twitter
    For Quick Alerts
    ALLOW NOTIFICATIONS  
    For Daily Alerts

    ಜತೆಯಾಗಲಿದ್ದಾರೆ ದೀಪಿಕಾ ಪಡುಕೋಣೆ-ಹೃತಿಕ್ ರೋಷನ್: ಸಿನಿಮಾ ಹೆಸರು ಘೋಷಣೆ

    |

    ಇದೇ ಮೊದಲ ಬಾರಿಗೆ ನಟ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಒಟ್ಟಿಗೆ ನಟಿಸಲಿದ್ದಾರೆ. ಇಬ್ಬರು ಸ್ಟಾರ್ ನಟರು ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಕಾರಣ ನಿರೀಕ್ಷೆಗಳು ಹೆಚ್ಚಿಗೆ ಇವೆ.

    ಇಂದು ಹೃತಿಕ್ ರೋಷನ್ ಹುಟ್ಟುಹಬ್ಬವಿದ್ದು, ಇದೇ ದಿನ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾದ ಹೆಸರು ಘೋಷಣೆ ಮಾಡಲಾಗಿದೆ.

    ದೀಪಿಕಾ ಪಡುಕೋಣೆ ಬರ್ತ್‌ಡೇ ಪಾರ್ಟಿಯಲ್ಲಿ ತಾರೆಯರ ಹಿಂಡುದೀಪಿಕಾ ಪಡುಕೋಣೆ ಬರ್ತ್‌ಡೇ ಪಾರ್ಟಿಯಲ್ಲಿ ತಾರೆಯರ ಹಿಂಡು

    ಹೃತಿಕ್-ದೀಪಿಕಾ ನಟಿಸುತ್ತಿರುವ ಈ ಹೊಸ ಸಿನಿಮಾಕ್ಕೆ 'ಫೈಟರ್' ಎಂದು ಹೆಸರಿಡಲಾಗಿದೆ. ಹೃತಿಕ್ ರೋಷನ್ ಅವರ ಹಿಟ್ ಸಿನಿಮಾ 'ವಾರ್' ಮತ್ತು 'ಬ್ಯಾಂಗ್-ಬ್ಯಾಂಗ್' ನಿರ್ದೇಶಿಸಿದ್ದ ಸಿದ್ಧಾರ್ಥ್ ಆನಂದ್ ಅವರೇ ಈ ಸಿನಿಮಾವನ್ನು ಸಹ ನಿರ್ದೇಶಿಸಲಿದ್ದಾರೆ. ಅಷ್ಟೇ ಅಲ್ಲದೆ ನಿರ್ಮಾಪಕರು ಸಹ ಅವರೇ.

     Hritik Roshan And Deepika Padukone Acting Together For First Time

    ಸಿನಿಮಾದಲ್ಲಿ ಹೃತಿಕ್ ರೋಷನ್ ಫೈಟರ್ ಜೆಟ್‌ ಪೈಲೆಟ್ ಪಾತ್ರದಲ್ಲಿ ನಟಿಸಲಿದ್ದಾರೆ. ದೀಪಿಕಾ ಪಡುಕೋಣೆ ಪಾತ್ರ ಯಾವುದಾಗಿರಲಿದೆ ಎಂದು ಇನ್ನೂ ಬಹಿರಂಗಪಡಿಸಿಲ್ಲ. ನಿರ್ದೇಶಕರಾಗಿದ್ದ ಸಿದ್ಧಾರ್ಥ್ ಆನಂದ್ ಇದೇ ಮೊದಲ ಬಾರಿಗೆ ನಿರ್ಮಾಪಕರಾಗಿ ಬದಲಾಗುತ್ತಿದ್ದಾರೆ.

    ದೀಪಿಕಾ ಪಡುಕೋಣೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ 'ಸೂಪರ್ ಸ್ಟಾರ್' ಎಂದು ಕರೆದ ಪ್ರಭಾಸ್ದೀಪಿಕಾ ಪಡುಕೋಣೆ ಹುಟ್ಟುಹಬ್ಬಕ್ಕೆ ವಿಶ್ ಮಾಡಿ 'ಸೂಪರ್ ಸ್ಟಾರ್' ಎಂದು ಕರೆದ ಪ್ರಭಾಸ್

    ದೀಪಿಕಾ ಪಡುಕೋಣೆ ಮತ್ತು ಹೃತಿಕ್ ರೋಷನ್ ಪ್ರಸ್ತುತ ಬೇರೆ-ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಅವುಗಳ ಚಿತ್ರೀಕರಣದ ಬಳಿಕ ಈ ಸಿನಿಮಾ ಸೆಟ್ಟೇರಲಿದೆ. ಸಿನಿಮಾವು 2022 ರ ಸೆಪ್ಟೆಂಬರ್ ತಿಂಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗಿದೆ.

    English summary
    Hritik Roshan and Deepika Padukone acting together for first time in 'Fighter' movie. Directing by Siddharth Anand.
    Monday, January 11, 2021, 9:54
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X