For Quick Alerts
  ALLOW NOTIFICATIONS  
  For Daily Alerts

  ರೊಮಾನ್ಸ್ ಗೆ ಮತ್ತೆ ರೆಡಿಯಾದ ಹೃತಿಕ್-ಕತ್ರಿನಾ

  |

  ಬಾಲಿವುಡ್ ಸುಂದರಾಂಗ ಹೃತಿಕ್ ರೋಶನ್ ಹಾಗೂ ಸುಂದರಿ ಕತ್ರಿನಾ ಕೈಫ್ ಮತ್ತೆಒಮ್ಮೆ ಜೋಡಿಯಾಗಲಿದ್ದಾರೆ. ಈ ಮೊದಲು 'ಜಿಂದಗಿ ಮಿಲೇ ನಾ ದೊಬಾರಾ' ಚಿತ್ರದಲ್ಲಿ ಜೋಡಿಯಾಗಿದ್ದ ಈ ಜೋಡಿ ಮತ್ತೆ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಂಡಿರಲೇ ಇಲ್ಲ. ಆ ಚಿತ್ರದಲ್ಲಿನ ಅವರಿಬ್ಬರ ಅತ್ಯುತ್ತಮ 'ಆನ್ ಸ್ಕ್ರೀನ್ ಕೆಮಿಸ್ಟ್ರಿ' ನೋಡಿದ ಪ್ರೇಕ್ಷಕರು ಈ ಜೋಡಿಯನ್ನು ಮತ್ತೆ ತೆರೆಯಲ್ಲಿ ನೋಡಲು ಹಾತೊರೆಯುತ್ತಿದ್ದರು.

  ಆ ಚಿತ್ರದ ನಂತರ ಅದೇನಾಯ್ತೋ, ಈ ಜೋಡಿಯ ನಡುವೆ ಭಿನ್ನಾಭಿಪ್ರಾಯವಿದೆ, ವೈಯಕ್ತಿಕವಾಗಿಯೂ ಸಾಕಷ್ಟು ದೂರವೇ ಎಂಬ ಸುದ್ದಿ ಹಬ್ಬಿತ್ತು. ಅದಕ್ಕೆ ಪುಷ್ಠಿ ನೀಡುವಂತೆ ಅವರಿಬ್ಬರೂ ಮತ್ತೆ ಒಟ್ಟಾಗಿ ನಟಿಸಿರಲೇ ಇಲ್ಲ. ಅವರಿಬ್ಬರನ್ನೂ ಒಟ್ಟಾಗಿ ಚಿತ್ರದಲ್ಲಿ ತೋರಿಸಲು ಹರಸಾಹಸ ಪಟ್ಟ ಸಾಕಷ್ಟು ನಿರ್ದೇಶಕರು ಹಾಗೂ ನಿರ್ಮಾಪಕರ ಪ್ರಯತ್ನ ಫಲ ನೀಡಿರಲಿಲ್ಲ. ಅಂತೂ ಇಂತೂ ಈಗ ಅದಕ್ಕೆ ಈಗ ಕಾಲ ಕೂಡಿ ಬಂದಿದೆ.

  ಈಗ ಹಾಲಿವುಡ್ ಚಿತ್ರ 'ನೈಟ್ ಅಂಡ್ ಡೇ' ರೀಮೇಕ್ ಬಾಲಿವುಡ್ ಚಿತ್ರಕ್ಕೆ ಈ ಜೋಡಿಯನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಹಾಲಿವುಡ್ ಚಿತ್ರದಲ್ಲಿ ಟಾಮ್ ಕ್ರೂಸ್ ಮತ್ತು ಕ್ಯಾಮರಾನ್ ಡಯಾಜ್ ಜೋಡಿ ಮಾಡಿದ್ದ ಪಾತ್ರವನ್ನು ಇಲ್ಲಿ ಹೃತಿಕ್ ರೋಶನ್ ಹಾಗೂ ಕತ್ರಿನಾ ಕೈಫ್ ಮಾಡಲಿದ್ದಾರೆ. ಹಾಲಿವುಡ್ ಈ ಚಿತ್ರವನ್ನು ಫಾಕ್ಸ್ ಸ್ಟಾರ್ ಸ್ಟುಡಿಯೋಸ್, ಬಾಲಿವುಡ್ ಗೆ ರೀಮೇಕ್ ಮಾಡಲಿದೆ. ಹೃತಿಕ್ ಹಾಗೂ ಕತ್ರಿನಾ ಇಬ್ಬರೂ ಒಪ್ಪಿದ್ದಾರೆ ಎನ್ನಲಾಗಿದೆ.

  ಒಟ್ಟಿನಲ್ಲಿ ಈ ಸುದ್ದಿ ಕೇಳಿ ಹೃತಿಕ್ ಹಾಗೂ ಕತ್ರಿನಾ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ. 'ಜಿಂದಗಿ ಮಿಲೇ ನಾ ದೊಬಾರಾ' ಚಿತ್ರದ ನಂತರ ಮತ್ತೆ ಇವರಿಬ್ಬರನ್ನೂ ತೆರೆಯ ಮೇಲೆ ತರಲಿರುವ ಪ್ರಯತ್ನಕ್ಕೆ ಎಲ್ಲೆಡೆ ಹರ್ಷ ವ್ಯಕ್ತವಾಗಿದೆ. ಈ ಕುರಿತು ಹೃತಿಕ್ ಆಗಲೀ ಅಥವಾ ಕತ್ರಿನಾ ಆಗಲೀ ಎಲ್ಲೂ ಬಾಯಿ ಬಿಟ್ಟಿಲ್ಲವಾದರೂ ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ಈ ವಿಷಯವನ್ನು ದೃಢೀಕರಿಸಿದೆ. ಅವರ ಅಭಿಮಾನಿಗಳಿಗೆ ಅಷ್ಟು ಸಾಕು. (ಏಜೆನ್ಸೀಸ್)

  English summary
  Bollywood actor Hrithik Roshan and actress Katrina Kaif are acting together in a movie very soon. Night and Day Hollywood movie to Remake in Bollywood and this pair will be in lead role. Fax Star Studios ti produce this very shortly. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X