'ವಾರ್- 2' ವೀಡಿಯೋ ಸಾಂಗ್ ರಿಲೀಸ್; ಬಿಕಿನಿಯಲ್ಲಿ ಬಿಸಿಯೇರಿಸಿದ ಕಿಯಾರಾ
ಬಹುನಿರೀಕ್ಷಿತ 'ವಾರ್- 2' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಆಗಸ್ಟ್ 14ಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ತೆರೆಗಪ್ಪಳಿಸಲಿದೆ. ಇತ್ತೀಚೆಗೆ ಬಂದ ಟ್ರೈಲರ್ ಹಿಟ್ ಆಗಿತ್ತು ಇದೀಗ ರೊಮ್ಯಾಂಟಿಕ್ ಸಾಂಗ್ ರಿಲೀಸ್ ಆಗಿದೆ.
ಸಿಕ್ಕಾಪಟ್ಟೆ ಕಲರ್‌ಫುಲ್ ಆಗಿರುವ ಸಾಂಗ್‌ನಲ್ಲಿ ಹೃತಿಕ್ ಹಾಗೂ ಕಿಯಾರಾ ಕೆಮೆಸ್ಟ್ರಿ ಹೈಲೆಟ್ ಆಗಿದೆ. ಇನ್ನು ಬಿಕಿನಿ ತೊಟ್ಟು ಬಿಂದಾಸ್ ಬೆಡಗಿ ಪಡ್ಡೆ ಹುಡುಗರ ಎದೆಯಲ್ಲಿ ಕಿಚ್ಚು ಹಚ್ಚಿದ್ದಾರೆ. ಸಾಂಗ್ ಸಖತ್ ವೈರಲ್ ಆಗುತ್ತಿದೆ. ಪ್ರೀತಂ ಸಂಗೀತದ ಸಾಂಗ್‌ಗೆ ಅಮಿತಾಬ್ ಬಟ್ಟಾಚಾರ್ಯ ಸಾಹಿತ್ಯ ಬರೆದಿದ್ದಾರೆ. ಅರ್ಜಿತ್ ಸಿಂಗ್ ಹಾಗೂ ನಿಖಿತಾ ಗಾಂಧಿ ಗಾಯನದಲ್ಲಿ 'ಆವನ್ ಜಾವನ್' ಸಾಂಗ್ ಕಿಕ್ಕೇರಿಸುತ್ತಿದೆ.

ವಿದೇಶದ ಅದ್ಭುತ ಲೋಕೇಶನ್‌ಗಳಲ್ಲಿ ಸಾಂಗ್ ಶೂಟ್ ಮಾಡಲಾಗಿದೆ. ಹೃತಿಕ್- ಕಿಯಾರಾ ಕಲರ್‌ಫುಲ್ ಕಾಸ್ಟ್ಯೂಮ್‌ಗಳಲ್ಲಿ ಸಾಂಗ್ ತುಂಬಾ ಆವರಿಸಿಕೊಂಡಿದ್ದಾರೆ. ಇಬ್ಬರೂ ತುಟಿಗೆ ತುಟಿ ಬೆರಸಿ ಮಿಂಚಿದ್ದಾರೆ. ಮಾಂಟೇಜ್ ಸಾಂಗ್‌ನಲ್ಲಿ ಅಲ್ಲಲ್ಲಿ ಸಿಂಪಲ್ ಸ್ಟೆಪ್ಸ್ ಹಾಕಿ ಕಮಾಲ್ ಮಾಡಿದ್ದಾರೆ. ಅಭಿಮಾನಿಗಳು ಲೂಪ್ ಮೋಡ್‌ನಲ್ಲಿ ಪದೇ ಪದೆ ಸಾಂಗ್ ಗುನುಗುತ್ತಿದ್ದಾರೆ.
ರೋಮ್ ಹಾಗೂ ಟಸ್ಕೆನಿ ದೇಶದ ಸುಂದರ ಲೊಕೇಶನ್‌ಗಳಲ್ಲಿ ಸಾಂಗ್ ಸೆರೆಹಿಡಿಯಲಾಗಿದೆ. ಅಯಾನ್ ಮುಖರ್ಜಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಸ್ಪೈ ಥ್ರಿಲ್ಲರ್ ಚಿತ್ರದಲ್ಲಿ ಮತ್ತೊಮ್ಮೆ ಕಬೀರ್ ಆಗಿ ಹೃತಿಕ್ ಅಬ್ಬರಿಸಿದ್ದಾರೆ. ತೆಲುಗು ನಟ ಜ್ಯೂ. ಎನ್‌ಟಿಆರ್ ಮತ್ತೊಂದು ಪವರ್‌ಫುಲ್ ಪಾತ್ರದಲ್ಲಿ ಸವಾಲ್ ಹಾಕಿದ್ದಾರೆ. ಇವರಿಬ್ಬರ ಪೈಪೋಟಿ ತೆರೆಮೇಲೆ ಪ್ರೇಕ್ಷಕರಿಗೆ ಅದ್ಭುತ ಅನುಭವ ನೀಡುವ ಸುಳಿವು ಸಿಕ್ತಿದೆ.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ ಸಾಕಷ್ಟು ಸಿನಿಮಾಗಳು ಬಂದಿವೆ. ಅದೇ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಳ್ತಿದೆ. ಹಿಂದಿ ಮಾತ್ರವಲ್ಲದೇ ತೆಲುಗು, ತಮಿಳಿಗೂ ಸಿನಿಮಾ ಡಬ್ ಆಗಿ ತೆರೆಗೆ ಬರ್ತಿದೆ. ಅಂದಾಜು 400 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎನ್ನಲಾಗ್ತಿದೆ. ಹೃತಿಕ್, ತಾರಕ್, ಕಿಯಾರಾ ಜೊತೆಗೆ ಅಶುತೋಷ್ ರಾಣ, ಅನಿಲ್ ಕಪೂರ್ ತಾರಾಗಣದಲ್ಲಿದ್ದಾರೆ.
ಆಲಿಯಾ ಭಟ್ ಹಾಗೂ ಶಾರ್ವರಿ ಅತಿಥಿ ಪಾತ್ರಗಳಲ್ಲಿ ನಟಿಸಲಿದ್ದಾರೆ. ಕ್ಯಾಪ್ಟನ್ ಖಲೀದ್ ರಹಮಾನಿ ಆಗಿ ಟೈಗರ್ ಶ್ರಾಫ್ ಫೋಟೊವನ್ನು ಚಿತ್ರದಲ್ಲಿ ಬಳಸಿಕೊಳ್ಳಲಾಗ್ತಿದೆ. 'ವಾರ್' ಚಿತ್ರದಲ್ಲಿ ಹೃತಿಕ್ ಎದುದು ಟೈಗರ್ ಶ್ರಾಫ್ ಅಬ್ಬರಿಸಿಸಿದ್ದು ಗೊತ್ತೇಯಿದೆ.
ಜ್ಯೂ. ಎನ್‌ಟಿಆರ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಆಂಧ್ರ, ತೆಲಂಗಾಣದಲ್ಲಿ ಕೂಡ 'ವಾರ್-2' ಸಿನಿಮಾ ಹೈಪ್ ಕ್ರಿಯೇಟ್ ಮಾಡಿದೆ. ಇನ್ನು ಆಗಸ್ಟ್ 14ಕ್ಕೆ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಕೂಡ ತೆರೆಗೆ ಬರ್ತಿದೆ. ಉತ್ತರ ಭಾರತದಲ್ಲಿ ಕೂಲಿ ಆರ್ಭಟ ದಕ್ಷಿಣ ಭಾರತದಲ್ಲಿ 'ವಾರ್- 2' ಹವಾ ಹೇಗಿರುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.
ಲೋಕೇಶ್ ಕನಕರಾಜ್ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ಕೂಲಿ' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗಪ್ಪಳಿಸಲಿದೆ. ನಾಗಾರ್ಜುನ, ಉಪೇಂದ್ರ, ಆಮೀರ್ ಖಾನ್, ಶ್ರುತಿ ಹಾಸನ್ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ದೊಡ್ಡದಾಗಿ ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಚಿತ್ರಮಂದಿರಗಳಿಗಾಗಿ ಎರಡೂ ಸಿನಿಮಾಗಳ ನಡುವೆ ಪೈಪೋಟಿ ಏರ್ಪಟ್ಟಿದೆ. 'ಕೂಲಿ' ಸಿನಿಮಾ ಕೊಂಚ ಹೆಚ್ಚು ನಿರೀಕ್ಷೆ ಹುಟ್ಟಾಕಿರುವುದು ಸುಳ್ಳಲ್ಲ.


Click it and Unblock the Notifications











