For Quick Alerts
  ALLOW NOTIFICATIONS  
  For Daily Alerts

  ಹಿಂದಿ 'ವಿಕ್ರಂ ವೇದ' ಟೀಸರ್‌ನಲ್ಲಿ ಅಬ್ಬರಿಸಿದ ಹೃತಿಕ್- ಸೈಫ್!

  |

  'ವಿಕ್ರಮ್ ವೇದ' ಎನ್ನುವ ಟೈಟಲ್ ಕೇಳಿದ್ರೆನೆ ಸಿನಿಪ್ರಿಯರಿಗೆ ಸೌತ್‌ನಲ್ಲಿ ಬಂದು ಸದ್ದು ಮಾಡಿದ ಸಿನಿಮಾ ನೆನಪಾಗುತ್ತದೆ. 'ವಿಕ್ರಮ್ ವೇದಾ' ಹಾವಳಿ ಮತ್ತೇ ಶುರುವಾಗಿದೆ. ಆದರೆ ಈ ಬಾರಿ ಹಿಂದೆಯಲ್ಲಿ. ಹೌದು ಹಿಂದಿಯಲ್ಲಿ ರಿಮೇಕ್ ಆಗಿರುವ ಈ ಚಿತ್ರದ ಟೀಸರ್ ಈಗ ರಿಲೀಸ್ ಆಗಿದೆ.

  ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶನದ ವಿಕ್ರಮ್ ವೇದ ತಮಿಳೀನಲ್ಲಿ ಬಂದು ಸೂಪರ್ ಹಿಟ್ ಆಗಿತ್ತು. ಇದೀಗ ಹಿಂದಿಯಲ್ಲೂ ಕೂಡ ಈ ಚಿತ್ರವನ್ನು ಇವರೇ ನಿರ್ದೇನ ಮಾಡುತ್ತಿದ್ದಾರೆ. ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಾದ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  'ಲಾಲ್‌ ಸಿಂಗ್‌ ಚಡ್ಡ': 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂದ್ರೆ ನಂಬ್ತಿರಾ?'ಲಾಲ್‌ ಸಿಂಗ್‌ ಚಡ್ಡ': 2022ರಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಅಂದ್ರೆ ನಂಬ್ತಿರಾ?

  ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ಹೆಚ್ಚಿ ನಿರಿಕ್ಷೆಯನ್ನು ಹುಟ್ಟುಹಾಕಿದೆ. ಹಲವು ದಿನಗಳ ಬಳಿಕ ಬಾಲಿವುಡ್‌ನಲ್ಲಿ ಹೀಗೊಂದು ನಿರೀಕ್ಷೆ ಹುಟ್ಟಿಸುವ ಟ್ರೇಲರ್ ಬಂದಿದೆ. ಈ ಟ್ರೇಲರ್‌ಗೆ ಉತ್ತಮ ರೆಸ್ಪಾನ್ಸ್ ಕೂಡ ಸಿಕ್ಕಿದೆ.

  ಅಬ್ಬರಿಸಿದ ಹೃತಿಕ್- ಸೈಫ್!

  ಅಬ್ಬರಿಸಿದ ಹೃತಿಕ್- ಸೈಫ್!

  ಹೃತಿಕ್ ರೋಷನ್ ಮತ್ತು ಸೈಫ್ ಅಲಿಖಾನ್ ಈ ಚಿತ್ರದಲ್ಲಿ ವಿಕ್ರಂ ವೇದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೃತಿಕ್ ರೋಷನ್ ಕಳ್ಳ ಆದ್ರೆ, ಸೈಫ್ ಅಲಿಖಾನ್ ಫೊಲೀಸ್. ಈ ಕಳ್ಳ ಪೊಲೀಸ್ ಆಟದಲ್ಲಿ ಇಬ್ಬರೂ ಕೂಡ ಅಬ್ಬರಿಸಿದ್ದಾರೆ. ಹೃತಿಕ್ ರೋಷನ್ ವಿಭಿನ್ನ ಮ್ಯಾನರಿಂನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸೈಫ್ ಅಲಿಖಾನ್ ಕಿರಿಕ್ ಪೊಲೀಸ್ ಆಗಿ ಮಿಂಚಿದ್ದಾರೆ. ಸದ್ಯ ಈ ಟೀಸರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಭಿನ್ನವಾದ ಟೀಸರ್!

  ಭಿನ್ನವಾದ ಟೀಸರ್!

  ಈ ಮೊದಲು ವಿಕ್ರಂ ವೇದ ಸಿನಿಮಾವನ್ನು ನೋಡಿದವರಿಗೆ ಈ ಟೀಸರ್ ಮತ್ತು ಕತೆಯ ತಿರುಳು ಸುಲಭವಾಗಿ ಗೊತ್ತಾಗುತ್ತದೆ. ಆದರೆ ಈ ಟೀಸರನ್ನು ನಿರ್ದೇಶಕರು ಕೊಂಚ ಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವು ಡೈಲಾಗ್‌ಗಳೂ, ತಮಿಳು ವಿಕ್ರಂ ವೇದ ಮಾದರಿಯಲ್ಲೇ ಇದ್ದರು, ಆ ಟೀಸರ್‌ನಲ್ಲಿ ಇರುವ ಹಲವು ಅಂಶಗಳನ್ನು ಬದಲಾಯಿಸಿದ್ದಾರೆ. ಈ ಟೀಸರ್‌ನಲ್ಲಿ ಮುಖ್ಯವಾಗಿ ಗಮನ ಸೆಳೆಯೋದು ಹೃತಿಕ್ ರೋಷನ್ ಪಾತ್ರ.

  ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್!

  ಸೆಪ್ಟೆಂಬರ್ 30ಕ್ಕೆ ಸಿನಿಮಾ ರಿಲೀಸ್!

  ಬಾಲಿವುಡ್‌ನಲ್ಲಿ ಹಲವಾರು ಸಿನಿಮಾಗಳು ನೆಲಕಚ್ಚಿವೆ. ಹಾಗಾಗಿ ಯಾವುದೇ ಸಿನಿಮಾ ರಿಲೀಸ್‌ಗೆ ರೆಯಾದರೂ ಕೂಡ, ಆ ಚಿತ್ರದ ಗಳಿಕೆಯ ಬಗ್ಗೆ ಕುತಹಲ ಹುಟ್ಟಿಕೊಳ್ಳುತ್ತದೆ. ಅಂತೆಯೇ ಈ ಚಿತ್ರದ ಮೇಲೂ ಹೆಚ್ಚಿನ ನಿರೀಕ್ಷೆ ಇದೆ. ಯಾಕೆಂದರೆ ಒಂದು ಈ ಚಿತ್ರದ ಕಥೆಯನ್ನೂ ಈಗಾಗಲೇ ಜನ ಮೆಚ್ಚಿಕೊಂಡಿದ್ದಾರೆ. ಮತ್ತೊಂದು ಈ ಸಿನಿಮಾದಲ್ಲಿ ಬಾಲಿವುಡ್ ಇಬ್ಬರೂ ಸ್ಟಾರ್ ನಟರಿದ್ದಾರೆ.

  ಮತ್ತೆ ಗೆಲ್ಲುತ್ತಾರಾ ಪುಷ್ಕರ್ ಗಾಯಿತ್ರಿ!

  ಮತ್ತೆ ಗೆಲ್ಲುತ್ತಾರಾ ಪುಷ್ಕರ್ ಗಾಯಿತ್ರಿ!

  ಈ ಚಿತ್ರವನ್ನು ಪುಷ್ಕರ್ ಮತ್ತು ಗಾಯತ್ರಿ ನಿರ್ದೇಶಿಸಿದ್ದಾರೆ. ಎಸ್. ಶಶಿಕಾಂತ್ ನಿರ್ಮಿಸಿದ್ದಾರೆ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ. ವಿಕ್ರಂ- ವೇದ ಆಗಿ ಹೃತಿಕ್ ರೋಷನ್ ಮತ್ತು ಸೈಫ್ ಅಲಿ ಖಾನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ರೋಹಿತ್ ಸರಾಫ್, ಯೋಗಿತಾ ಬಿಹಾನಿ, ಶರೀಬ್ ಹಶ್ಮಿ ಮತ್ತು ಸತ್ಯದೀಪ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

  Recommended Video

  ಅಣ್ಣನ ಜೊತೆಗೆ ಯುವರಾಜಕುಮಾರ್ ಲಕ್ಕಿಮ್ಯಾನ್ ಇವೆಂಟ್ ನಲ್ಲಿ | Yuva Rajkumar | Luckyman
  English summary
  Hrithik Roshan and Saif Ali Khan Starrer Vikram Vedha Teaser Out, Know More,
  Wednesday, August 24, 2022, 13:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X