ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್‌ಗೆ ಕೊರೊನಾ ಪಾಸಿಟಿವ್
ಬಾಲಿವುಡ್ ನಟ ಹೃತಿಕ್ ರೋಷನ್ ಅವರ ತಾಯಿ ಪಿಂಕಿ ರೋಶನ್ ಅವರು ಕೊರೊನಾ ವೈರಸ್ ತಗುಲಿದೆ. ಈ ಬಗ್ಗೆ ಸ್ವತಃ ಪಿಂಕಿ ರೋಷನ್ ಅವರು ಪ್ರಮುಖ ದಿನಪತ್ರಿಕೆಯೊಂದಕ್ಕೆ ಖಚಿತಪಡಿಸಿದ್ದಾರೆ.
ಆದರೆ, ಹೃತಿಕ್ ತಾಯಿಗೆ ಯಾವುದೇ ರೋಗಲಕ್ಷಣವಿಲ್ಲ. ಹಾಗಾಗಿ, ನಾಳೆ ಮತ್ತೊಮ್ಮೆ (ಅಕ್ಟೋಬರ್ 23, 2020) COVID-19 ಪರೀಕ್ಷೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದ್ದಾರೆ.
''ಮುನ್ನೆಚ್ಚರಿಕೆಯಾಗಿ ಪ್ರತಿ 20 ದಿನಗಳಿಗೊಮ್ಮೆ ಸಿಬ್ಬಂದಿ ಸೇರಿದಂತೆ ನಮ್ಮ ಕುಟುಂಬದ ಎಲ್ಲರೂ ಕೊರೊನಾ ಪರೀಕ್ಷೆಗೆ ಒಳಪಡುತ್ತಿದ್ದೇವೆ. ಸದ್ಯಕ್ಕೆ ನನಗೆ ಯಾವುದೇ ರೋಗ ಲಕ್ಷಣಗಳಿಲ್ಲ. ಯೋಗ ಮತ್ತು ವ್ಯಾಯಾಮ ನನಗೆ ದೊಡ್ಡ ಮಟ್ಟದಲ್ಲಿ ಸಹಾಯ ಮಾಡಿದೆ ಎಂದು ನನ್ನ ವೈದ್ಯರು ಹೇಳಿದ್ದಾರೆ. ಹಾಗಾಗಿ, ಕೊವಿಡ್ ನಿಯಂತ್ರಣ ಮಾಡಲು ಸಾಧ್ಯವಾಗಿದೆ'' ಎಂದು ಪಿಂಕಿ ರೋಷನ್ ಬಹಿರಂಗಪಡಿಸಿದ್ದಾರೆ.

"ನಾಳೆ ಮತ್ತೊಂದು ಬಾರಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತೇನೆ. ಬಹುಶಃ ಅದರಲ್ಲಿ ನೆಗಿಟಿವ್ ಬರಬಹುದು ಎಂದು ಭಾವಿಸುತ್ತಿದ್ದೇನೆ'' ಎಂದು ಆತ್ಮಿವಿಶ್ವಾಸ ವ್ಯಕ್ತಪಡಿಸಿದ್ದಾರೆ. ''ನಮ್ಮ ಜೊತೆ ನನ್ನ ತಾಯಿ, ಮಗಳು ಸುನೈನಾ ಮತ್ತು ಮೊಮ್ಮಗಳು ಸುನರಿಕಾ ಸಹ ಇದ್ದರು. ಹಾಗಾಗಿ, ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ'' ಎಂದು ಪಿಂಕಿ ರೋಷನ್ ತಿಳಿಸಿದ್ದಾರೆ.
ಪಿಂಕಿ ರೋಷನ್ ಮತ್ತು ಪತಿ ರಾಕೇಶ್ ರೋಶನ್ ಪ್ರಸ್ತುತ ಖಂಡಲಾದಲ್ಲಿರುವ ತಮ್ಮ ತೋಟದ ಮನೆಯಲ್ಲಿದ್ದಾರೆ. ಹೃತಿಕ್ ರೋಷನ್ ಜುಹುನಲ್ಲಿರುವ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದಾರೆ.


Click it and Unblock the Notifications











