For Quick Alerts
  ALLOW NOTIFICATIONS  
  For Daily Alerts

  ಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಖಾನ್, ಗಾಯಕ ಗುರು ರಾಂಧವ ಬಂಧನ

  |

  ಕೊರೊನಾ ವೈರಸ್ ಲಾಕ್‌ಡೌನ್ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಖಾನ್, ಗಾಯಕ ಗುರು ರಾಂಧವ ಅವರನ್ನು ಮುಂಬೈ ಪೊಲೀಸರು ಬಂಧಿಸಿರುವ ಘಟನೆ ನಿನ್ನೆ (ಡಿಸೆಂಬರ್ 21) ನಡೆದಿದೆ.

  ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯಿರುವ ಖಾಸಗಿ ಕ್ಲಬ್‌ವೊಂದರಲ್ಲಿ ನಡೆದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮುಂಬೈ ಪೊಲೀಸರು ದಾಳಿ ನಡೆಸಿ ಸುಸೈನ್ ಖಾನ್, ಗುರು ರಾಂಧವ, ಕ್ರಿಕೆಟಿಗ ಸುರೇಶ್ ರೈನಾ ಹಾಗೂ ಕ್ಲಬ್ ಸಿಬ್ಬಂದಿ ಸೇರಿ 33 ಮಂದಿವನ್ನು ವಶಕ್ಕೆ ಪಡೆದುಕೊಂಡಿದ್ದರು ಎಂದು ತಿಳಿದು ಬಂದಿದೆ.

  ಶ್ವಾನದ ಮೇಲೆ ಹಲ್ಲೆ ಮಾಡಿದ ವ್ಯಕ್ತಿ: ಖಂಡಿಸಿದ ನಟಿ ಐಂದ್ರಿತಾ ರೇ

  ಲಾಕ್‌ಡೌನ್ ನಿಯಮ ಉಲ್ಲಂಘನೆ ಆರೋಪದಡಿ ಬಂಧಿತರಾಗಿದ್ದ ಗಾಯಕ ಗುರು ರಾಂಧವ, ಸುಸೈನ್ ಖಾನ್ ಹಾಗೂ ಕ್ರಿಕೆಟಿಗ ಸುರೇಶ್ ರೈನಾ ಸೇರಿದಂತೆ ಎಲ್ಲರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಸಹರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇಂಡಿಯಾ ಟುಡೇಗೆ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

  ಮಹಾರಾಷ್ಟ್ರ ಸರ್ಕಾರ ಡಿಸೆಂಬರ್ 21 ರಿಂದ ಮುಂದಿನ ಹದಿನೈದು ದಿನಗಳ ವರೆಗೂ ರಾಜ್ಯದಲ್ಲಿ ನೈರ್ಟ ಕರ್ಫ್ಯೂ ಜಾರಿ ಮಾಡಿದೆ. ಆದರೆ, ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ ಮುಂಬೈ ಕ್ಲಬ್ ರಾತ್ರಿ 2 ಗಂಟೆಯಾದರೂ ಪಾರ್ಟಿಗೆ ಅವಕಾಶ ನೀಡಿತ್ತು.

  ಎನ್‌ಸಿಬಿ ವಿಚಾರಣೆಗೆ ಮತ್ತೊಮ್ಮೆ ಹಾಜರಾದ ನಟಿ ಭಾರತಿ ಸಿಂಗ್ ಮತ್ತು ಪತಿ

  ಈ ಕುರಿತು ಮಾಹಿತಿ ಸಿಕ್ಕ ಕೂಡಲೇ ಮುಂಬೈ ಪೊಲೀಸರು ಕ್ಲಬ್ ಮೇಲೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಕೆಲವರನ್ನು ಹಿಂಬಾಗಿಲಿನಿಂದ ಹೊರಗೆ ಕಳುಹಿಸಲಾಗಿದೆ. ಉಳಿದವರನ್ನು ಪೊಲೀಸರು ಅರೆಸ್ಟ್ ಮಾಡಿ ನಂತರ ಜಾಮೀನಿನ ಮೇಲೆ ಕಳುಹಿಸಿಕೊಟ್ಟಿದ್ದಾರೆ.

  English summary
  Singer Guru Randhawa, Ex wife of Hrithik Roshan Sussanne Khan arrested in raid at Mumbai club for violating Covid19 norms, released on bail.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X