»   » ಮಕ್ಕಳಿಗೋಸ್ಕರ ಮತ್ತೆ ಒಂದಾದ್ರಾ ಹೃತಿಕ್-ಸುಸೇನ್.?

ಮಕ್ಕಳಿಗೋಸ್ಕರ ಮತ್ತೆ ಒಂದಾದ್ರಾ ಹೃತಿಕ್-ಸುಸೇನ್.?

Posted By: Sonu Gowda
Subscribe to Filmibeat Kannada

ಬಿಟೌನ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ವಿವಾಹ ಸಂಬಂಧ ಮುರಿದು ಬಿದ್ದರೂ ಕೂಡ ತಮ್ಮ ಮಕ್ಕಳಿಗೋಸ್ಕರ ತಮ್ಮಿಬ್ಬರ ವೈಮನಸ್ಸು ಮರೆತು ಒಂದಾಗಿದ್ದಾರೆ.

ಇತ್ತೀಚೆಗೆ ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್ ಅವರು ತಮ್ಮ ಮಕ್ಕಳಾದ ರಿಹಾನ್ ಮತ್ತು ರಿದಾನ್ ಜೊತೆ ಹಾಲಿಡೇ ಎಂಜಾಯ್ ಮಾಡಲು ಲಂಡನ್ ಗೆ ಜಾಲಿ ಟ್ರಿಪ್ ಹೋಗಿದ್ದರು. ಈ ಸಂದರ್ಭದಲ್ಲಿ ಇವರ ಜೊತೆ ನಟಿ ಸೋನಾಲಿ ಬೇಂದ್ರೆ ಕೂಡ ತಮ್ಮ ಮಕ್ಕಳೊಂದಿಗೆ ಹಾಲಿಡೇ ಮೂಡ್ ನಲ್ಲಿದ್ದರು.[ಉಗ್ರರ ಬಾಂಬ್ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಹೃತಿಕ್]

Hrithik Roshan Joins Sussanne Khan and His Kids For Holiday In London

ಕಳೆದ ಒಂದು ವಾರದಿಂದ ಸುಸೇನ್ ಖಾನ್, ಸೋನಾಲಿ ಬೇಂದ್ರೆ ಹಾಗೂ ಅವರ ಗೆಳತಿಯರು ಲಂಡನ್ ನಲ್ಲಿ ಸುತ್ತಾಡುತ್ತಿದ್ದರು. ಇದೀಗ ಈ ಗುಂಪಿಗೆ ನಟ ಹೃತಿಕ್ ರೋಷನ್ ಅವರು ಕೂಡ ಸೇರಿಕೊಂಡಿದ್ದಾರೆ.

Hrithik Roshan Joins Sussanne Khan and His Kids For Holiday In London

ಹೃತಿಕ್ ರೋಷನ್, ಸುಸೇಸ್ ಖಾನ್ ಸೋನಾಲಿ ಬೇಂದ್ರೆ, ಫ್ರೆಂಡ್ಸ್ ಹಾಗೂ ಮಕ್ಕಳು ಹಾಲಿಡೇ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನು ಸೋನಾಲಿ ಬೇಂದ್ರೆ ಅವರು ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.[ವಿಚ್ಛೇದನದ ಅಸಲಿ ಕಾರಣ ಹೇಳಿದ ಹೃತಿಕ್ ಮಾಜಿ ಪತ್ನಿ ಸುಸೇನ್]

Hrithik Roshan Joins Sussanne Khan and His Kids For Holiday In London

ಅಂತೂ ಮಕ್ಕಳನ್ನು ತುಂಬಾ ಪ್ರೀತಿಸುವ ಹೃತಿಕ್-ಸುಸೇನ್ ದಂಪತಿಗಳು, ಮುದ್ದು ಮಕ್ಕಳಿಗೋಸ್ಕರ ಏನು ಬೇಕಾದ್ರೂ ಮಾಡ್ತಾರೆ ಅನ್ನೋದಕ್ಕೆ ಇದೊಂದು ಚಿಕ್ಕ ನಿದರ್ಶನ.[ಮಧ್ಯರಾತ್ರಿ ರಾಕೇಶ್ ರೋಶನ್ ಮನೆಗೆ ಶಾರುಖ್ ಹೋಗಿದ್ದು ಯಾಕೆ?]

English summary
Hrithik Roshan and Sussanne Khan are separated but that doesn't stop them from meeting each other and spending time with their two sons Hrehaan and Hridhaan. Sussanne Khan and Sonali Bendre, were seen holidaying in London along with their family and friends since a week and Hrithik has just joined the party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada