ಗರ್ಲ್‌ಫ್ರೆಂಡ್ ಸಬಾ ಆಜಾದ್ ಜೊತೆಗೆ ದೀಪಾವಳಿ ಆಚರಿಸಿದ ಹೃತಿಕ್ ರೋಷನ್, ಇಲ್ಲೊಂದು ವಿಶೇಷವಿದೆ!
ಬಾಲಿವುಡ್ ಸಿನಿಮಾ ತಾರೆಯರು ಸಂಭ್ರಮದಿಂದ ದೀಪಾವಳಿ ಹಬ್ಬವನ್ನು ಆಚರಿಸಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಭರ್ಜರಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಟ ಹೃತಿಕ್ ರೋಷನ್ ಮನೆಯಲ್ಲಿಯೂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗಿದೆ. ತಮ್ಮ ಗರ್ಲ್‌ಫ್ರೆಂಡ್ ಸಬಾ ಆಜಾದ್ ಮತ್ತು ಅವರ ಕುಟುಂಬದೊಂದಿಗೆ ಬೆಳಕಿನ ಹಬ್ಬವನ್ನು ಆಚರಿಸಿದ್ದಾರೆ.
ಹೃತಿಕ್ ರೋಷನ್ ಅವರ ದೀಪಾವಳಿ ಸಂಭ್ರಮ
ನಟ ಹೃತಿಕ್ ರೋಷನ್ ಅವರ ಮನೆಯಲ್ಲಿ ನಡೆದ ದೀಪಾವಳಿ ಹಬ್ಬದ ಕೆಲವು ಫೋಟೋಗಳನ್ನು ಸೋಮವಾರ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕುಟುಂಬದ ಎಲ್ಲರೂ ಈ ಫೋಟೋಗಳಲ್ಲಿ ಇದ್ದಾರೆ. ಮೊದಲ ಚಿತ್ರದಲ್ಲಿ, ಹೃತಿಕ್ ರೋಷನ್ ಸಬಾ ಆಜಾದ್ ಅವರೊಂದಿಗೆ ಕುಳಿತುಕೊಂಡಿದ್ದು, ಅವರ ಇಡೀ ಕುಟುಂಬವು ಅವರ ಜೊತೆಯಲ್ಲಿದೆ. ಹೃತಿಕ್ ಮತ್ತು ಸಬಾ ಇಬ್ಬರೂ ಮುದ್ದಾಗಿ ಕೈಗಳನ್ನು ಹಿಡಿದುಕೊಂಡಿದ್ದಾರೆ.

ಹೃತಿಕ್ ರೋಷನ್ ಬ್ಲಾಕ್ ಕುರ್ತಾ ಮತ್ತು ಪ್ಯಾಂಟ್ ಧರಿಸಿ, ಬ್ಲಾಕ್ ಬೂಟುಗಳೊಂದಿಗೆ ಮ್ಯಾಚ್ ಮಾಡಿದ್ದರು. ಅವರ ಗೆಳತಿ ಸಬಾ ಹಸಿರು ಮತ್ತು ಕೆಂಪು ಬಣ್ಣದ ಲೆಹೆಂಗಾ ಸೆಟ್‌ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಜೊತೆಗೆ ಕಡಿಮೆ ಆಭರಣಗಳನ್ನು ಧರಿಸಿ, ಅಂದವಾಗಿ ಕೂದಲನ್ನು ಇಳಿಬಿಟ್ಟಿದ್ದರು.
ಹೃತಿಕ್ ಅವರ ತಂದೆ ತಾಯಿಯಾದ ರಾಕೇಶ್ ರೋಷನ್ ಮತ್ತು ಪಿಂಕಿ ರೋಷನ್ ಮತ್ತು ಕುಟುಂಬದ ಇತರೆ ಸದಸ್ಯರು ಹಿಂದೆ ಸಾಲಾಗಿ ನಿಂತಿದ್ದಾರೆ. ಎರಡನೇ ಚಿತ್ರದಲ್ಲಿ, ಹೃತಿಕ್ ಮತ್ತು ಸಬಾ ಮನೆಯಲ್ಲಿ ಬೇರೆ ಸ್ಥಳದಲ್ಲಿ ಮತ್ತೊಂದು ಫ್ಯಾಮಿಲಿ ಫೋಟೋಗೆ ಫೋಸ್ ನೀಡಿದ್ದಾರೆ. ಈ ಫೋಟೋಗಳನ್ನು ಹಂಚಿಕೊಂಡಿರುವ ನಟ, "ಹ್ಯಾಪಿ ದೀಪಾವಳಿ" ಎಂಬ ಸರಳ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ.
ಪಶ್ಮಿನಾ ರೋಷನ್ ಹುಟ್ಟುಹಬ್ಬದಲ್ಲೂ ಹೃತಿಕ್, ಸಬಾ ಮಿಂಚಿಂಗ್!
ಕಳೆದ ವಾರ ಹೃತಿಕ್ ರೋಷನ್ ಮತ್ತು ಅವರ ಗೆಳತಿ ಸಬಾ ಆಜಾದ್, ಪಶ್ಮಿನಾ ರೋಷನ್ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದರು. ಈ ಸ್ಟಾರ್ ಜೋಡಿ ಅಮೇರಿಕನ್ ಲೇಖಕ ಸ್ಕಾಟ್ ಫಿಟ್ಜ್‌ಗೆರಾಲ್ಡ್ ಮತ್ತು ಅವರ ಪತ್ನಿ, ಲೇಖಕಿ ಜೆಲ್ಡಾ ಫಿಟ್ಜ್‌ಗೆರಾಲ್ಡ್ ಅವರಂತೆ ಉಡುಪು ಧರಿಸಿದ್ದರು.

ಹೃತಿಕ್ ರೋಷನ್ ಬಿಳಿ ಶರ್ಟ್, ಬೂದು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬೆಲ್ಟ್ ಮತ್ತು ಟೋಪಿ ಧರಿಸಿದ್ದರೆ, ಸಬಾ ಅವರು ಸರಗಳು, ಹೆಡ್‌ಬ್ಯಾಂಡ್ ಮತ್ತು ಬಳೆಗಳ ಜೊತೆಗೆ ಮಿನುಗುವ ಸಿಲ್ವರ್ ಕಲರ್ ಶಾರ್ಟ್ ಸಿಂಗಲ್ ಪೀಸ್ ತೊಟ್ಟಿದ್ದರು. ಜೊತೆಗೆ ಸ್ಕಾರ್ಫ್ ಮತ್ತು ಸಿಗರೇಟ್ ಹೋಲ್ಡರ್ ಹಿಡಿದು ಫೋಸ್ ನೀಡಿದ್ದರು.
ಪ್ರೇಮ ಪಕ್ಷಿಗಳಾದ ಹೃತಿಕ್ ಮತ್ತು ಸಬ
ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಕಳೆದ ವರ್ಷದ ಆರಂಭದಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸಾಬಾ ಆಗಾಗ್ಗೆ ಹೃತಿಕ್ ಜೊತೆಗೆ ಅವರ ಕುಟುಂಬದ ಔಟಿಂಗ್, ಕಾರ್ಯಕ್ರಮಗಳು, ಪ್ರವಾಸಗಳಿಗೆ ಹೋಗುತ್ತಾರೆ. ಹೃತಿಕ್ ರೋಷನ್ ಈ ಹಿಂದೆ ಇಂಟೀರಿಯರ್ ಡಿಸೈನರ್ ಸುಸೇನ್ ಖಾನ್ ಅವರನ್ನು ಮದುವೆಯಾಗಿದ್ದರು.
ಹೃತಿಕ್ ರೋಷನ್ , ಸಿದ್ಧಾರ್ಥ್ ಆನಂದ್ ಅವರ ಆಕ್ಷನ್ ಥ್ರಿಲ್ಲರ್ ಸಿನಿಮಾ 'ಫೈಟರ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದು ಜನವರಿ 25, 2024 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದಾದ ನಂತರ ಅಯನ್ ಮುಖರ್ಜಿ ಅವರ ಸ್ಪೈ ಥ್ರಿಲ್ಲರ್ ವಾರ್- 2 ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.


Click it and Unblock the Notifications











