Don't Miss!
- Sports 'ಟಿ20 ವಿಶ್ವಕಪ್ಗೆ ಈತನನ್ನು ಆಯ್ಕೆ ಮಾಡಿ'; ಅಜಿತ್ ಅಗರ್ಕರ್ಗೆ ಬಂತು ದೊಡ್ಡ ಮನವಿ!
- Finance ಡಾ. ರಾಜ್ಕುಮಾರ್ ಜನ್ಮದಿನದಂದು ಹೊಸ ಉದ್ಯಮ ಆರಂಭಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- News Realme Narzo 70: ಭರ್ಜರಿ ಕ್ಯಾಮೆರಾ ಫೀಚರ್ಗಳೊಂದಿಗೆ ರಿಯಲ್ಮಿ ನಾರ್ಜೊ 70 ಗ್ರ್ಯಾಂಡ್ ಲಾಂಚ್
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Automobiles ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗರ್ಲ್ಫ್ರೆಂಡ್ ಜೊತೆ ಮತ್ತೆ ಸಿಕ್ಕಿಬಿದ್ದ ಹೃತಿಕ್
ಬಾಲಿವುಡ್ನ ಮೋಸ್ಟ್ ಹ್ಯಾಂಡ್ಸಮ್, ಗ್ರೀಕ್ ಗಾಡ್ ಅಂತಲೇ ಕರೆಸಿಕೊಳ್ಳುವ ಹೃತಿಕ್ ರೋಷನ್ ಬಗ್ಗೆ ಇದೀಗ ಹೆಚ್ಚಾಗಿ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಮತ್ಯಾರೂ ಅಲ್ಲ, ಹೃತಿಕ್ ರೋಷನ್ ಹೊಸ ಗರ್ಲ್ಫ್ರೆಂಡ್. ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇಬ್ಬರೂ ಸುತ್ತಾಡುತ್ತಾ ಇರುವುದು ಬಹಿರಂಗ ಆಗಿದೆ.
ಇದು ಕೇವಲ ಗಾಸಿಪ್ ಎಂದು ಸುದ್ದಿ ಆಗುತ್ತಿತ್ತು. ಅದರೆ ಈಗ ಹೃತಿಕ್ ರೋಷನ್ ತನ್ನ ಹೊಸ ಹುಡುಗಿ ಜೊತೆ ನೇರವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಹಾಗಾಗಿ ಇವರು ಪ್ರೀತಿಯಲ್ಲಿ ಇರೋ ವಿಷ್ಯ ಕೇವಲ ಗಾಳಿ ಸುದ್ದಿ ಆಗಿ ಮಾತ್ರ ಉಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಪತ್ನಿಯಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಅಷ್ಟಾಗಿ ಈ ರೀತಿ ವಿಚಾರದಲ್ಲಿ ಹೃತಿಕ್ ಸುದ್ದಿ ಆಗಿರಲಿಲ್ಲ. ಪತ್ನಿಯಿಂದ ದಾಂಪತ್ಯದ ಸಂಬಂಧ ಮುರಿದುಕೊಂಡರೂ, ಫ್ರೆಂಡ್ಸ್ ಅಗಿ ಇದ್ದಾರೆ. ಆಗಾಗ ಮಕ್ಕಳೊಂದಿಗೆ ಹೃತಿಕ್ ಕಾಲ ಕಳೆಯುತ್ತಿದ್ದರು. ಮಾಜಿ ಪತ್ನಿ ಜೊತೆಗೂ ಕಾಣಿಸಿಕೊಳ್ಳುತ್ತಾ ಇದ್ದರು.
ಮುಂಬೈ ಹೋಟೆಲ್ನಲ್ಲಿ ಗರ್ಲ್ಫ್ರೆಂಡ್ ಜೊತೆ ಹೃತಿಕ್!
ಸಬಾ ಹಾಗೂ ಹೃತಿಕ್ ಮುಂಬೈನ ಕೆಫೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ರಾತ್ರಿಯ ಊಟಕ್ಕಾಗಿ ತೆರಳಿದ್ದಾರೆ. ಅಂದರೆ ಡಿನ್ನರ್ ಡೇಟ್ಗೆ ತೆರಳಿದ್ದರು. ಕೆಫೆಯಿಂದ ಹೊರಬರುವಾಗ ಇಬ್ಬರಿಗೂ ಶಾಕ್ ಕಾದಿತ್ತು. ಅಲ್ಲಿನ ಮಾಧ್ಯಮಗಳು ಕ್ಯಾಮೆರಾ ಹಿಡಿದು ಬಾಗಿಲ ಬಳಿಯೇ ನಿಂತು ಬಿಟ್ಟಿದ್ದವು. ಹಾಗಾಗಿ ಹೃತಿಕ್ ಮತ್ತು ಸಬಾ ಡಿನ್ನರ್ ಡೇಟಿಂಗ್ ವೇಳೆ ಸಿಕ್ಕಿ ಬಿದ್ದಿದ್ದಾರೆ. ಹೃತಿಕ್ ರೋಷನ್ ಸಬಾ ಅವರ ಕೈ ಹಿಡಿದು ಮುಂದೆ ಸಾಗಿದ್ದಾರೆ.
ಮುಖ ಮರೆಮಾಚಲು ಪ್ರಯಾಸ ಪಟ್ಟ ಸಬಾ!
ಕ್ಯಾಮೆರಾ ಕಣ್ಣಿಗೆ ಬೀಳುತ್ತಲೇ ಸಬಾ ನಡುವಳಿ ಬದಲಾಯ್ತು. ಕ್ಯಾಮೆರಾಗಳನ್ನು ಕಂಡು ಸಬಾಗೆ ಕಸಿವಿಸಿ ಆಯ್ತು. ಹಾಗಾಗಿ ಉದ್ದನೆಯ ಕೂದಲಿನಿಂದ ತಮ್ಮ ಮುಖವನ್ನು ಸಂಪೂರ್ಣವಾಗ ಮುಚ್ಚಿಕೊಳ್ಳುತ್ತಾರೆ. ಹಾಗೆ ತಲೆ ತಗ್ಗಿಸಿ ಕೊಂಡು ಹೃತಿಕ್ ಕೈ ಹಿಡಿದು ನಡೆದು ಬರುತ್ತಾರೆ. ಇದಿಷ್ಟು ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಾಗಿ ಇದು ಕೂಡ ಟ್ರೋಲ್ ಆಗಿದೆ. ಹೀಗೆ ಮುಖ ಮುಚ್ಚಿಕೊಳ್ಳುವುದರ ಪ್ರಯೋಜನ ಏನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.