ತಾರಕ್‌ನ ಯುದ್ಧಭೂಮಿಗೆ ಕರೆದ ಹೃತಿಕ್ ರೋಷನ್: ಟ್ವೀಟ್ ಮಾಡಿ ಕಾಲೆಳೆದ ಗ್ರೀಕ್ ಗಾಡ್
ಟಾಲಿವುಡ್ ನಟ ಜ್ಯೂ. ಎನ್‌ಟಿಆರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿಗಳು, ಆಪ್ತರು ನೆಚ್ಚಿನ ನಟನಿಗೆ ಶುಭಾಶಯಗಳ ಮಹಾಪೂರ ಹರಿಸುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ ತಾರಕ್ ನಟನೆಯ ಹೊಸ ಸಿನಿಮಾ ಟೈಟಲ್ ಪೋಸ್ಟರ್ ಕೂಡ ರಿವೀಲ್ ಆಗಿದೆ. ರಾಜಮೌಳಿ ನಿರ್ದೇಶನದ 'RRR' ಚಿತ್ರದಲ್ಲಿ ಕೊಮುರಂ ಭೀಮ್ ಆಗಿ ಅಬ್ಬರಿಸಿದ ಎನ್‌ಟಿಆರ್ ಬಾಲಿವುಡ್ ಎಂಟ್ರಿ ಕನ್ಫರ್ಮ್ ಆಗಿದೆ.
'ವಾರ್- 2' ಚಿತ್ರದಲ್ಲಿ ಜ್ಯೂ. ಎನ್‌ಟಿಆರ್ ನಟಿಸ್ತಾರೆ ಎನ್ನುವ ಗುಸುಗುಸು ಇತ್ತೀಚೆಗೆ ಭಾರೀ ಸದ್ದು ಮಾಡಿತ್ತು. ಕೆಲವರು ಇದು ನಿಜ ಅಂದರೆ ಮತ್ತೆ ಕೆಲವರು ಸುಳ್ಳು ಎಂದೇ ಅಂದುಕೊಂಡಿದ್ದರು. ಆದರೆ ತಾರಕ್ ಹುಟ್ಟುಹಬ್ಬದ ದಿನ ಸ್ವತಃ ಹೃತಿಕ್ ರೋಷನ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಟ್ವೀಟ್ ಮಾಡಿ ತಾರಕ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರಿರುವ ಹೃತಿಕ್ ನಿನ್ನೊಟ್ಟಿಗೆ ನಟಿಸೋಕೆ ಉತ್ಸುಕನಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಬಾಲಿವುಡ್ ನಟನ ಪೋಸ್ಟ್ ಸಖತ್ ವೈರಲ್ ಆಗ್ತಿದೆ.

"ಜನ್ಮದಿನದ ಶುಭಾಶಯಗಳು ತಾರಕ್. ಈ ದಿನ ಬಹಳ ಸಂತೋಷ ತುಂಬಿರಲಿ. ಇಡೀ ವರ್ಷ ಜಬರ್ದಸ್ತ್ ಆಗಿ ಇರಲಿ. ಯುದ್ಧಭೂಮಿಯಲ್ಲಿ ನಿನಗಾಗಿ ಕಾಯುತ್ತಿದ್ದೇನೆ ಗೆಳೆಯಾ. ನಾವಿಬ್ಬರು ಭೇಟಿ ಆಗುವವರೆಗೂ ನಿನ್ನ ದಿನಗಳು ಸಂತೋಷ ಮತ್ತು ಶಾಂತಿಯಿಂದ ತುಂಬಿರಲಿ" ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ. "ಹುಟ್ಟುಹಬ್ಬದ ಶುಭಾಶಯ ಮಿತ್ರ" ಎಂದು ತೆಲುಗಿನಲ್ಲೂ ಬರೆದುಕೊಂಡಿದ್ದಾರೆ.
'ವಾರ್- 2' ಚಿತ್ರದಲ್ಲಿ ತಾರಕ್
4 ವರ್ಷಗಳ ಹಿಂದೆ ಸಿದ್ದಾರ್ಥ್ ಆನಂದ್ ನಿರ್ದೇಶನದ 'ವಾರ್' ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹೃತಿತ್ ರೋಷನ್ ಜೊತೆಗೆ ಟೈಗರ್ ಶ್ರಾಫ್ ಚಿತ್ರದಲ್ಲಿ ಅಬ್ಬರಿಸಿದ್ದರು. ಯಶ್ ರಾಜ್ ಸಂಸ್ಥೆ ಈ ಸರಣಿಯನ್ನು ಮುಂದುವರೆಸುವ ಸಾಹಸಕ್ಕೆ ಕೈ ಹಾಕಿದೆ. ಅಯಾನ್ ಮುಖರ್ಜಿ 'ವಾರ್- 2' ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಹೃತಿಕ್ ಎದುರು ಟಾಲಿವುಡ್ ನಟ ಜ್ಯೂ. ಎನ್‌ಟಿಆರ್ ಗುದ್ದಾಟಕ್ಕೆ ನಿಲ್ಲಲಿದ್ದಾರೆ. ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ಲಾಗಿದ್ದಾರೆ.

ನೆಗೆಟಿವ್ ಶೇಡ್ ರೋಲ್‌ನಲ್ಲಿ ತಾರಕ್
ಈವರೆಗೆ ಅಧಿಕೃತವಾಗಿ 'ವಾರ್- 2' ಸಿನಿಮಾ ಘೋಷಣೆ ಆಗಿಲ್ಲ. ಎನ್‌ಟಿಆರ್‌ಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಾ ಇದೀಗ ಹೃತಿಕ್ ಈ ವಿಚಾರವನ್ನು ಖಚಿತಪಡಿಸಿದ್ದಾರೆ. ಅಂದಹಾಗೆ 'RRR' ಚಿತ್ರದ ಮೂಲಕ ಉತ್ತರಭಾರತದ ಪ್ರೇಕ್ಷಕರಿಗೂ ತಾರಕ್ ಹತ್ತಿರವಾಗಿದ್ದಾರೆ. ಹಾಗಾಗಿ ಇಂತಾದೊಂದು ಅವಕಾಶ ಅರಸಿ ಬಂದಿದೆ. ಬಾಲಿವುಡ್ ಕಲಾವಿದರು ಸೌತ್ ಸಿನಿಮಾಗಳಲ್ಲಿ ಅದೇ ರೀತಿ ಸೌತ್ ಸ್ಟಾರ್ಸ್ ಹಿಂದಿ ಪ್ರಾಜೆಕ್ಟ್‌ಗಳಲ್ಲಿ ಕೆಲಸ ಮಾಡುವುದು ಈಗ ಸರ್ವೇಸಾಧಾರಣ ಅನ್ನಿಸಿಬಿಟ್ಟಿದೆ.
'ವಾರ್- 2' ಚಿತ್ರಕ್ಕಾಗಿ ಭಾರೀ ಸಂಭಾವನೆ
ತೆಲುಗಿನಲ್ಲೇ ದೊಡ್ಡ ದೊಡ್ಡ ಸಿನಿಮಾ ನಿರ್ಮಾಣ ಸಂಸ್ಥೆಗಳು ತಾರಕ್ ಜೊತೆ ಸಿನಿಮಾ ಮಾಡಲು ಕಾಯುತ್ತಿವೆ. ಆದರೆ ಇಂತಹ ಸಮಯದಲ್ಲಿ ಯಂಗ್ ಟೈಗರ್ ಬಾಲಿವುಡ್ ಎಂಟ್ರಿ ಯಾಕೆ ಎನ್ನುವ ಪ್ರಶ್ನೆ ಕೆಲವರನ್ನು ಕಾಡುತ್ತಿದೆ. 'ವಾರ್- 2' ಚಿತ್ರಕ್ಕಾಗಿ ತಾರಕ್ ಅಂದಾಜು 30 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗ್ತಿದೆ. ಒಟ್ನಲ್ಲಿ ತೆಲುಗು ನಟನ ಬಾಲಿವುಡ್ ಪಾದಾರ್ಪಣೆ ಕುತೂಹಲ ಮೂಡಿಸಿದೆ.
'ದೇವರ' ಆಗಿ ಯಂಗ್ ಟೈಗರ್
ಇನ್ನು ಕೊರಟಾಲ ಶಿವ ನಿರ್ದೇಶನದ ಚಿತ್ರದಲ್ಲಿ ತಾರಕ್ ನಟಿಸುತ್ತಿರುವುದು ಗೊತ್ತೇಯಿದೆ. ಈ ಚಿತ್ರಕ್ಕೆ ಇದೀಗ ಟೈಟಲ್ ಫಿಕ್ಸ್ ಆಗಿದೆ. ಎನ್‌ಟಿಆರ್30 ಚಿತ್ರಕ್ಕೆ 'ದೇವರ'(ದೇವರು) ಎನ್ನುವ ಟೈಟಲ್ ಇಟ್ಟಿದೆ ಚಿತ್ರತಂಡ. ಪೋಸ್ಟರ್ ಸಮೇತ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ಪೋಸ್ಟರ್ ಸಖತ್ ಸದ್ದು ಮಾಡ್ತಿದೆ. ಪಕ್ಕಾ ಮಾಸ್ ಎಂಟರ್‌ಟೈನರ್ ಚಿತ್ರ ಮೂಡಿ ಬರಲಿದೆ.


Click it and Unblock the Notifications











