ಈ ಚಿತ್ರದ ಬಳಿಕ ಹೃತಿಕ್ ರೋಷನ್ಗೆ 30 ಸಾವಿರ ಮದುವೆ ಪ್ರಪೋಸ್ ಬಂದಿತ್ತಂತೆ
ಬಾಲಿವುಡ್ ನಟ ಹೃತಿಕ್ ರೋಷನ್ ತಮ್ಮ ತಂದೆ ರಾಕೇಶ್ ನಿರ್ದೇಶನದ 'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಬಿಟೌನ್ ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದರು. 2000ನೇ ಇಸವಿಯಲ್ಲಿ ತೆರೆಕಂಡಿದ್ದ ಈ ಚಿತ್ರ ವರ್ಷದ ಹಿಟ್ ಸಿನಿಮಾ ಆಗಿತ್ತು. ಈ ಸಿನಿಮಾ ಮಾಡಿದ ಬಳಿಕ ಹೃತಿಕ್ ರೋಷನ್ ರಾತ್ರೋರಾತ್ರಿ ಸ್ಟಾರ್ ಆದರು.
ಕೋಟ್ಯಾಂತರ ಅಭಿಮಾನಿಗಳ ಮನಸ್ಸಿನಲ್ಲಿ ಜಾಗ ಪಡೆದುಕೊಂಡರು. ಅತ್ಯದ್ಬುತ ಡ್ಯಾನ್ಸ್ ಹಾಗೂ ಹ್ಯಾಂಡ್ ಸಮ್ ಲುಕ್ ಮೂಲಕ ವಿಶೇಷವಾಗಿ ಮಹಿಳಾ ಪ್ರೇಕ್ಷಕರ ಗಮನ ಸೆಳೆದರು.
ಇದೀಗ, ಕಪಿಲ್ ಶರ್ಮಾ ಶೋನಲ್ಲಿ ಕಹೋ ನಾ ಪ್ಯಾರ್ ಹೈ ಚಿತ್ರದ ಬಗ್ಗೆ ನೆನಪಿಸಿಕೊಂಡಿರುವ ಹೃತಿಕ್, ''ಈ ಸಿನಿಮಾದ ಬಳಿಕ ನನಗೆ 30 ಸಾವಿರಕ್ಕೂ ಹೆಚ್ಚು ಮದುವೆ ಪ್ರಪೋಸ್ ಬಂದಿತ್ತು'' ಎಂದು ಹೇಳಿಕೊಂಡಿದ್ದಾರೆ.

ಹೃತಿಕ್ ರೋಷನ್ ಅವರಿಗೆ ಮದುವೆ ಪ್ರಪೋಸ್ ಗಳು ಹೆಚ್ಚಾಗುತ್ತಿದ್ದ ಸಮಯದಲ್ಲೇ ಮದುವೆ ಆಗುವ ಮೂಲಕ ಅಭಿಮಾನಿಗಳಿಗೆ ಆಘಾತ ನೀಡಿದರು. ಜನವರಿ ತಿಂಗಳಲ್ಲಿ ಕಹೋ ನಾ ಪ್ಯಾರ್ ಹೈ ಸಿನಿಮಾ ರಿಲೀಸ್ ಆಯ್ತು. ಡಿಸೆಂಬರ್ ನಲ್ಲಿ ಸುಸೈನ್ ಖಾನ್ ಜೊತೆ ಹೃತಿಕ್ ವಿವಾಹವಾದರು.
ದುರಾದೃಷ್ಟವಶಾತ್ 2014ರಲ್ಲಿ ಸುಸೈನ್ ಖಾನ್ ಜೊತೆಗೆ ದಾಂಪತ್ಯವನ್ನ ಹೃತಿಕ್ ಮುರಿದುಕೊಂಡರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 2019ರಲ್ಲಿ ನಡೆದ ಐಫಾ ಪ್ರಶಸ್ತಿ ಸಮಾರಂಭದಲ್ಲಿ ಕಹೋ ನಾ ಪ್ಯಾರ್ ಹೈ ಚಿತ್ರಕ್ಕೆ ಕಳೆದ 20 ವರ್ಷದಲ್ಲಿ 'ಅತ್ಯುತ್ತಮ ಸಿನಿಮಾ' ಎಂಬ ವಿಶೇಷ ಪ್ರಶಸ್ತಿಗೆ ಪಾತ್ರವಾಗಿದೆ.
ಹೃತಿಕ್ ರೋಷನ್ ಮತ್ತು ಟೈಗರ್ ಶ್ರಾಫ್ ನಟನೆಯ 'ವಾರ್' ಸಿನಿಮಾ ಅಕ್ಟೋಬರ್ 2 ರಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ತೆರೆಕಾಣುತ್ತಿದೆ.


Click it and Unblock the Notifications











