ಸುಶಾಂತ್ ಸಿಂಗ್ ಸಾವಿನ ಪ್ರಕರಣ: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ಹೃತಿಕ್ ರೋಷನ್ ತಾಯಿ

ಸುಶಾಂತ್ ಸಿಂಗ್ ಸಾವಿನ ಪ್ರಕರಣದ ತನಿಖೆ ನಡೆಯುತ್ತಿದೆ. ಸುಶಾಂತ್ ನಿಧನಹೊಂದಿ 4 ತಿಂಗಳ ಮೇಲಾಗಿದೆ. ಆದರೆ ಇನ್ನೂ ಸುಶಾಂತ್ ಸಿಂಗ್ ಸಾವಿನ ಹಿಂದಿನ ರಹಸ್ಯವೇನು ಎನ್ನುವುದು ಬಹಿರಂಗವಾಗಿಲ್ಲ. ದೇಶ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ ಸುಶಾಂತ್ ಸಿಂಗ್ ಸಾವಿನ ಪ್ರಕರಣ ಈಗ ಸಿಬಿಐ ಅಂಗಳದಲ್ಲಿದೆ.

ವಿವಧ ಆಂಗಲ್ ಗಲ್ಲಿ ಸುಶಾಂತ್ ಪ್ರಕರಣವನ್ನು ತನಿಖೆ ಮಾಡಲಾಗುತ್ತಿದೆ. ಜಾರಿ ನಿರ್ದೇಶನಾಲಯ, ಮಾದಕ ವಸ್ತು ನಿಯಂತ್ರಣ ಇಲಾಖೆಯೂ ತನಿಖೆ ನಡೆಸುತ್ತಿದೆ. ಡ್ರಗ್ಸ್ ಜಾಲದ ವಿಚಾರವಾಗಿ ಸುಶಾಂತ್ ಸಿಂಗ್ ಪ್ರೇಯಸಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಮತ್ತು ಸುಶಾಂತ್ ಮನೆಯ ಕೆಲಸದವನ್ನು ಬಂಧಿಸಲಾಗಿತ್ತು.

ಸುಶಾಂತ್ ಅವರದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ಇನ್ನು ಉತ್ತರ ಸಿಕ್ಕಿಲ್ಲ. ಸುಶಾಂತ್ ಸಿಂಗ್ ಪ್ರಕರಣದ ಬಗ್ಗೆ ಇಡೀ ಬಾಲಿವುಡ್ ಮೌನವಹಿಸಿದೆ. ಪ್ರಕರಣವನ್ನು ಸಿಬಿಐಗೆ ಹಸ್ತಾಂತರ ಮಾಡಿದ ಬಳಿಕ ಕೆಲವರು ಪ್ರತಿಕಿಯೆ ನೀಡಿದ್ದರು. ಈ ಪ್ರಕರಣದ ಬಗ್ಗೆ ಯಾರೋಬ್ಬ ಸ್ಟಾರ್ ನಟರು ಮಾತನಾಡಿಲ್ಲ.

Hrithik Roshans mother shares cryptic note on Sushant Singh Rajputs death

ಈ ಬಗ್ಗೆ ಹೃತಿಕ್ ರೋಷನ್ ತಾಯಿ ಪಿಂಕಿ ರೋಷನ್ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್ ಸಾವಿನ ಬಗ್ಗೆ ಬರೆದುಕೊಂಡಿದ್ದಾರೆ. ಸುಶಾಂತ್ ಸಿಂಗ್ ಫೋಟೋವನ್ನು ಶೇರ್ ಮಾಡಿ, ಪ್ರತಿಯೊಬ್ಬರಿಗೂ ಸತ್ಯಬೇಕು ಆದರೆ ಯಾರೂ ಪ್ರಮಾಣಿಕವಾಗಿರಲು ಬಯಸುವುದಿಲ್ಲ' ಎಂದು ಬರೆದುಕೊಂಡಿದ್ದಾರೆ.

ನಟ ಸುಶಾಂತ್ ಸಿಂಗ್ ಜೂನ್ 14ರಂದು ಮುಂಬೈನ ನಿವಾಸದಲ್ಲಿ ಸಾವನಪ್ಪಿದ್ದರು. ಸುಶಾಂತ್ ಸಾವು ಇಡೀ ಬಾಲಿವುಡ್ ಶಾಕ್ ನೀಡಿತ್ತು. ಅನೇಕರು ಸಂತಾಪ ಸೂಚಿಸಿ ಪೋಸ್ಟ್ ಮಾಡಿದ್ದರು. ಈ ಸಮಯದಲ್ಲಿ ನಟ ಹೃತಿಕ್ ರೋಷನ್ ಸಹ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಬಳಿಕ ಸುಶಾಂತ್ ಸಾವಿನ ಬಗ್ಗೆ ಎಲ್ಲಿಯೂ ಪ್ರತಿಕ್ರಿಯೆ ನೀಡಿರಲಿಲ್ಲ.

More from Filmibeat

English summary
Bollywood Actor Hrithik Roshan's mother shares cryptic note on Sushant Singh Rajput's death.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X