Fighter box office: ಹಳೆಯ ಸಿನಿಮಾಗಳಿಗಿಂತ ಕಡಿಮೆ ಗಳಿಸಿತಾ ಹೃತಿಕ್ ರೋಷನ್ ನಟನೆಯ ಫೈಟರ್?

ಗಣರಾಜ್ಯೋತ್ಸವಕ್ಕೆ ಗಿಫ್ಟ್ ಆಗಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ 'ಫೈಟರ್' ಜನವರಿ 25 ರಂದು ಚಿತ್ರಮಂದಿರಗಳಿಗೆ ಲಗ್ಗೆಯಿಟ್ಟಿದೆ. ಸಾಲು ಸಾಲು ರಜೆಗಳ ಕಾರಣಕ್ಕೆ ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಭರ್ಜರಿ ಸದ್ದು ಮಾಡುತ್ತದೆ ಎಂಬ ನಿರೀಕ್ಷೆಯಿತ್ತು. ಮೊದಲ ದಿನವೇ 'ಫೈಟರ್' ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ.

ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ಕ್ ಪ್ರಕಾರ, ಸಿದ್ಧಾರ್ಥ್ ಆನಂದ್ ಅವರ ನಿರ್ದೇಶನದ 'ಫೈಟರ್' ಬಿಡುಗಡೆಯಾದ ಮೊದಲ ದಿನದಲ್ಲಿ 22 ಕೋಟಿ ರೂಪಾಯಿ ಗಳಿಸಿದೆ. ವೈಮಾನಿಕ ಸಾಹಸ ಚಿತ್ರವು ಬಿಡುಗಡೆ ದಿನ (ಜನವರಿ 25 ) ಒಟ್ಟಾರೆ 21.17 ಪ್ರತಿಶತದಷ್ಟು ಹಿಂದಿ ಆಕ್ಯುಪೆನ್ಸನ್ನು ಹೊಂದಿತ್ತು ಎಂದು ವರದಿಯಾಗಿದೆ. ಚೆನ್ನೈನಲ್ಲಿ ಶೇಕಡಾ 59 ರಷ್ಟು ಅತ್ಯಧಿಕ ಆಕ್ಯುಪೆನ್ಸಿಯನ್ನು ದಾಖಲಿಸಿದೆ. ಹೈದರಾಬಾದ್, ಮುಂಬೈ, ದೆಹಲಿ ಎನ್‌ಸಿಆರ್ ಮತ್ತು ಜೈಪುರದಂತಹ ನಗರಗಳು ನಂತರದ ಸ್ಥಾನದಲ್ಲಿವೆ.

Hrithik Roshan and Deepika Padukone starrer Fighter 1st day box office collection

'ವಾರ್' ದಾಖಲೆ ಮುರಿಯದ 'ಫೈಟರ್'

ಹೃತಿಕ್ ರೋಷನ್ ಅವರ ಕೊನೆಯ ಚಿತ್ರ 'ವಿಕ್ರಮ್ ವೇದಾ'ಕ್ಕಿಂತ ಫೈಟರ್ ತನ್ನ ಆರಂಭಿಕ ದಿನದಂದು ಹೆಚ್ಚು ಕಲೆಕ್ಷನ್ ಮಾಡಿದೆ. ಆದರೂ ಕೂಡ ಇದು ಅವರ 2019 ರ ಬ್ಲಾಕ್‌ಬಸ್ಟರ್ ಸಿನಿಮಾ 'ವಾರ್'‌ನ ಮೊದಲ ದಿನದ ಗಲ್ಲಾಪೆಟ್ಟಿಗೆಯ ದಾಖಲೆಯನ್ನು ಮುರಿಯಲು ಸಾಧ್ಯವಾಗಿಲ್ಲ. ವೈಆರ್‌ಎಫ್‌ನ ಸ್ಪೈ ಯೂನಿವರ್ಸ್‌ನ ಭಾಗವಾಗಿದ್ದ ಮತ್ತು ಸಿದ್ಧಾರ್ಥ್ ಆನಂದ್ ನಿರ್ದೇಶಿಸಿದ್ದ ಆಕ್ಷನ್ ಚಲನಚಿತ್ರವು ತನ್ನ ಆರಂಭಿಕ ದಿನದಲ್ಲಿ 53.35 ಕೋಟಿ ರೂಪಾಯಿ ಗಳಿಸಿತ್ತು.

ಅದೇ ವರ್ಷದಲ್ಲಿ, ನಟ ಹೃತಿಕ್ ರೋಷನ್ 'ಸೂಪರ್ 30' ನಲ್ಲಿ ನಟಿಸಿದ್ದರು, ಅದು ಮೊದಲ ದಿನ 11 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಬಳಿಕ ವಿಶ್ವಾದ್ಯಂತ 210 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತು. ಇನ್ನು, ಫೈಟರ್ ಹೃತಿಕ್ ರೋಷನ್ ಅವರ ಐದನೇ ಅತಿ ಹೆಚ್ಚು ಓಪನಿಂಗ್ ಪಡೆದ ಸಿನಿಮಾವಾಗಿ ದಾಖಲೆ ಬರೆದಿದೆ.

Hrithik Roshan and Deepika Padukone starrer Fighter 1st day box office collection

ವಾರ್ 53.35 ಕೋಟಿ, ಬ್ಯಾಂಗ್ ಬ್ಯಾಂಗ್ 27 ಕೋಟಿ ರೂ., ಕ್ರಿಶ್ 3 ರೂ. 25 ಕೋಟಿ ಮತ್ತು ಅಗ್ನಿಪಥ್ 22.8 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈಗ ಫೈಟರ್ 22 ಕೋಟಿ ಗಳಿಸಿ ಐದನೇ ಸ್ಥಾನದಲ್ಲಿದೆ.

ಫೈಟರ್

Sacnilk ಪ್ರಕಾರ, ಫೈಟರ್ ಈಗಾಗಲೇ ಎರಡನೇ ದಿನದ (ಗಣರಾಜ್ಯೋತ್ಸವ) ಮುಂಗಡ ಮಾರಾಟದಲ್ಲಿ 13.2 ಕೋಟಿ ಮೊತ್ತದ ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಆರಂಭಿಕ ದಿನದಲ್ಲಿ ಫೈಟರ್ 2.79 ಲಕ್ಷಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಭಾರತದಲ್ಲಿ ಒಟ್ಟು 8.4 ಕೋಟಿ ರೂಪಾಯಿ ಟಿಕೆಟ್ ಮಾರಾಟವಾಗಿದೆ. ಫೈಟರ್‌ನಲ್ಲಿ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಸಂಜೀದಾ ಶೇಖ್, ರಿಷಬ್ ಸಾಹ್ನಿ ಮತ್ತು ಅಕ್ಷಯ್ ಒಬೆರಾಯ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Siddharth Anand's Fighter 1st day box office collection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X