ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರುತ್ತಿರುವ ಈ ಪ್ರಖ್ಯಾತ ನಟ ಯಾರು ಗೊತ್ತಾ.?

By Harshitha

Recommended Video

ಹಪ್ಪಳ ಮಾರುತ್ತಿರುವ ಈ ಪ್ರಖ್ಯಾತ ನಟ ಯಾರು ಗೊತ್ತಾ.? | Filmibeat Kannada

ಜೈಪುರದ ಬೀದಿಗಳಲ್ಲಿ ಹಪ್ಪಳ ಮಾರುತ್ತಿರುವ ಪ್ರಖ್ಯಾತ ನಟ ಯಾರಪ್ಪಾ ಅಂತ ಶೀರ್ಷಿಕೆ ನೋಡಿದ ಕೂಡಲೆ ಏನೇನೋ ಕಲ್ಪನೆ ಮಾಡಿಕೊಳ್ಳಬೇಡಿ.. ಯಾಕಂದ್ರೆ, ನಾವು ಹೇಳ್ತಿರೋದು ಜಸ್ಟ್ ರೀಲ್ ಸುದ್ದಿ ಅಷ್ಟೇ.

ಬಾಲಿವುಡ್ ನಟ, ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಜೈಪುರ ಬೀದಿಗಳಲ್ಲಿ ಹಪ್ಪಳ ಮಾರುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಆಗಿದೆ. ನೀವೆಲ್ಲ ಊಹಿಸಿರುವಂತೆ ಇದು ಸಿನಿಮಾವೊಂದರ ಶೂಟಿಂಗ್ ಗಾಗಿ ಅಷ್ಟೇ.

ಅಷ್ಟಕ್ಕೂ, ಅದ್ಯಾವ ಸಿನಿಮಾದಲ್ಲಿ ಹೃತಿಕ್ ರೋಷನ್ ಈ ಅವತಾರ ತಾಳಿದ್ದಾರೆ. ಹೃತಿಕ್ ರೋಷನ್ ಹಪ್ಪಳ ಮಾರುತ್ತಿರುವುದು ಯಾಕೆ ಅಂತೀರಾ.? ಸಂಪೂರ್ಣ ವರದಿ ಇಲ್ಲಿದೆ, ಓದಿರಿ....

ಕಂಡುಹಿಡಿಯೋಕೆ ಆಗಲ್ಲ.!

ಕಂಡುಹಿಡಿಯೋಕೆ ಆಗಲ್ಲ.!

ಪ್ಯಾಂಟು-ಶರ್ಟು ತೊಟ್ಟು, ಹೆಗಲ ಮೇಲೊಂದು ಟವಲ್ ಹಾಕೊಂಡು, ಸೈಕಲ್ ಹಿಂದೆ ಹಪ್ಪಳ, ಸಂಡಿಗೆಯ ಬುಟ್ಟಿ ಹಿಡಿದುಕೊಂಡು ಜೈಪುರದ ಬೀದಿಗಳಲ್ಲಿ ಹೃತಿಕ್ ರೋಷನ್ ತಿರುಗಾಡುತ್ತಿದ್ರೆ, ಅವರನ್ನ ಯಾರೂ ಕಂಡು ಹಿಡಿಯಲೇ ಇಲ್ಲ.

ಇದು ಯಾವ ಸಿನಿಮಾಗಾಗಿ.?

ಇದು ಯಾವ ಸಿನಿಮಾಗಾಗಿ.?

ವಿಕಾಸ್ ಬಾಹ್ಲ್ ನಿರ್ದೇಶನದ 'ಸೂಪರ್ 30' ಚಿತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡಿರುವ ಪರಿ ಇದು.

ಗಣಿತಜ್ಞ ಆನಂದ್ ಸಾಧನೆ ಕುರಿತ ಚಿತ್ರ ಇದು

ಗಣಿತಜ್ಞ ಆನಂದ್ ಸಾಧನೆ ಕುರಿತ ಚಿತ್ರ ಇದು

ಬಿಹಾರದ ಗಣಿತಜ್ಞ ಆನಂದ್ ಕುಮಾರ್ ಅವರ ಜೀವನ ಚರಿತ್ರೆಯೇ ಈ 'ಸೂಪರ್ 30' ಸಿನಿಮಾ. ಆನಂದ್ ಕುಮಾರ್ ಆಗಿ ತೆರೆಮೇಲೆ ಹೃತಿಕ್ ರೋಷನ್ ಮಿಂಚಲಿದ್ದಾರೆ. ಆರ್ಥಿಕವಾಗಿ ಹಿಂದುಳಿದ 30 ವಿದ್ಯಾರ್ಥಿಗಳನ್ನು ಪ್ರತಿವರ್ಷ ಪ್ರತಿಷ್ಟಿತ ಐಐಟಿ ಪರೀಕ್ಷೆಗೆ ಸಜ್ಜುಗೊಳಿಸಿ ಯಶಸ್ಸು ಪಡೆದ ಆನಂದ ಅವರ ಸಾಧನೆಯನ್ನು ಈ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ.

ಹೃತಿಕ್ ರೋಷನ್ ಜೋಡಿ ಯಾರು.?

ಹೃತಿಕ್ ರೋಷನ್ ಜೋಡಿ ಯಾರು.?

'ಕುಂಕುಮ್ ಭಾಗ್ಯ' ಧಾರಾವಾಹಿ ಖ್ಯಾತಿಯ ಮೃಣಾಲ್ ಠಾಕೂರ್ 'ಸೂಪರ್ 30' ಚಿತ್ರದಲ್ಲಿ ಹೃತಿಕ್ ರೋಷನ್ ಜೋಡಿಯಾಗಿ ಅಭಿನಯಿಸಿದ್ದಾರೆ.

ಮುಂದಿನ ವರ್ಷ ಬಿಡುಗಡೆ

ಮುಂದಿನ ವರ್ಷ ಬಿಡುಗಡೆ

'ಸೂಪರ್ 30' ಚಿತ್ರದಲ್ಲಿ ಹೃತಿಕ್ ರೋಷನ್ ತಾಳಿರುವ ಅವತಾರಕ್ಕೆ ಈಗಾಗಲೇ ವ್ಯಾಪಕ ಮೆಚ್ಚುಗೆ ಪಾತ್ರವಾಗಿದೆ. ಸದ್ಯ ಚಿತ್ರೀಕರಣದ ಹಂತದಲ್ಲಿ ಇರುವ 'ಸೂಪರ್ 30' ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.

More from Filmibeat

English summary
Bollywood Actor Hrithik Roshan caught selling papads on the streets of Jaipur for his upcoming flick 'Super 30'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X