ಹೃತಿಕ್ ರೋಷನ್ ನಡೆಗೆ ಭೇಷ್ ಎನ್ನಲೇಬೇಕು.!
ಬಾಲಿವುಡ್ ನಲ್ಲಿ ಹೊಸ ಕ್ರಾಂತಿ ಶುರುವಾಗಿದೆ. ನಟ ನಾನಾ ಪಾಟೇಕರ್ ವಿರುದ್ಧ ತನುಶ್ರೀ ದತ್ತಾ ಸಿಡಿದೆದ್ದ ಮೇಲೆ ನಟಿಯರು ಒಬ್ಬೊಬ್ಬರಾಗಿಯೇ ತಮಗಾದ 'ಕಹಿ' ಅನುಭವವನ್ನು ಬಹಿರಂಗ ಪಡಿಸಲು ಮುಂದಾಗಿದ್ದಾರೆ.
ತನುಶ್ರೀ ದತ್ತಾಗೆ ನಟಿಯರಾದ ಪ್ರಿಯಾಂಕಾ ಛೋಪ್ರಾ, ಅನುಷ್ಕಾ ಶರ್ಮಾ, ಸೋನಂ ಕಪೂರ್ ಸಪೋರ್ಟ್ ಮಾಡಿದ್ದರು. ಆದ್ರೆ, ದಿಗ್ಗಜರಾದ ಅಮಿತಾಬ್ ಬಚ್ಚನ್, ಆಮೀರ್ ಖಾನ್, ಸಲ್ಮಾನ್ ಖಾನ್ ಈ ಬಗ್ಗೆ ಪ್ರತಿಕ್ರಿಯೆ ಕೊಡಲು ಹಿಂದೇಟು ಹಾಕಿದ್ದರು.
ನಾನಾ ಪಾಟೇಕರ್ ಹಾಗೂ ವಿವೇಕ್ ಅಗ್ನಿಹೋತ್ರಿ ಮುಖವಾಡ ಕಳಚಿ ಬಿದ್ಮೇಲೆ ನಿರ್ದೇಶಕ ವಿಕಾಸ್ ಬಾಹ್ಲ್ ಬಂಡವಾಳ ಬಯಲಾಯಿತು. ವಿಕಾಸ್ ಬಾಹ್ಲ್ ವಿರುದ್ಧ ಕಂಗನಾ ರಣೌತ್ ಸೇರಿದಂತೆ ಇಬ್ಬರು ನಟಿಯರು ಗಂಭೀರ ಆರೋಪ ಮಾಡಿದ್ದಾರೆ.
ಹೀಗಾಗಿ ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಹೃತಿಕ್ ರೋಷನ್ ಗುಡುಗಿದ್ದಾರೆ. ''ಇಂಥ ನಿರ್ದೇಶಕರ ಜೊತೆಗೆ ಕೆಲಸ ಮಾಡಲು ನನ್ನಿಂದ ಅಸಾಧ್ಯ'' ಎಂದು ನಟ ಹೃತಿಕ್ ರೋಷನ್ ಹೇಳಿದ್ದಾರೆ. ಹೃತಿಕ್ ರವರ ಈ ನಡೆಗೆ ಭೇಷ್ ಎನ್ನಲೇಬೇಕು. ಮುಂದೆ ಓದಿರಿ...

ಬೇಸರಗೊಂಡ ಹೃತಿಕ್ ರೋಷನ್
ನಟ ಹೃತಿಕ್ ರೋಷನ್ ಸದ್ಯ ವಿಕಾಸ್ ಬಾಹ್ಲ್ ನಿರ್ದೇಶನದ 'ಸೂಪರ್ 30' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಹೀಗಿರುವಾಗಲೇ, ವಿಕಾಸ್ ವಿರುದ್ಧ ಆರೋಪಗಳು ಕೇಳಿಬಂದಿವೆ. ಇದರಿಂದ ಹೃತಿಕ್ ರೋಷನ್ ಕೂಡ ಬೇಸರಗೊಂಡಿದ್ದಾರೆ.
ಹೃತಿಕ್ ಟ್ವೀಟ್ ನೋಡಿ
''ಅಸಭ್ಯ ವರ್ತನೆ ತೋರಿರುವವರ ಜೊತೆಗೆ ಕೆಲಸ ಮಾಡಲು ನನ್ನಿಂದ ಸಾಧ್ಯವಿಲ್ಲ. ನಾನು ದೂರ ಇರುವ ಕಾರಣ, ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಸತ್ಯವನ್ನ ಅರಿತು ಕಠಿಣ ನಿರ್ಧಾರ ತೆಗೆದುಕೊಳ್ಳುವ ಅಗತ್ಯವಿದ್ದರೆ ತೆಗೆದುಕೊಳ್ಳಿ ಎಂದು 'ಸೂಪರ್ 30' ನಿರ್ಮಾಪಕರಿಗೆ ಮನವಿ ಮಾಡಿರುವೆ. ಇಂತಹ ವಿಚಾರಗಳನ್ನು ಮುಚ್ಚಿಡಬಾರದು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ನೊಂದವರಿಗೆ ಮಾತನಾಡುವ ಧೈರ್ಯ ತುಂಬಬೇಕು'' ಎಂದು ಟ್ವೀಟ್ ಮಾಡಿದ್ದಾರೆ ಹೃತಿಕ್ ರೋಷನ್.

ವಿಕಾಸ್ ವಿರುದ್ಧ ಕಂಗನಾ ಗರಂ
''ನನ್ನನ್ನ ಬಿಗಿದಪ್ಪಿ ''ನನಗೆ ನಿನ್ನ ಸ್ಮೆಲ್ ಕಂಡ್ರೆ ಇಷ್ಟ'' ಎಂದು ವಿಕಾಸ್ ಹೇಳುತ್ತಿದ್ದರು. ಆತನ ಅಪ್ಪುಗೆಯಿಂದ ಬಿಡಿಸಿಕೊಳ್ಳಲು ನಾನು ಹೆಣಗಾಡಬೇಕಿತ್ತು. ಆತನಲ್ಲಿ ಏನೋ ಸಮಸ್ಯೆ ಇದೆ'' ಅಂತ ನಿರ್ದೇಶಕ ವಿಕಾಸ್ ಬಾಹ್ಲ್ ವಿರುದ್ಧ ಕಂಗನಾ ಗರಂ ಆದರು.

ವಿಕಾಸ್ ವಿರುದ್ಧ ಮತ್ತೋರ್ವ ನಟಿ ಆರೋಪ
''ಕುಡಿದ ನಶೆಯಲ್ಲಿ (ನಾಟಕ ಆಗಿರಬಹುದು) ಒತ್ತಾಯ ಪೂರ್ವಕವಾಗಿ ನನ್ನ ತುಟಿಗೆ ಮುತ್ತು ಕೊಡಲು ವಿಕಾಸ್ ಪ್ರಯತ್ನಿಸಿದರು. ನಾನು ಆತನನ್ನು ತಳ್ಳಿ ಆ ಜಾಗದಿಂದ ಹೊರಗೆ ಬಂದೆ. ಕುಡಿದ ನಶೆಯಲ್ಲಿ ತೇಲಾಡುವಂತೆ ನಾಟಕ ಆಡುವ ಅಭ್ಯಾಸ ವಿಕಾಸ್ ಗಿದೆ. ಅದೇ ಆತನ ಸ್ಟ್ರಾಟೆಜಿ. ಕುಡಿದಂತೆ ನಾಟಕ ಆಡಿ ಬಳಿಕ ''ನಾನೇನೂ ಮಾಡಲಿಲ್ಲ. ನೀವೇನಾದರೂ ಮಾಡಿದ್ರಾ.?'' ಅಂತ ಪ್ರಶ್ನಿಸುತ್ತಾನೆ ಎಂದು ಹೆಸರು ಹೇಳಲು ಇಚ್ಛಿಸದ ನಟಿಯೊಬ್ಬರು 'ಮಿಸ್ ಮಾಲಿನಿ'ಗೆ ಕೊಟ್ಟ ಸಂದರ್ಶನದಲ್ಲಿ ತಿಳಿಸಿದ್ದಾರೆ.


Click it and Unblock the Notifications










