ವಿಚ್ಛೇದಿತ ಹೃತಿಕ್ ಮತ್ತು ಪತ್ನಿಯನ್ನು ಒಂದು ಮಾಡಿದ ಕಿಲ್ಲರ್ ಕೊರೊನಾ ವೈರಸ್

ಬಾಲಿವುಡ್ ನ ಮೋಸ್ಟ್ ಬ್ಯೂಟಿಫುಲ್ ಕಪಲ್ ಆಗಿದ್ದ ಹೃತಿಕ್ ರೋಷನ್ ಮತ್ತು ಸುಸ್ಸೇನ್ ಖಾನ್ ದಾಂಪತ್ಯ ಜೀವನ ಮುರಿದುಕೊಂಡು ಸುಮಾರು 6 ವರ್ಷಗಳ ಮೇಲಾಗಿದೆ. 2000ರಲ್ಲಿ ಸುಸ್ಸೇನ್ ಖಾನ್ ಜೊತೆ ಹೃತಿಕ್ ಹಸೆಮಣೆ ಏರಿದ್ದರು. ಕೇವಲ ನಾಲ್ಕು ವರ್ಷದಲ್ಲೆ ಹೃತಿಕ್ ಮತ್ತು ಸುಸ್ಸೇನ್ ವೈವಾಹಿಕ ಜೀವನಕ್ಕೆ ಎಳ್ಳು-ನೀರು ಬಿಟ್ಟು ಬೇರೆ ಬೇರೆಯಾಗಿದ್ದಾರೆ.

Recommended Video

Sussanne moves in with Hrithik to co-parent amid coronavirus outbreak | filmibeat kannada

ಪರಸ್ಪರ ಒಪ್ಪಿಗೆಯ ಮೇರಿಗೆ ವಿಚ್ಛೇದನ ಪಡೆದ ದಂಪತಿ ನಂತರವು ಉತ್ತಮ ಸ್ನೇಹಿತರಾಗಿ ಇದ್ದಾರೆ. ಹೃತಿಕ್ ಮತ್ತು ಸುಸ್ಸೇನ್ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಮಕ್ಕಳಿಗೋಸ್ಕ, ಮಕ್ಕಳ ಭವಿಷ್ಯಕ್ಕಾಗಿ ಇಬ್ಬರು ವೈವಾಹಿಕ ಸಂಬಂಧ ಕಡಿದುಕೊಂಡರು ಸ್ನೇಹಿತರಾಗಿ ಜೀವನ ನಡೆಸುತ್ತಿದ್ದಾರೆ.

ಆಗಾಗ ಇಬ್ಬರು, ಪಾರ್ಟಿ, ಕಾರ್ಯಕ್ರಮ, ವಿದೇಶಿ ಪ್ರವಾಸ ಅಂತ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಸದಾ ಮಕ್ಕಳ ಜೊತೆ ಸಮಯ ಕಳೆಯುವ ಹೃತಿಕ್ ದಂಪತಿಯನ್ನು ಈಗ ಕಿಲ್ಲರ್ ವೈರಸ್ ಕೊರೊನಾ ಒಂದೆ ಮನೆಗೆ ಸೇರಿಸಿದೆ.

ಹೃತಿಕ್ ಮನೆಯಲ್ಲಿ ಮಾಜಿ ಪತ್ನಿ

ಹೃತಿಕ್ ಮನೆಯಲ್ಲಿ ಮಾಜಿ ಪತ್ನಿ

ಹೌದು, ಕೊರೊನಾ ಹಾವಳಿಯ ಪರಿಣಾಮ ಇಡೀ ಭಾರತ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಆಗಿದೆ. ಮನೆಯಲ್ಲಿಯೆ ಕಾಲ ಕಳೆಯಬೇಕಿದೆ. ಹಾಗಾಗಿ ಮಕ್ಕಳನ್ನು ನೋಡಿಕೊಳ್ಳುವ ಸಲುವಾಗಿ ಸುಸ್ಸೇನ್ ಖಾನ್ ಮಾಜಿ ಪತಿ ಹೃತಿಕ್ ಮನೆಗೆ ದಾವಿಸಿದ್ದಾರೆ.

ಮಕ್ಕಳಿಗಾಗಿ ಒಂದಾದ ಹೃತಿಕ್ ದಂಪತಿ

ಮಕ್ಕಳಿಗಾಗಿ ಒಂದಾದ ಹೃತಿಕ್ ದಂಪತಿ

ಹೃತಿಕ್ ಮತ್ತು ಸುಸ್ಸೇನ್ ದಂಪತಿಗೆ 13 ವರ್ಷದ ಹ್ರೆಹಾನ್ ಮತ್ತು 11 ವರ್ಷದ ಹೃದಾನ್ ಎನ್ನುವ ಇಬ್ಬರು ಮಕ್ಕಳಿದ್ದಾರೆ. ಅಪ್ಪ-ಅಮ್ಮ ಇಬ್ಬರು ಬೇರೆ ಬೇರೆ ಆದರೂ, ಮಕ್ಕಳ ಪಾಲಿಗೆ ಹೃತಿಕ್-ಸುಸ್ಸೇನ್ ಅಪ್ಪ-ಅಮ್ಮನ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿಯೆ ಇಬ್ಬರು ಮಕ್ಕಳ ಜೊತೆ ಮುಂಬೈ ನಿವಾಸದಲ್ಲಿ ವಿಚ್ಛೇದಿತ ದಂಪತಿ ಒಟ್ಟಿಗೆ ಕಾಲ ಕಳೆಯುತ್ತಿದ್ದಾರೆ.

'ಇದು ನನಗೆ ಊಹಿಸಿಲು ಸಾಧ್ಯವಾಗದ ಸಮಯ'

'ಇದು ನನಗೆ ಊಹಿಸಿಲು ಸಾಧ್ಯವಾಗದ ಸಮಯ'

ಈ ಬಗ್ಗೆ ನಟ ಹೃತಿಕ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಹೃತಿಕ್ ಮನೆಯಲ್ಲಿ ಸುಸ್ಸೇನ್ ಖಾನ್ ಕುಳಿತಿರುವ ಪೋಸ್ಟ್ ಹಾಕಿ ಶೇರ್ ಮಾಡಿ, ಇದು ನನಗೆ ಊಹಿಸಲು ಸಾಧ್ಯವಿಲ್ಲ. ಇಡಿ ದೇಶ ಲಾಕ್ ಡೌನ್ ನಲ್ಲಿ ಹೇಗಿರುವುದೆಂದು ಅಭ್ಯಾಸ ಮಾಡುತ್ತಿರುವ ಸಮಯದಲ್ಲಿ, ಪೋಷಕರಾಗಿ ನಾವು ಮಕ್ಕಳಿಂದ ದೂರವಿರುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಸಮಯದಲ್ಲಿ ಜಗತ್ತು ಒಂದಾಗಿರುವುದನ್ನು ನೋಡಲು ಹೃದಯ ತುಂಬಿ ಬರುತ್ತೆ" ಎಂದು ಬರೆದುಕೊಂಡಿದ್ದಾರೆ.

ಪತ್ನಿಗೆ ಧನ್ಯವಾದ ತಿಳಿಸಿದ ಹೃತಿಕ್

"ಇದು ನನ್ನ ಮಾಜಿ ಪತ್ನಿ ಸುಸ್ಸೇನ್ ಅವರ ಫೋಟೋ. ತಾತ್ಕಾಲಿಕವಾಗಿ ತನ್ನ ಮನೆಗೆ ಬಂದಿದ್ದಾರೆ. ಇದರಿಂದ ನಮ್ಮ ಮಕ್ಕಳು ಪೋಷಕರ ಸಂಪರ್ಕ ಕಡಿದುಕೊಂಡಿಲ್ಲ. ನನ್ನನ್ನು ಅರ್ಥಮಾಡಿಕೊಂಡಿದ್ದಕ್ಕೆ, ಬೆಂಬಲಿಸಿದಕ್ಕಾಗಿ ಧನ್ಯವಾದಗಳು. ನಾವು ಅವರಿಗಾಗಿ ರಚಿಸಿದ ಕಥೆಯನ್ನು ನಮ್ಮ ಮಕ್ಕಳು ಹೇಳುತ್ತಿದ್ದಾರೆ" ಎಂದು ಸಂತಸದಿಂದ ಈ ಪೋಸ್ಟ್ ಅನ್ನು ಹಾಕಿದ್ದಾರೆ.

2014ರಲ್ಲಿ ವಿಚ್ಛೇದನ ಪಡೆದ ಹೃತಿಕ್ ದಂಪತಿ

2014ರಲ್ಲಿ ವಿಚ್ಛೇದನ ಪಡೆದ ಹೃತಿಕ್ ದಂಪತಿ

ಹೃತಿಕ್ ರೋಷನ್ ಮತ್ತು ಸುಸ್ಸೇನ್ ಖಾನ್ ಇಬ್ಬರು 2000ರಲ್ಲಿ ಮದುವೆ ಆಗುತ್ತಾರೆ. 2013ರಲ್ಲಿ ಇಬ್ಬರು ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರುತ್ತಾರೆ. 2014 ನವೆಂಬರ್ ನಲ್ಲಿ ಇಬ್ಬರು ಅಧಿಕೃತವಾಗಿ ಬೇರೆ ಬೇರೆಯಾಗಿದ್ದಾರೆ. ಇಬ್ಬರ ಸುಂದರ ದಾಂಪತ್ಯ ಮುರಿದು ಬಿದ್ದಿದ್ದು ನೋಡಿ ಅಭಿಮಾನಿಗಳು ಶಾಕ್ ಆಗಿದ್ದರು. ಕಡಿಮೆ ಅವದಿಯಲ್ಲಿಯೆ ಬೇರೆ ಬೇರೆಯಾದ ಹೃತಿಕ್ ಮತ್ತು ಪತ್ನಿ ಇಂದಿಗೂ ಉತ್ತಮ ಸ್ನೇಹಿತರಾಗಿದ್ದಾರೆ.

More from Filmibeat

English summary
Bollywood Actor Hrithik Roshan and Sussanne Khan live together in lockdown period.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X