ಸೂಪರ್ ಹಿಟ್ 'ಖೈದಿ' ಚಿತ್ರದ ಮೇಲೆ ಕಣ್ಣಿಟ್ಟ ಬಾಲಿವುಡ್ ನಟ!

2019ರ ತಮಿಳು ಸೂಪರ್ ಹಿಟ್ ಚಿತ್ರ ಖೈದಿ ಬಾಲಿವುಡ್ನಲ್ಲಿ ರೀಮೇಕ್ ಆಗಲಿದೆ ಎಂಬ ಸುದ್ದಿ ಈ ಹಿಂದೆ ವರದಿಯಾಗಿತ್ತು. ನಟ ಕಾರ್ತಿ ನಟಿಸಿದ್ದ ಈ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ದೊಡ್ಡ ಹಿಟ್ ಆಗಿತ್ತು.

ಇದೀಗ, ಈ ಚಿತ್ರದ ರೀಮೇಕ್ ನಲ್ಲಿ ಬಾಲಿವುಡ್ ಸ್ಟಾರ್ ನಟ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯದ ಟಾಕ್ ಪ್ರಕಾರ, ಹೃತಿಕ್ ರೋಷನ್ ಈ ಚಿತ್ರದ ಹಿಂದಿ ಅವತರಣಿಕೆಯಲ್ಲಿ ನಟಿಸಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಹಿಂದಿ ರೀಮೇಕ್ ಬಗ್ಗೆ ಮಾತನಾಡಿದ್ದ ನಿರ್ಮಾಪಕ ಎಸ್ ಆರ್ ಪ್ರಭು ''ಖೈದಿ ಚಿತ್ರದಲ್ಲಿ ಹೀರೋಯಿನ್ ಇಲ್ಲ, ಹಾಡುಗಳಿಲ್ಲ, ಇದು ಪಕ್ಕಾ ಆಕ್ಷನ್ ಜಾನರ್ ಚಿತ್ರ. ರಿಲೆಯನ್ಸ್ ಎಂಟರ್ ಟೈನ್ ಮೆಂಟ್ ಸಂಸ್ಥೆ ಜೊತೆ ಹಿಂದಿ ರೀಮೇಕ್ ಗೆ ಕೈಜೋಡಿಸಿರುವುದು ಖುಷಿ ಕೊಟ್ಟಿದೆ. ನಿಜಕ್ಕೂ ಇದು ಪ್ಯಾನ್ ಇಂಡಿಯಾ ಕಾನ್ಸೆಪ್ಟ್. ಎಲ್ಲರನ್ನು ರಂಜಿಸಲಿದೆ'' ಎಂದು ಹೇಳಿದ್ದರು.

 Hrithik Roshan Set Play Lead Role In Kaithi Remake

ಕಾರ್ತಿ ಮಾಡಿದ್ದ ಪಾತ್ರಕ್ಕಾಗಿ ಹಿಂದಿಯಲ್ಲಿ ಹೃತಿಕ್ ರೋಷನ್ ಅವರನ್ನು ಸಂಪರ್ಕಿಸಲಾಗಿದೆಯಂತೆ. ಮತ್ತೊಂದೆಡೆ ರಣ್ವೀರ್ ಸಿಂಗ್ ಅವರನ್ನು ಕೂಡ ಕರೆತರುವ ಮಾತುಕತೆ ನಡೆಯುತ್ತಿದೆಯಂತೆ.

ಮೂಲ ಚಿತ್ರವನ್ನು ನಿರ್ದೇಶನ ಮಾಡಿದ್ದ ಲೋಕೇಶ್ ಕನಕರಾಜ್ ಅವರೇ ಹಿಂದಿಯಲ್ಲೂ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. 'ಸೂಪರ್ 30' ಹಾಗೂ 'ವಾರ್' ಚಿತ್ರಗಳಲ್ಲಿ ನಟಿಸಿದ್ದ ಹೃತಿಕ್ ಬಹುಶಃ ಈ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಡಬಹುದು ಎಂಬ ನಿರೀಕ್ಷೆ ಬಿಟೌನ್ ನಲ್ಲಿದೆ.

More from Filmibeat

English summary
2019 supr hit movie kaithi set to remade on bollywood. according to source hrithik roshan might be playing lead role in remake.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X