100 ದೇಶಗಳಲ್ಲಿ 'ವಿಕ್ರಂ ವೇದ': ಹೃತಿಕ್- ಸೈಫ್ ಸಿನಿಮಾ ಹೊಸ ದಾಖಲೆ!

ಹೃತಿಕ್ ರೋಷನ್ ಹಾಗೂ ಸೈಫ್ ಅಲಿಖಾನ್ ನಟನೆಯ 'ವಿಕ್ರಂ ವೇದ' ಸಿನಿಮಾ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. 'ಬ್ರಹ್ಮಾಸ್ತ್ರ' ಸಿನಿಮಾ ಸಕ್ಸಸ್ ಬೆನ್ನಲ್ಲೇ ಈ ಆಕ್ಷನ್ ಎಂಟರ್‌ಟೈನರ್ ಚಿತ್ರದಲ್ಲಿ ವಿಶ್ವದ ಮೂಲೆ ಮೂಲೆಯಲ್ಲಿ ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಪ್ರಯತ್ನ ನಡೀತಿದೆ. ಬರೋಬ್ಬರಿ 100 ದೇಶಗಳಲ್ಲಿ ಸಿನಿಮಾ ತೆರೆಗಪ್ಪಳಿಸ್ತಿದೆ.

5 ವರ್ಷಗಳ ಹಿಂದೆ ಕಾಲಿವುಡ್‌ನಲ್ಲಿ 'ವಿಕ್ರಂ ವೇದ' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಕಲ್ಟ್ ಕ್ಲಾಸಿಕ್ ಸಿನಿಮಾ ಅಂತ ಇಡೀ ಸೌತ್ ಸಿನಿದುನಿಯಾ ಕೊಂಡಾಡಿತ್ತು. ಮಾಧವನ್, ವಿಜಯ್ ಸೇತುಪತಿ ಲೀಡ್‌ ರೋಲ್‌ಗಳಲ್ಲಿ ಅಬ್ಬರಿಸಿದ್ದರು. ತಮಿಳು ಚಿತ್ರಕ್ಕೆ ಆಕ್ಷನ್ ಕಟ್ ಹೇಳಿ ಗೆದ್ದ ಪುಷ್ಕರ್- ಗಾಯತ್ರಿ ದಂಪತಿ ಬಾಲಿವುಡ್‌ನಲ್ಲೂ ಈ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಈಗಾಗಲೇ ಟೀಸರ್, ಟ್ರೈಲರ್ ರಿಲೀಸ್ ಆಗಿ ಸದ್ದು ಮಾಡ್ತಿದೆ.

ಬಾಲಿವುಡ್ ಸಿನಿಮಾಗಳಿಗೆ ವರ್ಲ್ಡ್ ವೈಡ್ ದೊಡ್ಡ ಮಾರ್ಕೆಟ್ ಇದೆ. 'ವಿಕ್ರಂ ವೇದ' ಸಿನಿಮಾ ಮೂಲಕ ಅದು ಮತ್ತಷ್ಟು ವಿಸ್ತರಿಸ್ತಿದೆ. ಈವರೆಗೆ ಬಾಲಿವುಡ್ ಸಿನಿಮಾಗಳು ಎಲ್ಲೆಲ್ಲಿ ರಿಲೀಸ್ ಆಗ್ತಿತ್ತೋ ಆ ದೇಶಗಳ ಜೊತೆಗೆ ಇನ್ನು ಹಲವು ದೇಶಗಳಲ್ಲಿ ಸಿನಿಮಾ ತೆರೆಕಾಣ್ತಿದೆ.

100 ದೇಶಗಳಲ್ಲಿ 'ವಿಕ್ರಂ ವೇದ' ರಿಲೀಸ್

100 ದೇಶಗಳಲ್ಲಿ 'ವಿಕ್ರಂ ವೇದ' ರಿಲೀಸ್

ಸೋತು ಸುಣ್ಣವಾಗಿದ್ದ ಬಾಲಿವುಡ್‌ಗೆ 'ಬ್ರಹ್ಮಾಸ್ತ್ರ' ಚಿತ್ರದಿಂದ ಕೊಂಚ ಜೀವ ಬಂದಂತಾಗಿದೆ. 'ವಿಕ್ರಂ ವೇದ' ಸಿನಿಮಾದಿಂದ ಮತ್ತಷ್ಟು ಚೇತರಿಸಿಕೊಳ್ಳುವ ಸುಳಿವು ಸಿಕ್ತಿದೆ. ಹೃತಿಕ್, ಸೈಫ್ ಇಬ್ಬರು ಜೊತೆಯಾಗಿರೋದ್ರಿಂದ ನಿರೀಕ್ಷೆ ಹೆಚ್ಚಾಗಿದೆ. ಅಮೇರಿಕಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಹಿಂದಿ ಸಿನಿಮಾಗಳು ಭಾರಿ ಸದ್ದು ಮಾಡ್ತಾವೆ. ಅಲ್ಲೆಲ್ಲಾ ದೊಡ್ಡಮಟ್ಟದಲ್ಲಿ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ತೆರೆಗಪ್ಪಳಿಸ್ತಿದೆ. ಜೊತೆಗೆ ಯೂರೋಪಿನ 22 ದೇಶಗಳಲ್ಲಿ, ಆಫ್ರಿಕಾದ 27 ದೇಶಗಳಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ.

ಜಪಾನ್, ರಷ್ಯಾದಲ್ಲೂ 'ವಿಕ್ರಂ ವೇದ'

ಜಪಾನ್, ರಷ್ಯಾದಲ್ಲೂ 'ವಿಕ್ರಂ ವೇದ'

ಜಪಾನ್, ರಷ್ಯಾ, ಇಸ್ರೇಲ್, ಲ್ಯಾಟಿನ್ ಅಮೇರಿಕಾ, ಪನಾಮ, ಪೆರು ದೇಶಗಳಲ್ಲಿ ಭಾರತದ ಸಿನಿಮಾಗಳು ಅಷ್ಟಾಗಿ ರಿಲೀಸ್ ಆಗುವುದಿಲ್ಲ. ಆದರೆ 'ವಿಕ್ರಂ ವೇದ' ಚಿತ್ರವನ್ನು ಆ ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲಾಗ್ತಿದೆ. ಒಟ್ಟು 100 ರಾಷ್ಟ್ರಗಳಲ್ಲಿ ಈ ಮಲ್ಟಿಸ್ಟಾರರ್ ಸಿನಿಮಾ ರಿಲೀಸ್ ಆಗುವ ಮೂಲಕ ಹೊಸ ಮೈಲಿಗಲ್ಲು ಸಾಧಿಸುತ್ತಿದೆ.

ಕಿಕ್ ಕೊಡಲಿದೆ ಕಳ್ಳ-ಪೊಲೀಸ್ ಆಟ

ಕಿಕ್ ಕೊಡಲಿದೆ ಕಳ್ಳ-ಪೊಲೀಸ್ ಆಟ

ತಮಿಳಿನಲ್ಲಿ 'ವಿಕ್ರಂ ವೇದ' ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಅದೇ ಟೈಟಲ್‌ನಲ್ಲಿ ಈಗ ಬಾಲಿವುಡ್‌ನಲ್ಲೂ ಸಿನಿಮಾ ನಿರ್ಮಾಣವಾಗಿದೆ. ಪೊಲೀಸ್​ ಆಫೀಸರ್ ರೋಲ್‌ನಲ್ಲಿ ಸೈಫ್​ ಅಲಿ ಖಾನ್​ ನಟಿಸಿದ್ದರೆ, ಗ್ಯಾಂಗ್‌ಸ್ಟರ್​ ಆಗಿ ಹೃತಿಕ್​ ರೋಷನ್ ಅಬ್ಬರಿಸಿದ್ದಾರೆ. ಸಾಕಷ್ಟು ಟ್ವಿಸ್ಟ್‌ಗಳಿರೋ ಚಿತ್ರದಲ್ಲಿ ಇಬ್ಬರ ನಡುವಿನ ಮುಖಾಮುಖಿ ದೃಶ್ಯಗಳು ಪ್ರೇಕ್ಷಕರಿಗೆ ಕಿಕ್ ಕೊಡಲಿದೆ.

ಮೈನವಿರೇಳಿಸುವ ಆಕ್ಷನ್ ಥ್ರಿಲ್ಲರ್

ಮೈನವಿರೇಳಿಸುವ ಆಕ್ಷನ್ ಥ್ರಿಲ್ಲರ್

ಮಲ್ಟಿಸ್ಟಾರರ್ ಸಿನಿಮಾಗಳನ್ನು ಕಟ್ಟಿಕೊಡೋದು ಅಷ್ಟು ಸುಲಭ ಅಲ್ಲ. ಎರಡೂ ಪಾತ್ರಗಳಿಗೆ ಸಮನಾದ ಅವಕಾಶ ಕಥೆಯಲ್ಲಿಇರಬೇಕು. ವಿಕ್ರಮ ಬೇತಾಳ ಕಾನ್ಸೆಪ್ಟ್‌ನಿಂದ ಸ್ಪೂರ್ತಿಗೊಂಡು ಈ ಚಿತ್ರಕ್ಕೆ ಸ್ಕ್ರೀನ್‌ಪ್ಲೇ ಮಾಡಲಾಗಿತ್ತು. ಸ್ಕ್ರೀನ್‌ಪ್ಲೇಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿತ್ತು. ಹೃತಿಕ್- ಸೈಫ್ ನಡುವಿನ ಪೈಪೋಟಿ ಸಖತ್ ಮಜಾ ಕೊಡಲಿದೆ. ಮೈನವಿರೇಳಿಸುವ ಆಕ್ಷನ್ ಸೀಕ್ವೆನ್ಸ್, ಫೈಟಿಂಗ್ ಸೀನ್ಸ್ ಪ್ರೇಕ್ಷಕರನ್ನು ರಂಜಿಸಲಿದೆ. ಟೀ ಸೀರಿಸ್, ರಿಲಯನ್ಸ್‌ ಸಂಸ್ಥೆಗಳು ಚಿತ್ರಕ್ಕೆ ಬಂಡವಾಳ ಹೂಡಿದೆ.

More from Filmibeat

English summary
Hrithik Roshan and Saif Ali Khan starrer Vikram Vedha will release in a record 100 countries. Directed by writer-directors Pushkar and Gayatri, is an action thriller Vikram Vedha based on the Indian folktale Vikram aur Betaal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X