ಹೃತಿಕ್ ರೋಷನ್ v/s ಕಂಗನಾ: ಕ್ರೈಂ ಬ್ರಾಂಚ್ ಗೆ ಬಂದ ನಟ ಹೃತಿಕ್ ರೋಷನ್
ನಟ ಹೃತಿಕ್ ರೋಷನ್ ಮತ್ತು ಬಾಲಿವುಡ್ ನಟಿ ಕಂಗನಾ ರಣಾವತ್ ಅವರ ವಿವಾದ ಇನ್ನು ಅಂತ್ಯಗೊಂಡಿಲ್ಲ. 2016ರಲ್ಲಿ ಕಂಗನಾ ಮತ್ತು ಹೃತಿಕ್ ನಡುವೆ ದೊಡ್ಡ ವಿವಾದ ಭುಗಿಲೆದ್ದಿತ್ತು. ಈ ಸಮಯದಲ್ಲಿ ಹೃತಿಕ್ ರೋಷನ್ ಇಮೇಲ್ ನಿಂದ ಕಂಗನಾಗೆ 900ಕ್ಕೂ ಹೆಚ್ಚು ಇ-ಮೇಲ್‌ಗಳನ್ನು ಮಾಡಲಾಗಿತ್ತು ಎನ್ನುವ ಆರೋಪ ಕೇಳಿಬಂದಿತ್ತು.
ಈ ಬಗ್ಗೆ ಹೃತಿಕ್ ರೋಷನ್ ಇದು ನಕಲಿ ಐಡಿ ಆಗಿದ್ದು ತನಿಕೆ ನಡೆಸಬೇಕೆಂದು ಸೈಬರ್ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಸೈಬರ್ ಪೊಲೀಸರ ತನಿಖೆಯಿಂದ ಆರೋಪಿಗಳ ಪತ್ತೆ ಆಗಿರಲಿಲ್ಲ.
ನಂತರ ಇತ್ತೀಚೆಗೆ ಹೃತಿಕ್ ಅವರ ಕಾನೂನು ಸಲಹೆಗಾರ ಪೊಲೀಸರಿಗೆ ಲಿಖಿತ ಪತ್ರದ ಮೂಲಕ ಪ್ರಕರಣದ ಬೆಳವಣಿಗೆಯ ಮಾಹಿತಿ ಕೇಳಿದರು. ಆಗ ಸೈಬರ್ ಪೊಲೀಸರು ಪ್ರಕರಣವನ್ನು ಅಪರಾಧ ವಿಭಾಗಕ್ಕೆ ವರ್ಗ ಮಾಡಿದರು. ಇದೀಗ ಅಪರಾಧ ವಿಭಾಗದ ಪೊಲೀಸರು ಹೃತಿಕ್ ಹಾಗೂ ಕಂಗನಾ ಹೇಳಿಕೆ ದಾಖಲಿಸಿಕೊಳ್ಳಲು ನೊಟೀಸ್ ನೀಡಿತ್ತು.

ಈ ಬಗ್ಗೆ ಹೇಳಿಕೆ ನೀಡಲು ಹೃತಿಕ್ ರೋಷನ್ ಕ್ರೈಂ ಬ್ರಾಂಚ್ ಗೆ ಹೋಗಿದ್ದಾರೆ. ನಟ ಹೃತಿಕ್ ರೋಷನ್ ಐಪಿಸಿ ಸೆಕ್ಷನ್ 419, 66(ಸ) 66(ಡಿ) ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಹೃತಿಕ್ ದೂರು ನೀಡಿದ್ದರು.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಹೃತಿಕ್ ಕುರಿತಾಗಿ ಟ್ವೀಟ್ ಮಾಡಿರುವ ಕಂಗನಾ, 'ಜಗತ್ತು ಎಲ್ಲಿಂದ ಎಲ್ಲಿಗೆ ಹೊರಟು ಬಿಟ್ಟಿದೆ. ಆದರೆ ಈ ನನ್ನ ಸಿಲ್ಲಿ ಎಕ್ಸ್ ಮಾತ್ರ ಅಲ್ಲಿಯೇ ನಿಂತಿದ್ದಾನೆ. ಮತ್ತೆ ಸಮಯ ಮರಳಿ ಬರುವುದಿಲ್ಲ, ಮುಂದೆ ನಡಿ' ಎಂದು ಹೃತಿಕ್ ಬಗ್ಗೆ ವ್ಯಂಗ್ಯ ಮಾಡಿದ್ದಾರೆ.


Click it and Unblock the Notifications











