ಬಾನೆತ್ತರದಲ್ಲಿ ಹೃತಿಕ್ 'ಫೈಟರ್' ಸಾಹಸ: ಮತ್ತೆ ಬಿಕಿನಿಯಲ್ಲಿ ಬಿಸಿಯೇರಿಸಿದ ದೀಪಿಕಾ

ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ನಟನೆಯ 'ಫೈಟರ್' ಸಿನಿಮಾ ಟೀಸರ್ ರಿಲೀಸ್ ಆಗಿದೆ. ಸಿದ್ದಾರ್ಥ್ ಆನಂದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಆಕ್ಷನ್ ಪ್ಯಾಕ್ಡ್ ಟೀಸರ್ ಧೂಳೆಬ್ಬಿಸಿದೆ. ಹೃತಿಕ್ ಸ್ಕ್ವಾಡ್ರನ್ ಲೀಡರ್ ಆಗಿ ದರ್ಶನ ಕೊಟ್ಟು ಅಭಿಮಾನಿಗಳ ಮನಗೆದ್ದಿದ್ದಾರೆ.

ಅನಿಲ್ ಕಪೂರ್ ಕೂಡ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಮೂವರು ಫೈಟರ್ ಪೈಲೆಟ್ ಯೂನಿಫಾರ್ಮ್‌ನಲ್ಲಿ ಜೆಟ್ ಏರಿ ಅಬ್ಬರಿಸಿದ್ದಾರೆ. 'ಪಠಾಣ್' ಸೂಪರ್ ಸಕ್ಸ್ ಬಳಿಕ ಸಿದ್ದಾರ್ಥ್ ಆನಂದ್ 'ಫೈಟರ್' ಸಿನಿಮಾ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೈ ಜುಮ್‌ ಎನಿಸುವ ಆಕ್ಷನ್ ಸೀಕ್ವೆನ್ಸ್, ಆಗಸದಲ್ಲಿ ಸಾಹಸಮಯ ದೃಶ್ಯಗಳಿಂದ ಟೀಸರ್ ಗಮನ ಸೆಳೆದಿದೆ.

Hrithik Roshan and Deepika Padukone Starrer Fighter Teaser Released

ಹೃತಿಕ್- ದೀಪಿಕಾ ಅಭಿಮಾನಿಗಳಿಗಂತೂ 'ಫೈಟರ್' ಟೀಸರ್ ಕಿಕ್ ಕೊಡುತ್ತಿದೆ. ಇನ್ನು ಸಣ್ಣ ಝಲಕ್‌ನಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟು ಕಾಣಿಸಿಕೊಂಡಿರುವುದನ್ನು ಕೂಡ ನೋಡಬಹುದು. ಈ ಹಿಂದೆ 'ಪಠಾಣ್' ಚಿತ್ರದಲ್ಲಿ ಡಿಪ್ಪಿ ಬಿಕಿನಿ ತೊಟ್ಟಿದ್ದು ಭಾರೀ ವಿವಾದವನ್ನೇ ಸೃಷ್ಟಿಸಿತ್ತು. ಆದರೆ ಸಿನಿಮಾ ರಿಲೀಸ್ ಬಳಿಕ ವಿವಾದ ತಣ್ಣಗಾಗಿತ್ತು. ಅಷ್ಟೆಲ್ಲ ಆದ ಬಳಿಕ ಕೂಡ ಸಿದ್ದಾರ್ಥ್ ತಮ್ಮ ಸಿನಿಮಾಗಳನ್ನು ನಾಯಕಿಯರನ್ನು ತುಂಡುಡುಗೆಯಲ್ಲಿ ತೋರಿಸುವ ಪ್ರಯತ್ನ ಯಾಕೆ ಮಾಡುತ್ತಾರೆ? ಎಂದು ಕೆಲವರು ಕೇಳುತ್ತಿದ್ದಾರೆ.

ಮೊನಾಕಿನಿ ತೊಟ್ಟು ಸಾಗರ ತೀರದಲ್ಲಿ ದೀಪಿಕಾ, ಹೃತಿಕ್ ರೋಷನ್ ಜೊತೆ ರೊಮ್ಯಾನ್ಸ್ ಮಾಡುವ ಝಲಕ್ ಟೀಸರ್‌ನಲ್ಲಿ ಹೈಲೆಟ್ ಆಗಿದೆ. ಇನ್ನು ಇಬ್ಬರ ಲಿಪ್‌ಲಾಕ್ ಸೀನ್ ಕೂಡ ಚಿತ್ರದಲ್ಲಿದೆ. ಆಕ್ಷನ್, ರೊಮ್ಯಾನ್ಸ್, ಎಮೋಷನ್, ದೇಶಭಕ್ತಿ ಎಲ್ಲಾ ಅಂಶಗಳನ್ನು ಸೇರಿಸಿ 'ಫೈಟರ್' ಸಿನಿಮಾ ಕಟ್ಟಿಕೊಡಲಾಗಿದೆ. ಟೀಸರ್ ಕೊನೆಯಲ್ಲಿ ಹೃತಿಕ್ ರಾಷ್ಟ್ರಧ್ವಜ ಹಿಡಿದು ಬರುವ ಸನ್ನಿವೇಶ ಅಭಿಮಾನಿಗಳ ಮನಗೆದ್ದಿದೆ.

Hrithik Roshan and Deepika Padukone Starrer Fighter Teaser Released

ಏರಿಯಲ್ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಫೈಟರ್' ಜನವರಿ 25ಕ್ಕೆ ಗಣರಾಜ್ಯೋತ್ಸವ ಸಂಭ್ರದಲ್ಲಿ ಬಿಡುಗಡೆಯಾಗಲಿದೆ. ಐಮ್ಯಾಕ್ಸ್ ತ್ರೀಡಿ ವರ್ಷನ್‌ನಲ್ಲೂ ಈ ಚಿತ್ರವನ್ನು ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು. ಹೃತಿಕ್, ದೀಪಿಕಾ ಏರ್‌ಫೋರ್ಸ್ ಆಫೀಸರ್‌ ಪಾತ್ರಗಳಲ್ಲಿ ನಟಿಸಿದ್ದು ಅವರ ತಂಡದ ಕ್ಯಾಪ್ಟನ್ ಪಾತ್ರದಲ್ಲಿ ಅನಿಲ್ ಕಪೂರ್ ಮಿಂಚಿದ್ದಾರೆ. ಇನ್ನುಳಿದಂತೆ ಕರಣ್‌ ಸಿಂಗ್ ಗೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜಿಜ್ ತಾರಾಗಣದಲ್ಲಿದ್ದಾರೆ.

'ವಾರ್‌' ಸಿನಿಮಾ ಶೂಟಿಂಗ್ ಸಮಯದಲ್ಲೇ ನಿರ್ದೇಶಕ ಸಿದ್ದಾರ್ಥ್ ಆನಂದ್ ಫೈಟರ್ ಜೆಟ್ ಸುತ್ತಾ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಮಾಡುವುದಾಗಿ ಹೇಳಿದ್ದರು. ಆದರೆ ಕೊರೊನಾ ಹಾವಳಿಯಿಂದ ಸಿನಿಮಾ ತಡವಾಯಿತು. ಜನವರಿ 10, 2021ರಲ್ಲಿ ಅಧಿಕೃತವಾಗಿ ಸಿನಿಮಾ ಘೋಷಣೆಯಾಗಿತ್ತು. ಇದು ಸರಣಿಯ ಮೊದಲ ಸಿನಿಮಾ. ಇದೇ ಜಾನರ್‌ನಲ್ಲಿ ಮತ್ತೊಂದು ಸಿನಿಮಾಗಳನ್ನು ತೆರೆಗೆ ತರುವ ಪ್ರಯತ್ನ ನಡೀತಿದೆ. ಅಂದಾಜು 250 ಕೋಟಿ ರೂ. ಬಜೆಟ್‌ನಲ್ಲಿ 'ಫೈಟರ್' ಸಿನಿಮಾ ನಿರ್ಮಾಣವಾಗಿದೆ.

ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡಬೇಕು ಎನ್ನುವ ಕಾರಣಕ್ಕೆ ಚಿತ್ರತಂಡ ಸಾಕಷ್ಟು ರಿಸ್ಕ್ ತೆಗೆದುಕೊಂಡಿದೆ. ಪ್ರೇಕ್ಷಕರ ಊಹೆಗೂ ನಿಲುಕದ ರೀತಿಯಲ್ಲಿ ಸಾಹಸ ಸನ್ನಿವೇಶಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಅದಕ್ಕೆ ಗ್ರಾಫಿಕ್ಸ್ ಸಾಥ್ ಸಿಕ್ಕಿದೆ. ಟೀಸರ್‌ನಲ್ಲಿರುವ ಗ್ರಾಫಿಕ್ಸ್ ಗುಣಮಟ್ಟ ಉತ್ತಮವಾಗಿದ್ದು ಸಿನಿಮಾ ಥ್ರಿಲ್ ಕೊಡುವ ಸುಳಿವು ಸಿಕ್ತಿದೆ.

ವರ್ಷದ ಹಿಂದೆ ಅಸ್ಸಾಂನಲ್ಲಿ 'ಫೈಟರ್' ಚಿತ್ರೀಕರಣ ಶುರುವಾಗಿತ್ತು. 10 ದಿನಗಳ ಚಿತ್ರೀಕರಣ ಬಳಿಕ ಮುಂಬೈಗೆ ವಾಪಸ್ ಆಗಿದ್ದ ತಮಡ ನಂತರ ಕಾಶ್ಮೀರದ ಫ್ಲೈಟ್ ಏರಿತ್ತು. ಹೈದರಾಬಾದ್‌ನ ಡಂಡಿಗಲ್ ಏರ್‌ಫೋರ್ಸ್ ಅಕಾಡೆಮಿಯಲ್ಲಿ 3ನೇ ಶೆಡ್ಯೂಲ್ ಚಿತ್ರೀಕರಣ ನಡೀತು. ಬಳಿಕ ಮುಂಬೈನಲ್ಲಿ ಹೆಚ್ಚು ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿತ್ತು. ಸದ್ಯ ಬಹುತೇಕ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್ ಶುರುವಾಗಿದೆ.

More from Filmibeat

English summary
Hrithik Roshan and Deepika Padukone's Fighter Teaser Released out now;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X