Fighter Trailer: ದೇಶಪ್ರೇಮ ಉಕ್ಕಿಸುವ ಬಲು ರೋಚಕ 'ಫೈಟರ್' ಹೋರಾಟದ ಝಲಕ್

ವರ್ಷದ ಬಹುನಿರೀಕ್ಷಿತ ಬಾಲಿವುಡ್ ಚಿತ್ರದ 'ಫೈಟರ್' ಟ್ರೈಲರ್ ರಿಲೀಸ್ ಆಗಿದೆ. ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಏರಿಯಲ್ ಆಕ್ಷನ್ ಡ್ರಾಮಾ ಸಿನಿಮಾ ಗಣರಾಜ್ಯೋತ್ಸವ ಸಂಭ್ರಮದಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ಹೃತಿಕ್ ರೋಷನ್ ಜೋಡಿಯಾಗಿ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. ಈ ಹಿಂದೆ ಬಂದಿದ್ದ ಟೀಸರ್‌ಗೂ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು.

ವಯಕಾಂ18 ಸ್ಟುಡಿಯೋಸ್ ಹಾಗೂ ಮಾರ್‌ಫ್ಲಿಕ್ಸ್ ಪಿಕ್ಚರ್ಸ್ ಸಂಸ್ಥೆಗಳು ಜಂಟಿಯಾಗಿ 'ಫೈಟರ್' ಸಿನಿಮಾ ನಿರ್ಮಾಣ ಮಾಡಿವೆ. ಚಿತ್ರದಲ್ಲಿ ವಾಯುಪಡೆಯ ಅಧಿಕಾರಿಗಳಾಗಿ ಹೃತಿಕ್ ರೋಷನ್ ಹಾಗೂ ದೀಪಿಕಾ ಪಡುಕೋಣೆ ಮಿಂಚಿದ್ದಾರೆ. 3 ನಿಮಿಷಗಳ ಟ್ರೈಲರ್ ನೋಡುಗರಿಗೆ ಅದ್ಭುತ ಅನುಭವ ನೀಡುತ್ತದೆ. ಸಿನಿಮಾ ನೋಡಲೇಬೇಕು ಎನ್ನುವ ಕಾತರ ಹೆಚ್ಚಿಸುತ್ತದೆ. ಗ್ರೂಪ್ ಕ್ಯಾಪ್ಟನ್ (ಅನಿಲ್ ಕಪೂರ್) ರಾಕೇಶ್ ಜೈ ಸಿಂಗ್, ಸ್ಕ್ವಾಡ್ರನ್ ಲೀಡರ್ ಶಂಷೇರ್ ಪಠಾನಿಯಾ (ಹೃತಿಕ್ ರೋಷನ್), ಸ್ಕ್ವಾಡ್ರನ್ ಲೀಡರ್ ಮಿನಲ್ ರಾಥೋರ್ (ದೀಪಿಕಾ ಪಡುಕೋಣೆ ನಿರ್ವಹಿಸಿದ್ದಾರೆ) ಸೇರಿದಂತೆ ಇತರೆ ಒಂದು ತಂಡವನ್ನು ರಚಿಸುತ್ತಾರೆ. ಎಲ್ಲರೂ ಆತ್ಮೀಯ ಒಡನಾಟ ಬೆಳೆಸಿಕೊಳ್ಳುವಂತೆ ಸಲಹೆ ನೀಡುವ ಮೂಲಕ ಟ್ರೈಲರ್ ಆರಂಭವಾಗುತ್ತದೆ.

Hrithik Roshan, Deepika Padukone Starrer Fighter action packed trailer released

ಪುಲ್ವಾಮಾ ದಾಳಿಯ ಬಳಿಕ ಶಾಂತಿ ಕದಡಿದಾಗ ಶಂಷೇರ್ ಪಠಾನಿಯಾ ಮತ್ತವನ ತಂಡವನ್ನು ಜೀವಮಾನದ ಕಾರ್ಯಾಚರಣೆಗೆ ನಿಯೋಜಿಸಲಾಗುತ್ತದೆ. ದೇಶದ ಗಡಿಯಲ್ಲಿ ಏರ್‌ಸ್ಟ್ರೈಕ್ ನಡೆಸುವ ಮೂಲಕ ಶಂಷೇರ್ ದೇಶವನ್ನು ದುಷ್ಟರಿಂದ ಕಾಪಾಡುವ ಕಥೆಯನ್ನು ಹೇಳಲಾಗಿದೆ. ವೈಮಾನಿಕ ದಾಳಿಯ ರೋಚಕ ಸನ್ನಿವೇಶಗಳಿಂದ ಟ್ರೈಲರ್ ಗಮನ ಸೆಳೆಯುತ್ತದೆ.

ಮಿಷನ್‌ನಲ್ಲಿರುವ ಹೃತಿಕ್ ರೋಷನ್, ತನ್ನ ದೇಶವನ್ನು ಉಳಿಸಲು ಮತ್ತು ತನ್ನ ಸಹ ಸಹಚರರ ಸಾವಿಗೆ ಸೇಡು ತೀರಿಸಿಕೊಳ್ಳುವುದು ಹೇಗೆ? ಹೃತಿಕ್- ದೀಪಿಕಾ ಪ್ರೇಮ್ ಕಹಾನಿ ಏನು? ಇದೆಲ್ಲದಕ್ಕು ಉತ್ತರ ಜನವರಿ 25ರಂದು ಥಿಯೇಟರ್‌ಗಳಲ್ಲಿ ಸಿಗಲಿದೆ. ಮೊದಲ ನೋಟದಲ್ಲೇ 'ಫೈಟರ್' ಟ್ರೈಲರ್ ಮಜಾ ಕೊಡುತ್ತದೆ. ಪ್ರೇಕ್ಷಕರನ್ನು ಸೀಟಿನ ತುದಿಗೆ ತಂದು ಕೂರಿಸುವಂತಹ ಎಲಿವೇಷನ್ ಸೀನ್ಸ್ ಸಾಕಷ್ಟಿವೆ. ಎಲ್ಲಕ್ಕಿಂತ ಮುಖ್ಯವಾಗಿ ಏರಿಯಲ್ ಆಕ್ಷನ್ ಅನ್ನೋದೇ ಪ್ರೇಕ್ಷಕರಿಗೆ ಹೊಸ ಅನುಭವ ನೀಡಲಿದೆ.

Hrithik Roshan, Deepika Padukone Starrer Fighter action packed trailer released

ಗಡಿಯಲ್ಲಿ ಭಯೋತ್ಪಾದಕರ ಉಪಟಳ, ಅದಕ್ಕೆ ವಾಯಪಡೆಯ ತಿರುಗೇಟು, ಸೇಡು, ದೇಶಭಕ್ತಿ ಹೀಗೆ ಸಾಕಷ್ಟು ಅಂಶಗಳು ಚಿತ್ರದಲ್ಲಿದೆ. ಇನ್ನು ಇದೇ ಮೊದಲ ಬಾರಿಗೆ ಜೊತೆಯಾಗಿರುವ ಹೃತಿಕ್- ದೀಪಿಕಾ ಜೋಡಿಯ ಕೆಮೆಸ್ಟ್ರಿ ಕೂಡ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡಲಿದೆ. ಅನಿಲ್ ಕಪೂರ್, ಹೃತಿಕ್, ದೀಪಿಕಾ ಜೊತೆಗೆ ಕರಣ್ ಸಿಂಗ್ ಗೋವರ್, ಅಕ್ಷಯ್ ಒಬೆರಾಯ್, ತಲಕ್ ಅಜಿಜ್, ಸಂಜೀವ್ ಜೈಸ್ವಾಲ್, ಅಶುತೋಷ್ ರಾಣಾ ಸೇರಿದಂತೆ ದೊಡ್ಡ ತಾರಾಗಣ 'ಫೈಟರ್' ಚಿತ್ರದಲ್ಲಿದೆ.

ದೀಪಿಕಾ ಪಡುಕೋಣೆ ಚಿತ್ರದಲ್ಲಿ ಸಿಕ್ಕಾಪಟ್ಟೆ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಬಿಕಿನಿಯಲ್ಲೂ ದರ್ಶನ ಕೊಟ್ಟಿದ್ದಾರೆ. ಈ ಹಿಂದೆ ಬಂದಿದ್ದ ಟೀಸರ್‌ನಲ್ಲಿ ಅದರ ಝಲಕ್ ಇತ್ತು. ಜೆಟ್ ಪೈಲೆಟ್ ಆಗಿ ನಟಿಸಲು ಹೃತಿಕ್ ರೋಷನ್ ವಿಶೇಷ ತರಬೇತಿ ಕೂಡ ಪಡೆದಿದ್ದಾರೆ. ಅಸ್ಸಾಂ, ಮುಂಬೈ, ಕಾಶ್ಮೀರ್, ಹೈದರಬಾದ್ ಸೇರಿದಂತೆ ಹಲವು ಭಾಗಗಳಲ್ಲಿ 'ಫೈಟರ್' ಸಿನಿಮಾ ಚಿತ್ರೀಕರಣ ನಡೆದಿದೆ.

ಕಳೆದ ವರ್ಷ 'ಟೈಗರ್'-3 ಚಿತ್ರದಲ್ಲಿ ಹೃತಿಕ್ ರೋಷನ್ ಗೆಸ್ಟ್ ಅಪಿಯರೆನ್ಸ್ ಮಾತ್ರ ಮಾಡಿದ್ದರು. ಈ ವರ್ಷ ಆರಂಭದಲ್ಲೇ ಭರ್ಜರಿ ಸಿನಿಮಾ ಮೂಲಕ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇನ್ನು ಈ ವರ್ಷ ಶಾರುಖ್ ಖಾನ್, ಸಲ್ಮಾನ್ ಖಾನ್, ಆಮೀರ್ ಖಾನ್ ನಟನೆಯ ಯಾವುದೇ ಸಿನಿಮಾ ಥಿಯೇಟರ್‌ಗೆ ಬರುವ ಸಾಧ್ಯತೆಯಿದೆ. ವರ್ಷದ ಅತಿದೊಡ್ಡ ಸಿನಿಮಾಗಳಲ್ಲಿ 'ಫೈಟರ್' ಕೂಡ ಒಂದು.

More from Filmibeat

English summary
Fighter film official trailer out now
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X