ಪ್ರೀತಿ-ಪ್ರೇಮ-ವಿರಹ-ಜೀವನ : ಹೃತಿಕ್ ರೋಷನ್ ಬದುಕಲ್ಲಿ ಮತ್ತೊಮ್ಮೆ ಸುಂಟರಗಾಳಿ,ಕಮರಿತು ಕನಸು..?

ಪ್ರೀತಿ-ಪ್ರೇಮಕ್ಕೆ ವಯಸ್ಸಿನ ನಿರ್ಬಂಧವಿಲ್ಲ. ಅದು ಯಾರ ಮೇಲೆ, ಯಾವಾಗಲಾದರೂ, ಹೇಗಾದರು ಹುಟ್ಟಬಹುದು. ಆದರೆ ಹಿಂದೆ ಹೀಗೆ ಹುಟ್ಟಿದ ಪ್ರೀತಿಗೆ ಎಕ್ಸ್‌ಪೈರಿ ಡೇಟ್ ಇರ್ತಿರಲಿಲ್ಲ. ಆದರೆ ಈಗ ಇದೆ. ಬದಲಾದ ಈ ಕಾಲದಲ್ಲಿ ಕೇವಲ ಆಕರ್ಷಣೆಯಾಗದೆ ನಿಜವಾದ ಪ್ರೀತಿ ಆಗಿದ್ದರೆ ಮಾತ್ರ ಅದು ಕೊನೆವರೆಗೆ ಉಳಿಯುತ್ತದೆ. ಇಲ್ಲದಿದ್ದರೆ ಹುಟ್ಟಿದಷ್ಟೇ ಶರವೇಗದಲ್ಲಿ ಗುಡ್ ಬೈ ಹೇಳುತ್ತದೆ. ಇದಕ್ಕೆ ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಮತ್ತೊಂದು ಉದಾಹರಣೆ.

ಹೌದು, ಅಸಲಿಗೆ ಸುಸೈನ್ ಜೊತೆ ತಮ್ಮ ಹದಿಮೂರು ವರ್ಷದ ದಾಂಪತ್ಯ ಜೀವನಕ್ಕೆ ಗುಡ್ ಬೈ ಹೇಳಿದ್ದ ಹೃತಿಕ್ ರೋಷನ್, ದಿಲ್ ಕಬ್ಬಡಿ.. ಮುಝ್ಸೇ ಫ್ರೆಂಡ್ ಶಿಫ್ ಕರೋಗೆ.. ಚಿತ್ರದಲ್ಲಿ ಆಕ್ಟ್ ಮಾಡಿದ್ದ ಸಬಾ ಆಜಾದ್ ಸೌಂದರ್ಯಕ್ಕೆ ಮರುಳಾಗಿದ್ದರು.

Hrithik Roshan and Saba Azad End Their Relationship Spark Breakup Rumors

ಆದರೆ ಈಗ ತನಗಿಂತ ವಯ್ಸಸ್ಸಿನಲ್ಲಿ ಹನ್ನೆರಡು ವರ್ಷ ಚಿಕ್ಕವಳಾದ ಸಬಾ ಅವರ ಸಾಂಗತ್ಯ ಕೂಡ ಹೃತಿಕ್ ರೋಷನ್ ಅವರಿಗೆ ಸಾಕೆನಿಸಿದೆ. ಇಬ್ಬರು ತಮ್ಮ ಸಂಬಂಧಕ್ಕೆ ಎಳ್ಳು-ನೀರು ಬಿಟ್ಟಿದ್ದಾರೆ, ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ. ಹೀಗೊಂದು ಫ್ಲ್ಯಾಶ್ ನ್ಯೂಸ್ ಹಿಂದಿ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ. ಸಂಬಂಧ ಮುರಿದು ಬೀಳಲು ಕಾರಣವೇನು ಎಂಬ ಚರ್ಚೆ ಕೂಡಾ ಮುಂಬೈನಲ್ಲಿ ನಡೆಯುತ್ತಿದೆ.

ಇನ್ನೂ ಈ ಅಂತೆ-ಕಂತೆಯ ಸುದ್ದಿಯ ನಡುವೆ ಸಬಾ ಜೊತೆ ಹೃತಿಕ್ ರೋಷನ್ ಕಾಣಿಸಿಕೊಂಡು ಅನೇಕ ದಿನಗಳಾಗಿವೆ. ಅನಂತ್ ಅಂಬಾನಿಯ ಮದುವೆಗೆ ಕೂಡ ಹೃತಿಕ್ ರೋಷನ್ ಒಬ್ಬರೇ ಹೋಗಿದ್ದರು. ಈ ಕಾರಣದಿಂದ ಹೃತಿಕ್ ಮತ್ತು ಸಬಾ ನಡುವೆ ಸಂಬಂಧ ಹಳಸಿದೆ ಎನ್ನುವ ಅನುಮಾನ ಈಗ ಇನ್ನೂ ಹೆಚ್ಚಾಗಿದೆ.ನಿಜಾ ಹರಿದಾಡುತ್ತಿರುವ ಈ ಸುದ್ದಿಗಳ ಕುರಿತು ಹೃತಿಕ್ ರೋಷನ್ ಅಥವಾ ಸಬಾ ಯಾವುದೇ ಸ್ಪಷ್ಟೀಕರಣವನ್ನು ನೀಡಿಲ್ಲ. ಆದರೆ.. ಬೆಂಕಿಯಿಲ್ಲದೆ ಹೊಗೆಯಾಡಲ್ಲ ಅನ್ನುವುದು ಮುಂಬೈ ಸಿನಿಮಾ ಪಂಡಿತರು ಸದ್ಯಕ್ಕೆ ಮಾಡುತ್ತಿರುವ ವಾದ

hrithik-roshan-and-saba-azad-end-their-relationship-spark-breakup-rumors

ಅಂದ್ಹಾಗೇ ಹೃತಿಕ್ ರೋಷನ್ ಅವರಿಂದ ದೂರವಾದ ನಂತರ ಅವರ ಮೊದಲ ಪತ್ನಿ ಸುಸೈನ್ ಖಾನ್, ಅರಸ್ಲಾನ್ ಗೋನಿ ಜೊತೆ ನೆಮ್ಮದಿಯಾಗಿ ಇದ್ದಾರೆ.ವಿಶೇಷ ಅಂದರೆ ಸುಸೈನ್ ಅವರಿಗೆ ವಿಚ್ಛೇದನ ನೀಡಿದ ನಂತರವೂ ಕೂಡ ಹೃತಿಕ್ ರೋಷನ್ ತಮ್ಮ ಪ್ರಿಯತಮೆ ಸಬಾ ಅವರನ್ನು ಕರೆದುಕೊಂಡು ಸುಸೈನ್ ಮತ್ತು ಅರಸ್ಲಾನ್ ಗೋನಿ ಜೊತೆ ಪ್ರವಾಸಕ್ಕೆ ಹೋಗುತ್ತಿದ್ದರು. ಹೃತಿಕ್-ಸಬಾ-ಸುಸೈನ್ ಮತ್ತು ಅರಸ್ಲಾನ್, ನಾಲ್ಕು ಜನ ಮೋಜು ಮಸ್ತಿ ಮಾಡುತ್ತಿದ್ದರು. ಆದರೆ ಈಗ ನೋಡಿದರೆ ಹೃತಿಕ್ ರೋಷನ್ ಮತ್ತು ಸಬಾ ಸಂಬಂಧ ಮೊದಲಿನಂತೆ ಇಲ್ಲ, ಇಬ್ಬರ ನಡುವೆ ಮಾತು ಇಲ್ಲ ಕಥೆಯೂ ಇಲ್ಲ ಅನ್ನುವ ಸುದ್ದಿ ಹೊರ ಬಂದಿದೆ. ಇಬ್ಬರ ನಡೆಯಿಂದ ಅನುಮಾನ ದಿನದಿಂದ ದಿನಕ್ಕೆ ಇವರ ಅಭಿಮಾನಿಗಳಲ್ಲಿ ಇನ್ನೂ ಹೆಚ್ಚಾಗುತ್ತಿದೆ.

ಉಳಿದಂತೆ ಹೃತಿಕ್ ರೋಷನ್ ಸದ್ಯಕ್ಕೆ ವಾರ್ 2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಜ್ಯೂ.ಎನ್.ಟಿ.ಆರ್ ಕೂಡ ಈ ಚಿತ್ರದಲ್ಲಿರುವುದು ಚಿತ್ರದ ವಿಶೇ‍ಷತೆಗಳಲ್ಲೊಂದು. ಈ ಚಿತ್ರವನ್ನು ಹೊರತು ಪಡಿಸಿದರೆ ಕ್ರಿಷ್ ಚಿತ್ರದ ಮುಂದುವರೆದ ಭಾಗವನ್ನು ಮಾಡುವ ಆಲೋಚನೆ ಹೃತಿಕ್ ರೋಷನ್‌ಗೆ ಇದೆ. ಆದರೆ ಅದು ಯಾವಾಗ ಕಾರ್ಯರೂಪಕ್ಕೆ ಬರುತ್ತೆ ಅನ್ನುವುದು ಅವರಿಗೆ ಗೊತ್ತು.

More from Filmibeat

Read more about: hrithik roshan love bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X