ಹಾಲಿವುಡ್ ಎಂಟ್ರಿಗೆ ಸಜ್ಜಾದ ನಟ ಹೃತಿಕ್ ರೋಷನ್

ಬಾಲಿವುಡ್ ಗ್ರೀಕ್ ಗಾಡ್ ಹೃತಿಕ್ ರೋಷನ್ ಅಭಿಮಾನಿಗಳಿಗೆ ಭರ್ಜರಿ ಸುದ್ದಿ ಹೊರಬಿದ್ದಿದೆ. ಹೃತಿಕ್ ಬಾಲಿವುಡ್ ನಿಂದ ಹಾಲಿವುಡ್ ಗೆ ಹಾರಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಅದ್ಭುತ ನೃತ್ಯ, ಅಮೋಘ ಅಭಿನಯದ ಮೂಲಕ ಭಾರತೀಯ ಸಿನಿರಸಿಕರ ಮನಗೆದ್ದಿರುವ ಈ ಹ್ಯಾಂಡ್ ಸಮ್ ಹಂಕ್ ಹಾಲಿವುಡ್ ನಲ್ಲಿ ಇನ್ನೂ ಯಾಕೆ ಕಾಣಿಸಿಕೊಂಡಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿ ಇತ್ತು. ಆದರೀಗ ಹೃತಿಕ್ ಹಾಲಿವುಡ್ ಕಡೆ ಮುಖ ಮಾಡುತ್ತಿದ್ದಾರೆ. ಮುಂದೆ ಓದಿ..

ಕ್ರಿಶ್-4 ಸಿನಿಮಾದಲ್ಲಿ ಹೃತಿಕ್ ಬ್ಯುಸಿ

ಕ್ರಿಶ್-4 ಸಿನಿಮಾದಲ್ಲಿ ಹೃತಿಕ್ ಬ್ಯುಸಿ

ಬಾಲಿವುಡ್ ನ ಅನೇಕ ನಟರು ಹಾಲಿವುಡ್ ಸಿನಿಮಾದಲ್ಲಿ ಮಿಂಚಿದ್ದಾರೆ. ಆದರೆ ಅನೇಕ ಕಾರಣಗಳಿಂದ ಹೃತಿಕ್ ಹಾಲಿವುಡ್ ಕಡೆ ಮುಖಮಾಡಿರಲಿಲ್ಲ. ಇದೀಗ ಮೊದಲ ಹಾಲಿವುಡ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ. ಸದ್ಯ ಕ್ರಿಶ್-4 ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಈ ಸಿನಿಮಾ ಮುಗಿಯುತ್ತಿದ್ದಂತೆ ಹಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

ಹಾಲಿವುಡ್ ಸಿನಿಮಾಗೆ ಆಡಿಷನ್ ನೀಡಿರುವ ಹೃತಿಕ್

ಹಾಲಿವುಡ್ ಸಿನಿಮಾಗೆ ಆಡಿಷನ್ ನೀಡಿರುವ ಹೃತಿಕ್

ಹಾಲಿವುಡ್ ಸಿನಿಮಾಗಾಗಿ ಹೃತಿಕ್ ಈಗಾಗಲೇ ಆಡಿಷನ್ ನೀಡಿದ್ದಾರಂತೆ. ಕಳೆದ ಎರಡು ವಾರಗಳ ಹಿಂದೆಯೇ ಹೃತಿಕ್ ಆಡಿಷನ್ ನೀಡಿದ್ದಾರಂತೆ. ಈ ಸಿನಿಮಾ ಚರ್ಚೆಯ ಹಂತದಲ್ಲಿದ್ದು, ಪಾತ್ರದ ಬಗ್ಗೆ ವಿವರಣೆ ನೀಡಲಾಗಿದೆಯಂತೆ. ಎಲ್ಲವೂ ಅಂದುಕೊಂಡಂತೆ ಆದರೆ ಈ ಬಾರಿ ಹೃತಿಕ್ ರೋಷನ್ ನನ್ನು ಹಾಲಿವುಡ್ ಸಿನಿಮಾದಲ್ಲಿ ನೋಡುವುದು ಪಕ್ಕಾ.

ಹೃತಿಕ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ

ಹೃತಿಕ್ ಕಡೆಯಿಂದ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ

ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಿದ್ದಿಲ್ಲ. ಹಾಲಿವುಡ್ ನ ದೊಡ್ಡ ಬ್ಯಾನರ್ ನ ಸಿನಿಮಾಗೆ ಹೃತಿಕ್ ಆಡಿಷನ್ ನೀಡಿದ್ದಾರೆ. ಆದರೆ ಈ ಬಗ್ಗೆ ಹೃತಿಕ್ ಕಡೆಯಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

ಇತ್ತೀಚಿಗೆ 97.50 ಕೋಟಿ ಮನೆ ಖರೀದಿಸಿರುವ ಹೃತಿಕ್

ಇತ್ತೀಚಿಗೆ 97.50 ಕೋಟಿ ಮನೆ ಖರೀದಿಸಿರುವ ಹೃತಿಕ್

ಇತ್ತೀಚಿಗಷ್ಟೆ ಹೃತಿಕ್ 97.50 ಕೋಟಿ ರೂಪಾಯಿಯ ಮನೆ ಖರೀದಿಸಿ ಸುದ್ದಿಯಾಗಿದ್ದರು. ಜುಹು ಮತ್ತು ವರ್ಸೊವಾದಲ್ಲಿ ಎರಡು ಫ್ಲ್ಯಾಟ್ ಗಳನ್ನು ದೊಡ್ಡ ಮೊತ್ತಕ್ಕೆ ಖರೀದಿ ಮಾಡಿದ್ದಾರೆ. ವಿಶೇಷ ಎಂದರೆ ಹೃತಿಕ್ ಖರೀದಿ ಮಾಡಿರುವ ಅಪಾರ್ಟ್ಮೆಂಟ್ ಅರೇಬಿಯನ್ ಸಮುದ್ರಕ್ಕೆ ನೇರ ನೋಟವಿದೆಯಂತೆ.

ಕೊನೆಯದಾಗಿ ವಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಟ

ಕೊನೆಯದಾಗಿ ವಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ನಟ

ಹೃತಿಕ್ ರೋಷನ್ ಕೊನೆಯದಾಗಿ ವಾರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಹೃತಿಕ್ ಜೊತೆಗೆ ಬಾಲಿವುಡ್ ನ ಮತ್ತೋರ್ವ ನಟ ಟೈಗರ್ ಶ್ರಾಫ್ ಸಹ ಅಭಿನಯಿಸಿದ್ದರು. ಈ ಸಿನಿಮಾ ದೊಡ್ಡ ಮಟ್ಟಕ್ಕೆ ಸಕ್ಸಸ್ ಗಳಿಸಿದೆ. ವಾರ್ ಸಿನಿಮಾಗೂ ಮೊದಲು ಹೃತಿಕ್ ಸೂಪರ್ 30 ಸಿನಿಮಾದಲ್ಲಿ ನಟಿಸಿದ್ದರು. ಸೂಪರ್ 30 ಸಹ ದೊಡ್ಡ ಯಶಸ್ಸು ಕಂಡ ಸಿನಿಮಾವಾಗಿದೆ.

More from Filmibeat

English summary
Bollywood Actor Hrithik Roshan set for a Hollywood Debut With a Spy Action-Thriller.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X