ಗಲ್ಫ್ ರಾಷ್ಟ್ರಗಳಲ್ಲಿ ಹೃತಿಕ್ ರೋಷನ್-ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಬ್ಯಾನ್!: ಕಾರಣ ಇದೇನಾ?

ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಸಿನಿಮಾ ಮೇಲೆ ಚಿತ್ರರಂಗ ಭಾರಿ ನಿರೀಕ್ಷೆ ಇಟ್ಟುಕೊಂಡಿದೆ. ಅಭಿಮಾನಿಗಳು ಚಿತ್ರ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಜನವರಿ 25 ರಂದು ಥಿಯೇಟರ್‌ಗಳಿಗೆ ಸಿನಿಮಾ ಬರಲಿದೆ. ಇದೇ ವೇಳೆ ಗಲ್ಫ್ ದೇಶಗಳಲ್ಲಿ ವಾಸಿಸುವ ಅವರ ಫ್ಯಾನ್ಸ್‌ಗೆ ಬ್ಯಾಡ್ ನ್ಯೂಸ್ ಇದೆ.

ಹೌದು... ಈ ಗಣರಾಜ್ಯೋತ್ಸವದ ಮುನ್ನ ಬಿಡುಗಡೆಯಾಗುತ್ತಿರುವ 'ಫೈಟರ್' ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿರುವ ವೇಳೆ, ಯುಎಇ ಹೊರತುಪಡಿಸಿ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಫೈಟರ್ ಬಿಡುಗಡೆಯನ್ನು ನಿ‍ಷೇಧಿಸಲಾಗಿದೆ ಎಂಬ ಮಾಹಿತಿಯನ್ನು ನಿರ್ಮಾಪಕ ಗಿರೀಶ್ ಜೋಹರ್ ಹಂಚಿಕೊಂಡಿದ್ದಾರೆ.

Hrithik Roshan and Deepika Padukone starrer Fighter banned in Gulf countries

ಫೈಟರ್ ಬಿಡುಗಡೆ

ಸಿದ್ಧಾರ್ಥ್ ಆನಂದ್ ನಿರ್ದೇಶನದ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ನೇತೃತ್ವದ ಫೈಟರ್ 2024 ರ ಜನವರಿ 25 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಚಿತ್ರದಲ್ಲಿ ಅನಿಲ್ ಕಪೂರ್, ಅಕ್ಷಯ್ ಒಬೆರಾಯ್ ಮತ್ತು ಕರಣ್ ಸಿಂಗ್ ಗ್ರೋವರ್ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ.

ಮೊದಲ ಬಾರಿಗೆ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಫೈಟರ್‌ಗಾಗಿ ಒಂದಾಗಿದ್ದಾರೆ. ಈಗಾಗಲೇ ಸಿನಿಮಾ ಅಡ್ವಾನ್ಸ್ ಬುಕ್ಕಿಂಗ್ ಕೂಡ ಉತ್ತಮವಾಗಿದ್ದು, ಸಿನಿಪ್ರೇಮಿಗಳ ಉತ್ಸಾಹ ಕಾಣುತ್ತಿದೆ. ಆದರೆ, ಚಿತ್ರತಂಡಲ್ಲೆ ಗಲ್ಫ್ ರಾಷ್ಟ್ರಗಳು ಶಾಕ್ ನೀಡಿದೆ. ಯುಎಇ ಹೊರತುಪಡಿಸಿ ಎಲ್ಲಾ ಗಲ್ಫ್ ದೇಶಗಳಲ್ಲಿ ಸಿನಿಮಾವನ್ನು ನಿಷೇಧಿಸಲಾಗಿದೆ.

ಗಲ್ಫ್ ರಾಷ್ಟ್ರಗಳಲ್ಲಿ ಫೈಟರ್ ಬ್ಯಾನ್

ಯುಎಇ ಹೊರತುಪಡಿಸಿ ಎಲ್ಲಾ ಗಲ್ಫ್ ರಾಷ್ಟ್ರಗಳಲ್ಲಿ ಫೈಟರ್ ಬಿಡುಗಡೆಯನ್ನು ನಿರಾಕರಿಸಲಾಗಿದೆ. ನಿರ್ದೇಶಕ ಸಿದ್ಧಾರ್ಥ್ ಆನಂದ್ ಮತ್ತು ಚಿತ್ರ ತಂಡವು ಜಿಸಿಸಿ ಸೆನ್ಸಾರ್‌ನಿಂದ ತಮ್ಮ ಚಿತ್ರಕ್ಕೆ ಅನುಮತಿ ಪಡೆಯುವಲ್ಲಿ ವಿಫಲವಾಗಿದೆ. ಜನವರಿ 10, 2024 ರಂದು ಸೆನ್ಸಾರ್ ಸ್ಕ್ರೀನಿಂಗ್ ನಡೆಸಲಾಗಿದೆ. ಆದರೆ, ಜನವರಿ 23 ರಂದು 'ಫೈಟರ್' ಬಿಡುಗಡೆ ಇಲ್ಲ ಎಂದು ಮಾಹಿತಿ ದೊರಕಿದೆ. ಇದರಿಂದ ನಿರ್ಮಾಪಕರಿಗೆ ಸಾಕಷ್ಟು ನಷ್ಟವಾಗಲಿದೆ.

Hrithik Roshan and Deepika Padukone starrer Fighter banned in Gulf countries

GCC ಸೆನ್ಸಾರ್‌ಗಳಿಂದ ಕ್ಲಿಯರೆನ್ಸ್ ಸಿಗದ ಕಾರಣ 'ಫೈಟರ್' ಗಲ್ಫ್ ರಾಷ್ಟ್ರಗಳಲ್ಲಿ ಬಿಡುಗಡೆಯಾಗುವುದಿಲ್ಲ. ಇದಕ್ಕೆ ನಿಖರವಾದ ಕಾರಣ ತಿಳಿದಿಲ್ಲವಾದರೂ, ಸೆನ್ಸಾರ್ ಮಂಡಳಿಯು ಸಿನಿಮಾದಲ್ಲಿ ತುಂಬಾ ಗೊಂದಲದ ಅಥವಾ ಆಕ್ಷೇಪಾರ್ಹ ದೃಶ್ಯಗಳು ಮತ್ತು ಸಂಭಾಷಣೆಯಿದೆ ಎಂದು ಹೇಳಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಇನ್ನು, ಇತ್ತೀಚೆಗಷ್ಟೇ ಸಲ್ಮಾನ್ ಖಾನ್ ನಟನೆಯ 'ಟೈಗರ್ 3' ಸಿನಿಮಾವನ್ನು ಕುವೈತ್ ಮತ್ತು ಕತಾರ್‌ನಲ್ಲಿ ನಿಷೇಧಿಸಲಾಗಿತ್ತು. GCC ಸೆನ್ಸಾರ್‌ಗಳಿಂದ ಗಲ್ಫ್ ರಾಷ್ಟ್ರಗಳಲ್ಲಿ ಕ್ಲಿಯರೆನ್ಸ್ ನಿರಾಕರಣೆಯಿಂದಾಗಿ 'ಫೈಟರ್' ಸುಮಾರು 500k ನಿಂದ 1 ಮಿಲಿಯನ್ ಡಾಲರ್‌ಗಳ ವ್ಯವಹಾರವನ್ನು ಕಳೆದುಕೊಳ್ಳಬಹುದು ಎಂದು ಅಂದಾಜಿಸಲಾಗಿದೆ.

ಫೈಟರ್ ಬಾಕ್ಸ್ ಆಫೀಸ್ ಪ್ರಿಡಿಕ್ಷನ್

ಇದುವರೆಗಿನ 'ಫೈಟರ್' ಸಿನಿಮಾದ ಮುಂಗಡ ಬುಕಿಂಗ್‌ಗಳು ಚೆನ್ನಾಗಿದ್ದು, ಮೊದಲ ದಿನಕ್ಕೆ ಸುಮಾರು 70000 ಟಿಕೆಟ್‌ಗಳನ್ನು ಮಾರಾಟ ಮಾಡಿದೆ. ಇದು PVRInox ಮತ್ತು Cinepolis ಗಳಲ್ಲಿ ಸುಮಾರು 1.5-1.75 ಲಕ್ಷ ಟಿಕೆಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಫೈಟರ್‌ನ ಮೊದಲ ಗುರಿಯು ಮೊದಲ ದಿನ ಸುಮಾರು 25 ಕೋಟಿ ರೂಪಾಯಿಗಳನ್ನು ಗಳಿಸುವುದಾಗಿದೆ. ಗಣರಾಜ್ಯೋತ್ಸವದ ಸಂದರ್ಭದಲ್ಲಿ ತನ್ನ ಬಾಕ್ಸ್ ಆಫೀಸ್ ಕಲೆಕ್ಷನ್ ಹೆಚ್ಚು ಮಾಡುವ ಹುಮ್ಮಸ್ಸಿನಲ್ಲಿದೆ.

ಫೈಟರ್

ಸಿದ್ಧಾರ್ಥ್ ಆನಂದ್ ಆಕ್ಷನ್ ಕಟ್ ಹೇಳಿರುವ ಫೈಟರ್ ಸಿನಿಮಾವನ್ನು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹಯೋಗದೊಂದಿಗೆ Viacom18 ಸ್ಟುಡಿಯೋಸ್ ನಿರ್ಮಿಸಿದೆ. ಇದನ್ನು ಭಾರತೀಯ ಸಶಸ್ತ್ರ ಪಡೆಗಳು ಮತ್ತು ಭಾರತೀಯ ವಾಯುಪಡೆಯ ಶೌರ್ಯ, ತ್ಯಾಗ ಮತ್ತು ದೇಶಭಕ್ತಿಗೆ ಸಲ್ಲಿಸಲಾಗುತ್ತಿರುವ ಗೌರವ ಎಂದು ಬಿಂಬಿಸಲಾಗಿದೆ.

More from Filmibeat

English summary
Siddharth Anand's Fighter banned in Gulf countries
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X