಭ ಹಾರೈಸಲಿದ್ದಾರೆ. 65 ಎಕರೆ ವಿಸ್ತೀರ್ಣದ ಪ್ಯಾಲೇಸ್‌ನಲ್ಲಿ ಬಹಳ ಆಡಂಬರದಿಂದ ಮದುವೆ ಶಾಸ್ತ್ರಗಳು ನಡೆಯಲಿವೆ. ಹೋಟೆಲ್‌ಗೆ ಭಾರೀ ಭದ್ರತೆ ಕೂಡ ಒದಗಿಸಲಾಗಿದೆ. ಬಹಳ ಅದ್ಧೂರಿಯಾಗಿ ಜೋಡಿ ಡೆಸ್ಟಿನೇಷನ್ ಮ್ಯಾರೇಜ್ ಪ್ಲ್ಯಾನ್ ಮಾಡಿಕೊಂಡಿದೆ. ಈಗಾಗಲೇ ಸಿದ್ಧಾರ್ಥ್ ಹಾಗೂ ಕಿಯಾರಾ ಕುಟುಂಬ ಸಮೇತರಾಗಿ ಮದುವೆ ನಡೆಯುವ ಪ್ಯಾಲೇಸ್‌ ತಲುಪಿದ್ದಾರೆ. ಪ್ಯಾಲೇಸ್‌ನಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮದುವೆಯ ಫೋಟೊಗಳು, ವಿಡಿಯೋಗಳು ಲೀಕ್ ಆಗುವ ಕಾರಣಕ್ಕೆ ಇಂತಹ ನಿರ್ಧಾರ ತೆಗೆದುಕೊಂಡಿದ್ದಾರೆ.

ಅಷ್ಟಕ್ಕೂ ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ನಡುವೆ ಪರಿಚಯ, ಸ್ನೇಹ ಶುರುವಾಗಿದ್ದು ಹೇಗೆ? ಇಬ್ಬರ ಪ್ರೀತಿ ಶುರುವಾಗಿದ್ದು ಯಾವಾಗ? ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. ಅದರ ಕಂಪ್ಲೀಟ್ ವಿವರ ಮುಂದೆ ಇದೆ ಓದಿ.

ಪಾರ್ಟಿಯೊಂದರಲ್ಲಿ ಇಬ್ಬರ ಭೇಟಿ

ಪಾರ್ಟಿಯೊಂದರಲ್ಲಿ ಇಬ್ಬರ ಭೇಟಿ

ಅಂದಹಾಗೆ ಪಾರ್ಟಿಯೊಂದರಲ್ಲಿ ಮೊದಲ ಬಾರಿಗೆ ನಟ ಸಿದ್ದಾರ್ಥ್ ಮಲ್ಹೋತ್ರಾ ಹಾಗೂ ಕಿಯಾರಾ ಅದ್ವಾನಿ ಭೇಟಿ ಆಗಿದ್ದರು. 'ಲಸ್ಟ್ ಸ್ಟೋರಿಸ್' ಆಂಥಾಲಜಿ ಸಿನಿಮಾ ಶೂಟಿಂಗ್ ಮುಗಿಸಿದ ದಿನ ಒಂದು ಪಾರ್ಟಿ ಏರ್ಪಡಿಸಲಾಗಿತ್ತು. ಆ ಚಿತ್ರದಲ್ಲಿ ಮೇಘಾ ಉಪಾಧ್ಯಾಯ್ ಎನ್ನುವ ಪಾತ್ರದಲ್ಲಿ ಕಿಯಾರಾ ನಟಿಸಿದ್ದರು. ಆ ಪಾರ್ಟಿಗೆ ಬಂದಿದ್ದ ಸಿದ್ಧಾರ್ಥ್‌ನ ಮೊದಲ ಬಾರಿ ಭೇಟಿ ಮಾಡಿದ್ದರು. ಇಬ್ಬರ ನಡುವೆ ಮಾತುಕತೆ ನಡೆಯಿತು. ಮೊಬೈಲ್ ಸಂಖ್ಯೆಗಳನ್ನು ವಿನಿಮಯ ಮಾಡಿಕೊಂಡಿದ್ದರು.

'ಶೇರ್‌ಶಾ' ಚಿತ್ರದಲ್ಲಿ ಒಟ್ಟಿಗೆ ನಟನೆ

'ಶೇರ್‌ಶಾ' ಚಿತ್ರದಲ್ಲಿ ಒಟ್ಟಿಗೆ ನಟನೆ

ಪಾರ್ಟಿಯಲ್ಲಿ ಶುರುವಾದ ಪರಿಚಯ ಮುಂದೆ ಸ್ನೇಹವಾಗಿ ಬದಲಾಗಿತ್ತು. ಅದು ಪ್ರೀತಿಗೆ ತಿರುಗಲು ಬಹಳ ಸಮಯ ಬೇಕಾಗಲಿಲ್ಲ. ಕಿಯಾರಾ ಮತ್ತು ಸಿದ್ದಾರ್ಥ್ ಇಬ್ಬರೂ ಒಟ್ಟಿಗೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಹೋಗಿದ್ದರು. ಅವರ ಪ್ರವಾಸದ ಸಫಾರಿ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಆಗ ಶುರುವಾಯಿತು ನೋಡಿ ಇಬ್ಬರ ನಡುವೆ ಅಫೇರ್ ಇದೆ ಎನ್ನುವ ವದಂತಿ. ನಂತರ 'ಶೇರ್‌ಶಾ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಆ ಸಿನಿಮಾ ಸೆಟ್‌ಗಳಲ್ಲಿ ಇಬ್ಬರ ನಡುವಿನ ಪ್ರೀತಿ ಮತ್ತಷ್ಟು ಮಾಗಿತ್ತು. ಮುಂದೆ ಕದ್ದು ಮುಚ್ಚಿ ಸುತ್ತಾಡಲು ಶುರು ಮಾಡಿದ್ದರು.

ಸಿದ್ಧು ಸ್ನೇಹಿತನಿಗಿಂತ ಹೆಚ್ಚು

ಸಿದ್ಧು ಸ್ನೇಹಿತನಿಗಿಂತ ಹೆಚ್ಚು

ಕಾಫಿ ವಿತ್ ಕರಣ್ ಶೋನಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗಿನ ಲವ್ವಿ ಡವ್ವಿ ಬಗ್ಗೆ ಕರಣ್ ಜೋಹರ್ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಆಗ "ಆ ಸುದ್ದಿಯನ್ನು ನಾನು ಸಮರ್ಥಿಸುವುದು ಇಲ್ಲ, ನಿರಾಕರಿಸುವುದೂ ಇಲ್ಲ" ಎಂದು ಕಿಯಾರಾ ಪ್ರತಿಕ್ರಿಯಿಸಿದ್ದರು. ಆದರೆ "ಸಿದ್ಧಾರ್ಥ್ ನನ್ನ ಆತ್ಮೀಯ ಸ್ನೇಹಿತನಿಗಿಂತ ಹೆಚ್ಚು" ಎಂದು ಹೇಳಿದರು. ಈ ಕಾಮೆಂಟ್‌ನಿಂದ ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವುದು ಸ್ಪಷ್ಟವಾಗಿತ್ತು.

ಹಸೆಮಣೆ ಏರಲು ಜೋಡಿ ಸಿದ್ಧ

ಹಸೆಮಣೆ ಏರಲು ಜೋಡಿ ಸಿದ್ಧ

ಜನವರಿ 16 ಸಿದ್ಧಾರ್ಥ್ ಮಲ್ಹೋತ್ರಾ ಹುಟ್ಟುಹಬ್ಬ. ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಕಿಯಾರಾ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಇಬ್ಬರೂ ಒಟ್ಟಿಗೆ ಇರುವ ಫೋಟೊವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ನೊಂದಿಗೆ, ಸಿದ್ಧಾರ್ಥ್ ಜೊತೆಗಿನ ಸಂಬಂಧದ ಬಗ್ಗೆ ಕಿಯಾರಾ ಬಹುತೇಕ ಸ್ಪಷ್ಟನೆ ನೀಡಿದ್ದರು. ಕಳೆದ ತಿಂಗಳಿನಿಂದ ಇಬ್ಬರ ಮದುವೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೀತಿದೆ. ಇತ್ತೀಚೆಗೆ ಸಿದ್ಧಾರ್ಥ್ - ಕಿಯಾರಾ ತಮ್ಮ ಮದುವೆಯ ವದಂತಿಗಳನ್ನು ಪರೋಕ್ಷವಾಗಿ ನಿರಾಕರಿಸಿದರು. ಕೊನೆಗೂ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ.

ಎರಡು ಸಿನಿಮಾಗಳಲ್ಲಿ ಕಿಯಾರಾ ಬ್ಯುಸಿ

ಎರಡು ಸಿನಿಮಾಗಳಲ್ಲಿ ಕಿಯಾರಾ ಬ್ಯುಸಿ

ಸದ್ಯ ಕಿಯಾರಾ, ರಾಮ್ ಚರಣ್ ಜೊತೆ 'RC15' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಶಂಕರ್ ನಿರ್ದೇಶನದ ಈ ಅದ್ಧೂರಿ ಪ್ಯಾನ್ ಇಂಡಿಯಾ ಚಿತ್ರದ ಶೂಟಿಂಗ್ ನಡೆಯುತ್ತಿದೆ. ಈ ಹಿಂದೆ ರಾಮ್ ಚರಣ್- ಕಿಯಾರಾ ಜೋಡಿ 'ವಿನಯ ವಿಧೇಯ ರಾಮ' ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. 'ಭರತ್ ಅನೆ ನೇನು' ಚಿತ್ರದಲ್ಲಿ ಮಹೇಶ್ ಜೋಡಿಯಾಗಿ ಮಿಂಚಿದ್ದರು. ಬಾಲಿವುಡ್ ಬಿಟ್ಟರೆ ಟಾಲಿವುಡ್‌ನಲ್ಲಿ ಕಿಯಾರಾ ಕ್ರೇಜ್ ಜೋರಾಗಿದೆ.

More from Filmibeat

English summary
How Sidharth Malhotra and Kiara Advani fell in love? Sidharth Malhotra and Kiara Advani are all set to tie the knot on February 7. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X