For Quick Alerts
  ALLOW NOTIFICATIONS  
  For Daily Alerts

  ಗರ್ಲ್‌ಫ್ರೆಂಡ್ ಜೊತೆ ಮತ್ತೆ ಸಿಕ್ಕಿಬಿದ್ದ ಹೃತಿಕ್

  |

  ಬಾಲಿವುಡ್​ನ ಮೋಸ್ಟ್​ ಹ್ಯಾಂಡ್​ಸಮ್​, ಗ್ರೀಕ್​ ಗಾಡ್ ಅಂತಲೇ ಕರೆಸಿಕೊಳ್ಳುವ​ ಹೃತಿಕ್​ ರೋಷನ್​ ಬಗ್ಗೆ ಇದೀಗ ಹೆಚ್ಚಾಗಿ ಸುದ್ದಿಯಲ್ಲಿ ಇದ್ದಾರೆ. ಅದಕ್ಕೆ ಕಾರಣ ಮತ್ಯಾರೂ ಅಲ್ಲ, ಹೃತಿಕ್ ರೋಷನ್ ಹೊಸ ಗರ್ಲ್‌ಫ್ರೆಂಡ್. ಇತ್ತೀಚೆಗೆ ಹೃತಿಕ್ ಮತ್ತು ಸಬಾ ಇಬ್ಬರೂ ಸುತ್ತಾಡುತ್ತಾ ಇರುವುದು ಬಹಿರಂಗ ಆಗಿದೆ.

  ಇದು ಕೇವಲ ಗಾಸಿಪ್ ಎಂದು ಸುದ್ದಿ ಆಗುತ್ತಿತ್ತು. ಅದರೆ ಈಗ ಹೃತಿಕ್ ರೋಷನ್ ತನ್ನ ಹೊಸ ಹುಡುಗಿ ಜೊತೆ ನೇರವಾಗಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ಹಾಗಾಗಿ ಇವರು ಪ್ರೀತಿಯಲ್ಲಿ ಇರೋ ವಿಷ್ಯ ಕೇವಲ ಗಾಳಿ ಸುದ್ದಿ ಆಗಿ ಮಾತ್ರ ಉಳಿದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.

  ಪತ್ನಿಯಿಂದ ವಿಚ್ಛೇದನ ಪಡೆದುಕೊಂಡ ಬಳಿಕ ಅಷ್ಟಾಗಿ ಈ ರೀತಿ ವಿಚಾರದಲ್ಲಿ ಹೃತಿಕ್ ಸುದ್ದಿ ಆಗಿರಲಿಲ್ಲ. ಪತ್ನಿಯಿಂದ ದಾಂಪತ್ಯದ ಸಂಬಂಧ ಮುರಿದುಕೊಂಡರೂ, ಫ್ರೆಂಡ್ಸ್ ಅಗಿ ಇದ್ದಾರೆ. ಆಗಾಗ ಮಕ್ಕಳೊಂದಿಗೆ ಹೃತಿಕ್ ಕಾಲ ಕಳೆಯುತ್ತಿದ್ದರು. ಮಾಜಿ ಪತ್ನಿ ಜೊತೆಗೂ ಕಾಣಿಸಿಕೊಳ್ಳುತ್ತಾ ಇದ್ದರು.

  ಮುಂಬೈ ಹೋಟೆಲ್‌ನಲ್ಲಿ ಗರ್ಲ್‌ಫ್ರೆಂಡ್ ಜೊತೆ ಹೃತಿಕ್!

  ಸಬಾ ಹಾಗೂ ಹೃತಿಕ್ ಮುಂಬೈನ ಕೆಫೆಯೊಂದಕ್ಕೆ ಭೇಟಿ ನೀಡಿದ್ದಾರೆ. ಅಲ್ಲಿ ರಾತ್ರಿಯ ಊಟಕ್ಕಾಗಿ ತೆರಳಿದ್ದಾರೆ. ಅಂದರೆ ಡಿನ್ನರ್ ಡೇಟ್​ಗೆ ತೆರಳಿದ್ದರು. ಕೆಫೆಯಿಂದ ಹೊರಬರುವಾಗ ಇಬ್ಬರಿಗೂ ಶಾಕ್ ಕಾದಿತ್ತು. ಅಲ್ಲಿನ ಮಾಧ್ಯಮಗಳು ಕ್ಯಾಮೆರಾ ಹಿಡಿದು ಬಾಗಿಲ ಬಳಿಯೇ ನಿಂತು ಬಿಟ್ಟಿದ್ದವು. ಹಾಗಾಗಿ ಹೃತಿಕ್ ಮತ್ತು ಸಬಾ ಡಿನ್ನರ್ ಡೇಟಿಂಗ್ ವೇಳೆ ಸಿಕ್ಕಿ ಬಿದ್ದಿದ್ದಾರೆ. ಹೃತಿಕ್ ರೋಷನ್ ಸಬಾ ಅವರ ಕೈ ಹಿಡಿದು ಮುಂದೆ ಸಾಗಿದ್ದಾರೆ.

  ಮುಖ ಮರೆಮಾಚಲು ಪ್ರಯಾಸ ಪಟ್ಟ ಸಬಾ!

  ಕ್ಯಾಮೆರಾ ಕಣ್ಣಿಗೆ ಬೀಳುತ್ತಲೇ ಸಬಾ ನಡುವಳಿ ಬದಲಾಯ್ತು. ಕ್ಯಾಮೆರಾಗಳನ್ನು ಕಂಡು ಸಬಾಗೆ ಕಸಿವಿಸಿ ಆಯ್ತು. ಹಾಗಾಗಿ ಉದ್ದನೆಯ ಕೂದಲಿನಿಂದ ತಮ್ಮ ಮುಖವನ್ನು ಸಂಪೂರ್ಣವಾಗ ಮುಚ್ಚಿಕೊಳ್ಳುತ್ತಾರೆ. ಹಾಗೆ ತಲೆ ತಗ್ಗಿಸಿ ಕೊಂಡು ಹೃತಿಕ್ ಕೈ ಹಿಡಿದು ನಡೆದು ಬರುತ್ತಾರೆ. ಇದಿಷ್ಟು ವಿಡಿಯೋದಲ್ಲಿ ಸೆರೆಯಾಗಿದೆ. ಹಾಗಾಗಿ ಇದು ಕೂಡ ಟ್ರೋಲ್ ಆಗಿದೆ. ಹೀಗೆ ಮುಖ ಮುಚ್ಚಿಕೊಳ್ಳುವುದರ ಪ್ರಯೋಜನ ಏನು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

  English summary
  Hrithik Roshan Caught Again With New Girl friend Saba Azad, Pics Going Vairal,
  Saturday, February 5, 2022, 17:22
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X