ಎಲ್ಲಾ ಬಿಟ್ಟು ಬಿಕಿನಿ ಸಾಂಗ್ ಮೇಕಿಂಗ್ ರಿಲೀಸ್ ಮಾಡಿ 'ವಾರ್- 2' ಪ್ರಮೋಷನ್

ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರದಲ್ಲಿ ಕಿಯಾರಾ ಅದ್ವಾನಿ ನಾಯಕಿಯಾಗಿ ಮಿಂಚಿದ್ದಾರೆ. ಈ ಹೈವೋಲ್ಟೇಜ್ ಆಕ್ಷನ್ ಥ್ರಿಲ್ಲರ್ ಸಿನಿಮಾ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಎದುರು ಅಖಾಡಕ್ಕೆ ಇಳೀತ್ತಿದೆ.

ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ 'ವಾರ್- 2' ಸಿನಿಮಾ ನಿರ್ಮಾಣವಾಗಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ಬಂದು ನಿರೀಕ್ಷೆ ಹುಟ್ಟಾಕ್ಕಿದೆ. ಅದರಲ್ಲೂ 'ಆವನ್ ಜಾವನ್' ಸಾಂಗ್ ಕೊಂಚ ಹೆಚ್ಚೇ ಸದ್ದು ಮಾಡ್ತಿದೆ. ಅದಕ್ಕೆ ಕಾರಣ ಕಿಯಾರಾ ಅದ್ವಾನಿ ಬಿಕಿನಿ ತೊಟ್ಟಿ ಬಿಂದಾಸ್ ಆಗಿ ಕಾಣಿಸಿಕೊಂಡಿರುವುದು. ಪ್ರೀತಂ ಸಂಗೀತ ಇದೀಗ ಈ ಹಾಡಿಗೆ ಅಮಿತಾಬ್ ಭಟ್ಟಾಚಾರ್ಯ ಸಾಹಿತ್ಯ ಗೀಚಿದ್ದಾರೆ.

Hrithik Roshan Kiara s War-2 movie Making of Aavan Jaavan Song released

ಈ ರೊಮ್ಯಾಂಟಿಕ್ ಸಾಂಗ್‌ಗೆ ಅರ್ಜಿತ್ ಸಿಂಹ್ ಹಾಗೂ ನಿಖಿತಾ ಗಾಂಧಿ ದನಿಯಾಗಿದ್ದಾರೆ. ರೋಮ್, ಇಟಲಿ ಸೇರಿ ಕಲರ್‌ಫುಲ್ ಲೊಕೇಶಷನ್‌ಗಳಲ್ಲಿ ಸಾಂಗ್ ಸೆರೆ ಹಿಡಿಯಲಾಗಿದೆ. ಅದರ ಮೇಕಿಂಗ್ ಝಲಕ್ ಇದೀಗ ರಿಲೀಸ್ ಆಗಿದೆ. ಹೃತಿಕ್ ಹಾಗೂ ಕಿಯಾರಾ ರಿಹರ್ಸಲ್ ಮಾಡಿ ಸಿದ್ಧತೆ ನಡೆಸಿದ್ದಾರೆ. ಬಳಿಕ ಲೊಕೇಶನ್‌ಗಳಲ್ಲಿ ಸಿಂಪಲ್ ಆಗಿ ಹೆಜ್ಜೆ ಹಾಕಿ ಕಮಾಲ್ ಮಾಡಿದ್ದಾರೆ. ಇಟಲಿಯ ಟಕ್ಸಿನಿಯ ರೆಸಾರ್ಟ್‌ವೊಂದರಲ್ಲಿ ಬಿಕಿನಿ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ.

ಯಶ್ ರಾಜ್ ಫಿಲ್ಮ್ಸ್ ಸ್ಪೈ ಥ್ರಿಲ್ಲರ್ ಸಿನಿಮಾಗಳಲ್ಲಿ ನಾಯಕಿಯರು ಬಿಕಿನಿ ತೊಡುವುದು ಕಾಮನ್ ಎನ್ನುವಂತಾಗಿದೆ. 'ಪಠಾನ್' ಚಿತ್ರದಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ತೊಟ್ಟಿದ್ದು ಭಾರೀ ವಿವಾದ ಸೃಷ್ಟಿಸಿದ್ದು ಗೊತ್ತೇಯಿದೆ. ಇನ್ನು ಕಳೆದೊಂದು ವಾರದಿಂದ ಕಿಯಾರಾ ಬಿಕಿನಿಯಲ್ಲಿ ಮಿಂಚಿರುವುದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಗ್ರೀನ್ ಕಲರ್ ಟೂ ಪೀಸ್ ಡ್ರೆಸ್‌ನಲ್ಲಿ ಕಿಯಾರಾ ಪಡ್ಡ ಹುಡುಗರ ನಿದ್ದೆ ಕದ್ದಿದ್ದಾರೆ.

ಟೀಸರ್ ಬಂದಾಗಲೇ ಕಿಯಾರಾ ಅದ್ವಾನಿ ಬಿಕಿನಿ ತೊಟ್ಟು ಬಿಂದಾಸ್ ಆಗಿ ನಟಿಸಿರುವ ಸುಳಿವು ಸಿಕ್ಕಿತ್ತು. ಬಳಿಕ ಟ್ರೈಲರ್‌ನಲ್ಲಿ ಕೂಡ ಅದರ ಝಲಕ್ ಇತ್ತು. ಇನ್ನು 'ಆವನ್ ಜಾವನ್' ಸಾಂಗ್‌ನಲ್ಲಿ ಮತ್ತಷ್ಟು ಮಾದಕವಾಗಿ ಮಿಂಚಿ ಹುಬ್ಬೇರಿಸಿದ್ದಾರೆ.

ಸದ್ಯ 'ಆವನ್ ಜಾವನ್' ಸಾಂಗ್‌ ಮೇಕಿಂಗ್ ವೀಡಿಯೋ ಬಿಟ್ಟು 'ವಾರ್- 2' ಸಿನಿಮಾ ಪ್ರಚಾರ ಮಾಡುತ್ತಿರುವುದು ಟ್ರೋಲ್ ಆಗುತ್ತಿದೆ. 'ವಾರ್- 2' ಚಿತ್ರದಲ್ಲಿ ಬೇರೆ ಕಂಟೆಂಟ್ ಇಲ್ವಾ? ಎಲ್ಲಾ ಬಿಟ್ಟು ಕಿಯಾರಾ ಬಿಕಿನಿ ತೊಟ್ಟು ನಟಿಸಿರುವುದನ್ನೇ ಯಾಕೆ ಇಷ್ಟು ಹೈಲೆಟ್ ಮಾಡಿ ಪ್ರಚಾರ ಮಾಡುತ್ತಿದ್ದಾರೆ ಎಂದು ಕೆಲವರು ಟೀಕಿಸುತ್ತಿದ್ದಾರೆ. ತಮ್ಮ ಸಿನಿಮಾವನ್ನು ಹೇಗೆ ಪ್ರಚಾರ ಮಾಡಬೇಕು ಎನ್ನುವುದು ಯಶ್ ರಾಜ್ ಫಿಲ್ಮ್ಸ್ ಸಂಸ್ಥೆಗೆ ಚೆನ್ನಾಗಿ ಗೊತ್ತು ಎಂದು ಕೆಲವರು ವ್ಯಂಗ್ಯವಾಡುತ್ತಿದ್ದಾರೆ.

ಆಗಸ್ಟ್ 14ಕ್ಕೆ 'ವಾರ್- 2' ಸಿನಿಮಾ ತೆರೆಗೆ ಬರಲಿದೆ. ಹಿಂದಿ ಜೊತೆಗೆ ತೆಲುಗು, ತಮಿಳು ಭಾಷೆಗಳಿಗೆ ಸಿನಿಮಾ ಡಬ್ ಆಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ದೊಡ್ಡದಾಗಿ ರಿಲೀಸ್ ಮಾಡುತ್ತಿದ್ದಾರೆ. ಈಗಾಗಲೇ ವಿದೇಶಗಳಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಅದೇ ದಿನ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಕೂಡ ಬಿಡುಗಡೆ ಆಗ್ತಿದ್ದು ಪೈಪೋಟಿ ಏರ್ಪಟ್ಟಿದೆ.

ಸೂಪರ್ ಹಿಟ್ 'ವಾರ್' ಚಿತ್ರದ ಸೀಕ್ವೆಲ್ ಇದು. ಅನಿಲ್ ಕಪೂರ್, ಅಶುತೋಷ್ ರಾಣಾ ಚಿತ್ರದ ತಾರಾಗಣದಲ್ಲಿದ್ದಾರೆ. ಆಲಿಯಾ ಭಟ್ ಅತಿಥಿ ಪಾತ್ರದಲ್ಲಿ ಮಿಂಚಿದ್ದಾರೆ. ಮತ್ತೊಮ್ಮೆ ಕಬೀರ್ ದಲಿವಾಲ್ ಅವತಾರದಲ್ಲಿ ಹೃತಿಕ್ ಅಬ್ಬರಿಸಲು ಬರ್ತಿದ್ದಾರೆ.

More from Filmibeat

English summary
War-2 movie Aavan Jaavan Song making video trolled;
Read more about: kiara advani hrithik roshan ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X