ಜತೆಯಾಗಲಿದ್ದಾರೆ ದೀಪಿಕಾ ಪಡುಕೋಣೆ-ಹೃತಿಕ್ ರೋಷನ್: ಸಿನಿಮಾ ಹೆಸರು ಘೋಷಣೆ

ಇದೇ ಮೊದಲ ಬಾರಿಗೆ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಲಿದ್ದಾರೆ. ಇಬ್ಬರು ಸ್ಟಾರ್ ನಟರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ ನಿರೀಕ್ಷೆಗಳು ಹೆಚ್ಚಿಗೆ ಇವೆ.

ಇಂದು ಹೃತಿಕ್ ರೋಷನ್ ಹುಟ್ಟುಹಬ್ಬವಿದ್ದು, ಇದೇ ದಿನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಹೆಸರು ಘೋಷಣೆ ಮಾಡಲಾಗಿದೆ.

ಹೃತಿಕ್-ದೀಪಿಕಾ ನಟಿಸುತ್ತಿರುವ ಈ ಹೊಸ ಸಿನಿಮಾಕ್ಕೆ 'ಫೈಟರ್' ಎಂದು ಹೆಸರಿಡಲಾಗಿದೆ. ಹೃತಿಕ್ ರೋಷನ್ ಅವರ ಹಿಟ್ ಸಿನಿಮಾ 'ವಾರ್' ಮತ್ತು 'ಬ್ಯಾಂಗ್-ಬ್ಯಾಂಗ್' ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರೇ ಈ ಸಿನಿಮಾವನ್ನು ಸಹ ನಿರ್ದೇಶಿಸಲಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕರು ಸಹ ಅವರೇ.

 Hritik Roshan And Deepika Padukone Acting Together For First Time

ಸಿನಿಮಾದಲ್ಲಿ ಹೃತಿಕ್ ರೋಷನ್ ಫೈಟರ್ ಜೆಟ್‌ ಪೈಲೆಟ್ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಪಾತ್ರ ಯಾವುದಾಗಿರಲಿದೆ ಎಂದು ಇನ್ನೂ ಬಹಿರಂಗಪಡಿಸಿಲ್ಲ. ನಿರ್ದೇಶಕರಾಗಿದ್ದ ಸಿದ್ಧಾರ್ಥ್ ಆನಂದ್ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ.

ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಪ್ರಸ್ತುತ ಬೇರೆ-ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವುಗಳ ಚಿತ್ರೀಕರಣದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ. ಸಿನಿಮಾವು 2022 ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ.

More from Filmibeat

English summary
Hritik Roshan and Deepika Padukone acting together for first time in 'Fighter' movie. Directing by Siddharth Anand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X