ಶ್ರದ್ಧಾ ಕಪೂರ್ ಪೋಸ್ಟ್‌ಗೆ ಕಾಮೆಂಟ್ ಮಾಡಿ 'ಕ್ರಿಶ್ 4' ಬಗ್ಗೆ ಸುಳಿವು ನೀಡಿದ್ರಾ ಹೃತಿಕ್ ರೋಷನ್?

ಬಾಲಿವುಡ್‌ನ ಪ್ರಮುಖ ನಟಿಯರಲ್ಲಿ ಶ್ರದ್ಧಾ ಕಪೂರ್ ಕೂಡ ಒಬ್ಬರು. ಹಲವು ಸಿನಿಮಾಗಳ ಮೂಲಕ ಜನರ ಮನ ಗೆದ್ದಿರುವ ಅವರು, ಕೋಟ್ಯಾಂತರ ಅಭಿಮಾನಿಗಳ ಮನಗೆದ್ದಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್‌ಗಳನ್ನು ಹೊಂದಿರುವ ಶ್ರದ್ಧಾ ಆಗ್ಗಾಗ್ಗೆ ತಮ್ಮ ಫ್ಯಾನ್ಸ್‌ಗಾಗಿ ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ.

ಸ್ತ್ರೀ, ಸಾಹೋ, ಆಶಿಕಿ 2 ಮತ್ತು ಏಕ್ ವಿಲನ್ ನಂತಹ ಚಲನಚಿತ್ರಗಳಲ್ಲಿನ ತಮ್ಮ ಪಾತ್ರಗಳಿಂದ ಪ್ರೇಕ್ಷಕರನ್ನು ಮೆಚ್ಚುಗೆ ಗಳಿಸಿರುವ ಅವರು, ತಮ್ಮ ನಟನೆ ಮತ್ತು ಸೌಂದರ್ಯದಿಂದ ಕಮಾಲ್ ಮಾಡಿದ್ದಾರೆ. ಇತ್ತೀಚೆಗೆ, ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಫೋಟೋಗಳಿಗೆ ಅಭಿಮಾನಿಗಳು ಪ್ರೀತಿಯ ಮಳೆ ಸುರಿಸಿದ್ದಾರೆ. ಆದರೆ, ಇದರಲ್ಲಿ ಗಮನ ಸೆಳೆದದ್ದು ನಟ ಹೃತಿಕ್ ರೋಷನ್ ಅವರ ಕಾಮೆಂಟ್.

Hrithik Roshan drop hint about Krrish 4 in Shraddha Kapoor’s post!?

ಜಾದೂ ನೆನಪಿಸಿಕೊಂಡ ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ ಅಕ್ಟೋಬರ್ 19 ರಂದು ಇನ್‌ಸ್ಟಾಗ್ರಾಮ್‌ನಲ್ಲಿ ಮುಂಜಾನೆಯ ಸೂರ್ಯ ಕಿರಣಗಳು ಮುಖವನ್ನು ಸ್ಪರ್ಶಿಸುತ್ತಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅವರು "ಜಾದೂನಂತಹ ಬಿಸಿಲು (ಧೂಪ್) ಬೇಕು" ಎಂದು ಶೀರ್ಷಿಕೆ ಬರೆದಿದ್ದಾರೆ. ಚಿತ್ರಗಳಲ್ಲಿ, ಶ್ರದ್ಧಾ ಮುದ್ದಾಗಿ ಕಾಣಿಸಿದ್ದಾರೆ.

ಇನ್ನು, ಈ ಶೀರ್ಷಿಕೆಯನ್ನು ಗಮನಿಸುವುದಾದರೇ, ಈ ಜಾದೂ ಎಂಬುದು 2003 ರಲ್ಲಿ ಬಿಡುಗಡೆಯಾಗು ಸೂಪರ್ ಹಿಟ್ ಆಗಿರುವ 'ಕೋಯಿ... ಮಿಲ್ ಗಯಾ' ಸಿನಿಮಾದಿಂದ ಗುರುತಿಸಿಕೊಂಡ ಪದ. ಅನ್ಯಗ್ರಹದಿಂದ ಮಿಸ್ ಆಗಿ ನಮ್ಮ ಗ್ರಹದಲ್ಲಿ ಉಳಿದುಕೊಳ್ಳುವ ಜೀವಿಗೆ ಸಿನಿಮಾ ನಾಯಕ ನಟ ಹೃತಿಕ್ ರೋಷನ್ ಇಡುವ ಹೆಸರು ಜಾದೂ. ಜಾದೂಗೆ ಆಹಾರದ ತರಹ ಇದ್ದದ್ದು, ಧೂಪ್ ಅಂದರೆ ಎಲೆ ಬಿಸಿಲು. ಸಿನಿಮಾದಲ್ಲಿ ಹೃತಿಕ್ ರೋಷನ್ ಮತ್ತು ಪ್ರೀತಿ ಜಿಂಟಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಶ್ರದ್ಧಾ ಕಪೂರ್ ಫೋಟೋಗಳಿಗೆ ಹೃತಿಕ್ ರೋಷನ್ ಕಾಮೆಂಟ್

ನಟಿ ಶ್ರದ್ಧಾ ಕಪೂರ್ ಅವರ ಪೋಸ್ಟ್‌ ತನ್ನ ಫಾಲೋವರ್ಸ್ ಮತ್ತು ಅಭಿಮಾನಿಗಳ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದರ ಜೊತೆಗೆ ನಟ ಹೃತಿಕ್ ರೋಷನ್ ಅವರ ಗಮನವನ್ನೂ ಸೆಳೆದಿದೆ. ಶ್ರದ್ಧಾ ಫೋಟೋಗೆ ಪ್ರತಿಕ್ರಿಯಿಸಿರುವ ಅವರು,"ಅವರು (ಜಾದೂ) ಬರುತ್ತಿದ್ದಾರೆ. ಅವರಿಗೆ ಹೇಳುತ್ತೇನೆ" ಎಂದು ಹೇಳಿದ್ದಾರೆ. ಇದಕ್ಕೆ ರಿಪೈ ಮಾಡಿರುವ ಶ್ರದ್ಧಾ "ನಿಜವಾಗಿ ??? ಯಾವಾಗ.. ಏನು..? ಎಲ್ಲಿ...? ಹೇಳಿ ಹೇಳಿ" ಎಂದಿದ್ದಾರೆ.

Hrithik Roshan drop hint about Krrish 4 in Shraddha Kapoor’s post!?

ನಟ ಹೃತಿಕ್ ರೋಷನ್ 'ಕೋಯಿ...ಮಿಲ್ ಗಯಾ' ಚಿತ್ರದಲ್ಲಿ ರೋಹಿತ್ ಮೆಹ್ರಾ ಪಾತ್ರ ಮಾಡಿದ್ದರು. ಚಿತ್ರದಲ್ಲಿ ಅನ್ಯಗ್ರಹದ ಜೀವಿ ಜಾದೂ ಅವರ ಆತ್ಮೀಯ ಸ್ನೇಹಿತರಾಗಿದ್ದರು. ಶ್ರದ್ಧಾ ಮತ್ತು ಹೃತಿಕ್ ರೋಷನ್ ಅವರ ಕಾಮೆಂಟ್‌ಗಳಿಗೆ ಅಭಿಮಾನಿಗಳು ಮತ್ತಷ್ಟು ಕಾಮೆಂಟ್ ಮಾಡುವ ಮೂಲಕ ಟ್ರೆಂಡ್ ಮಾಡಿದ್ದಾರೆ.

ಕ್ರಿಶ್ 4 ಯಾವಾಗ ಹೇಳಿ ಎಂದ ಅಭಿಮಾನಿಗಳು!

"ಶ್ರದ್ಧಾಕಪೂರ್ ಮೇಡಂ ನಾವು ಹೃತಿಕ್ ರೋಷನ್ ಅವರ ಅಭಿಮಾನಿಗಳು. ಜಾದೂ ಮತ್ತೆ ಬರುತ್ತಾರಾ ಎಂದು ಟ್ವಿಟ್ಟರ್‌ನಲ್ಲಿ ಅವರನ್ನು ಕೇಲಿ ಕೇಳಿ ಸಾಕಾಗಿದ್ದೇವೆ. ಬರುತ್ತಾರೋ ಇಲ್ಲವೋ ಎಂಬ ಬಗ್ಗೆ ಅವರು ಇವತ್ತಿನವರೆಗೂ ಹೇಳಿಲ್ಲ. ನೀವಾದರೂ ಇದರ ಬಗ್ಗೆ ಕೇಳಿ. ಕ್ರಿಶ್ 4 ಬಗ್ಗೆಯೂ ಮಾಹಿತಿ ಕೊಡಿಸಿ" ಎಂದು ಕಾಮೆಂಟ್ ಮಾಡುತ್ತಿದ್ದಾರೆ.

'ಕೋಯಿ...ಮಿಲ್ ಗಯಾ' ಹಿಂದಿ ಚಿತ್ರರಂಗದಲ್ಲಿ ಸೂಪರ್ ಹಿಟ್ ಆದ ಬಳಿಕ ಅದರ ಸೀಕ್ವೆಲ್‌ಗಲಿ ಬಂದಿವೆ. ಕ್ರಿಶ್ ಮತ್ತು ಕ್ರಿಶ್ 3 ಸರಣಿಗಳು ಬಂದಿವೆ. ಹೀಗಾಗಿ ಮತ್ತೆ ಕ್ರಿಶ್ 4 ಬರಲಿದೆ ಎಂಬ ವದಂತಿಗಳಿವೆ. ಇದಕ್ಕೆ ತಕ್ಕಂತೆ ನಟ ಹೃತಿಕ್ ರೋಷನ್ ಕಾಮೆಂಟ್ ಮಾಡುವ ಮೂಲಕ ಸುಳಿವು ಬಿಟ್ಟುಕೊಟ್ಟಿದ್ದಾರೆ.

ಶ್ರದ್ಧಾ ಕಪೂರ್

ನಟಿ ಶ್ರದ್ಧಾ ಕೊನೆಯದಾಗಿ ರಣಬೀರ್ ಕಪೂರ್ ಜೊತೆಗೆ ಲುವ್ ರಂಜನ್ ನಿರ್ದೇಶನದ 'ತು ಜೂಟಿ ಮೈನ್ ಮಕ್ಕರ್' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಚಿತ್ರದಲ್ಲಿ ಅನುಭವ್ ಸಿಂಗ್ ಬಸ್ಸಿ, ಡಿಂಪಲ್ ಕಪಾಡಿಯಾ ಮತ್ತು ಬೋನಿ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂದ್ದರು. ಇದಾದ ಬಳಿಕ ಶ್ರದ್ಧಾ ಅಮರ್ ಕೌಶಿಕ್ ಅವರ 'ಸ್ತ್ರೀ 2' ಚಿತ್ರೀಕರಣದಲ್ಲಿದ್ದಾರೆ. ಸಿನಿಮಾದಲ್ಲಿ ರಾಜ್‌ಕುಮಾರ್ ರಾವ್ ಮತ್ತು ಪಂಕಜ್ ತ್ರಿಪಾಠಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇನ್ನು, ನಟ ಹೃತಿಕ್ ರೋಷನ್ ಪೈಟರ್ ಸಿನಿಮಾ ಮಾಡುತ್ತಿದ್ದಾರೆ. ಇದಕ್ಕಾಗಿ ತಮ್ಮ ದೇಹವನ್ನು ದಂಡಿಸಿದ್ದು ಅದರ ಫೋಟೋಗಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಐದು ವಾರಗಳಲ್ಲಿ ತಾವು ಹೇಗೆ ಸಿಕ್ಸ್ ಪ್ಯಾಕ್ ಬರಿಸಿದ್ದು, ದೇಹವನ್ನು ಫಿಟ್ ಆಗಿ ಇಟ್ಟುಕೊಂಡಿದ್ದು ಎಂಬ ತಮ್ಮ ಜರ್ನಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು.

More from Filmibeat

English summary
Hrithik Roshan about Krrish 4.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X