For Quick Alerts
  ALLOW NOTIFICATIONS  
  For Daily Alerts

  ಭಾರತದ ಅಪ್ರತಿಮ ಸೂಪರ್ ಹೀರೋ 'ಕ್ರಿಶ್' ಹುಟ್ಟಿದ್ದು ಹೇಗೆ?

  |

  ಹಾಲಿವುಡ್‌ಗೆ ಹಲವು ಸೂಪರ್‌ ಹೀರೋಗಳಿದ್ದಾರೆ. ಸೂಪರ್ ಮ್ಯಾನ್, ಐರನ್ ಮ್ಯಾನ್, ಹಲ್ಕ್, ಥಾರ್, ಬ್ಯಾಟ್‌ ಮ್ಯಾನ್, ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ.

  ಆದರೆ ಭಾರತೀಯ ಚಿತ್ರರಂಗಕ್ಕೆ ಹೆಚ್ಚಿನ ಸೂಪರ್‌ ಮ್ಯಾನ್‌ಗಳಿಲ್ಲ. ಭಾರತದ ಸೂಪರ್‌ ಮ್ಯಾನ್‌ಗಳೆಂದರೆ ಮೊದಲಿಗೆ ನೆನಪಿಗೆ ಬರುವುದು ಶಕ್ತಿಮಾನ್ ಹಾಗೂ ಕ್ರಿಶ್ ಇಬ್ಬರೇ. 'ಶಕ್ತಿಮಾನ್' ಕಾಲ ಬಹುತೇಕ ಮುಗಿದಿದೆ. ಹಾಗಾಗಿ ಪ್ರಸ್ತುತ ಉಳಿದಿರುವುದು ಕ್ರಿಶ್ ಮಾತ್ರವೇ.

  ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಹಾಕಿದ ಈ ಫೋಟೊ ಸಿಕ್ಕಾಪಟ್ಟೆ ವೈರಲ್ಹೃತಿಕ್ ರೋಷನ್ ಗರ್ಲ್‌ಫ್ರೆಂಡ್ ಹಾಕಿದ ಈ ಫೋಟೊ ಸಿಕ್ಕಾಪಟ್ಟೆ ವೈರಲ್

  ಭಾರತದ ಅಪ್ರತಿಮ ಸೂಪರ್ ಹೀರೋ ಕ್ರಿಶ್‌ ಜನನವಾಗಿದ್ದು ಅಂದರೆ 'ಕ್ರಿಶ್' ಸಿನಿಮಾ ಮಾಡಬೇಕು ಎಂಬ ಐಡಿಯಾ ಬಂದಿದ್ದು ಹೇಗೆ ಎಂಬುದನ್ನು ನಟ ಹೃತಿಕ್ ರೋಷನ್ ಹಂಚಿಕೊಂಡಿದ್ದಾರೆ. ಜಗತ್‌ವಿಖ್ಯಾತ ಲಾರ್ಡ್‌ ಆಫ್‌ ದಿ ರಿಂಗ್ಸ್‌ನ ಪ್ರೀಕ್ವೆಲ್‌ ''ದಿ ರಿಂಗ್ಸ್ ಆಫ್ ಪವರ್‌' ವೆಬ್ ಸರಣಿಯ ಪ್ರಚಾರ ಕಾರ್ಯಕ್ರಮದಲ್ಲಿ ಹೃತಿಕ್ ಈ ಬಗ್ಗೆ ಮಾತನಾಡಿದ್ದಾರೆ.

  'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾ ನೋಡಿದ್ದ ರಾಕೇಶ್ ರೋಶನ್

  'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾ ನೋಡಿದ್ದ ರಾಕೇಶ್ ರೋಶನ್

  'ಕ್ರಿಶ್' ಸಿನಿಮಾ ಮಾಡಬೇಕು ಎಂಬ ಐಡಿಯಾ ಹುಟ್ಟಲು 'ಲಾರ್ಡ್ ಆಫ್‌ ದಿ ರಿಂಗ್ಸ್' ಕಾರಣವಂತೆ. ಹೀಗೆಂದು ಸ್ವತಃ ಹೃತಿಕ್ ರೋಷನ್ ಹೇಳಿಕೊಂಡಿದ್ದಾರೆ. 'ದಿ ರಿಂಗ್ಸ್ ಆಫ್ ಪವರ್‌' ವೆಬ್ ಸರಣಿಯ ಪ್ರಚಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಹೃತಿಕ್, 2004 ರಲ್ಲಿ ಮೊದಲ ಬಾರಿಗೆ ನನ್ನ ತಂದೆ ರಾಕೇಶ್ ರೋಷನ್ 'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾ ಸರಣಿಯ ಮೊದಲ ಸಿನಿಮಾ ನೋಡಿದರು. ಅದಾದ ಬಳಿಕ ಅದರ ಎರಡನೇ ಭಾಗ ನೋಡಿದರು. ಅದಾದ ಬಳಿಕ ಮೂರನೇ ಸಿನಿಮಾ ನೋಡಿದರು.

  ಬಹಳ ಇಂಪ್ರೆಸ್ ಆಗಿದ್ದ ರಾಕೇಶ್ ರೋಷನ್

  ಬಹಳ ಇಂಪ್ರೆಸ್ ಆಗಿದ್ದ ರಾಕೇಶ್ ರೋಷನ್

  ''ಮೂರು ಸಿನಿಮಾಗಳನ್ನು ಸತತವಾಗಿ ನೋಡಿ ಅವರು ಬಹಳ ಇಂಪ್ರೆಸ್ ಆದರು. ನನ್ನೊಟ್ಟಿಗೆ ಇದರ ಬಗ್ಗೆ ಮಾತನಾಡುತ್ತಾ, ಅವರು ಅದೆಷ್ಟು ಚೆನ್ನಾಗಿ ಒಂದು ಐಡಿಯಾ ಇಟ್ಟುಕೊಂಡು ಅದನ್ನು ಬೆಳೆಸುತ್ತಾ, ಸೇರಿಸುತ್ತಾ ಹೋಗಿದ್ದಾರೆ. ಅದು ಬಹಳ ಚೆನ್ನಾಗಿದೆ. ನಾವೂ ಹಾಗೆ ಮಾಡಬೇಕು ಭಾರತದಲ್ಲೂ ಆ ರೀತಿಯ ಪ್ರಯೋಗ ಆಗಬೇಕು ಎಂದರು'' ಎಂದು ಅಪರೂಪದ ಮಾಹಿತಿ ಹಂಚಿಕೊಂಡರು ಹೃತಿಕ್ ರೋಷನ್.

  'ಕ್ರಿಶ್' ಐಡಿಯಾ ಹುಟ್ಟಿದ್ದು ಹೀಗೆ

  'ಕ್ರಿಶ್' ಐಡಿಯಾ ಹುಟ್ಟಿದ್ದು ಹೀಗೆ

  ''ಆಗ ನಾನು ಸರಿ ನೀವೇನು ಮಾಡಬೇಕು ಎಂದುಕೊಂಡಿದ್ದೀರಿ ಹೇಳಿ ಎಂದೆ. ಆಗ ಅವರು, ನಾವೀಗಾಗಲೇ 'ಕೋಯಿ ಮಿಲ್ ಗಯಾ' ಸಿನಿಮಾ ಮಾಡಿದ್ದೇವೆ. ಅದು ಸೂಪರ್ ಹಿಟ್ ಆಗಿದೆ. ಅದೇ ಸಿನಿಮಾದ ಕತೆಯನ್ನು ಇಟ್ಟುಕೊಂಡು ಅದನ್ನು ಡೆವೆಲಪ್ ಮಾಡೋಣ. ಆ ಕತೆಯ ಮುಂದೆ ಏನಾಗುತ್ತದೆ ನೋಡೋಣ ಎಂದು ಹೇಳಿದರು. ಆಗ ಹುಟ್ಟಿದ್ದೇ 'ಕ್ರಿಶ್' ಸಿನಿಮಾ. 'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾ ಮೂಲಕ ಭಾರತದ ಸೂಪರ್ ಹೀರೋ 'ಕ್ರಿಶ್' ಜನನವಾಯಿತು'' ಎಂದಿದ್ದಾರೆ ಹೃತಿಕ್ ರೋಷನ್.

  ಸೆಪ್ಟೆಂಬರ್ 02 ರಂದು ಬಿಡುಗಡೆ ಆಗಲಿದೆ

  ಸೆಪ್ಟೆಂಬರ್ 02 ರಂದು ಬಿಡುಗಡೆ ಆಗಲಿದೆ

  ಈವರೆಗೆ ಮೂರು 'ಕ್ರಿಶ್' ಸರಣಿಯ ಸಿನಿಮಾಗಳು ತೆರೆಗೆ ಬಂದಿವೆ. ಇದೀಗ ನಾಲ್ಕನೇ ಸಿನಿಮಾ ಸಹ ಬರಲಿದೆ. ಮೂರರಲ್ಲೂ ಹೃತಿಕ್ ರೋಷನ್ ಕ್ರಿಶ್ ಆಗಿ ನಟಿಸಿದ್ದಾರೆ. ಇನ್ನು 'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾದ ಪ್ರೀಕ್ವೆಲ್ ಇದೀಗ ನಿರ್ಮಾಣವಾಗಿದೆ. 'ಲಾರ್ಡ್ ಆಫ್‌ ದಿ ರಿಂಗ್ಸ್' ಸಿನಿಮಾದ ಕತೆ ಎಲ್ಲಿಂದ ಆರಂಭವಾಗಿತ್ತೊ ಅದರ ಹಿಂದೆ ಏನಾಗಿತ್ತು ಎಂಬುದನ್ನು ಪ್ರೀಕ್ವೆಲ್ ಹೇಳಲಿದ್ದು, ಇದಕ್ಕೆ 'ದಿ ರಿಂಗ್ಸ್ ಆಫ್ ಪವರ್' ಎಂದು ಹೆಸರಿಡಲಾಗಿದೆ. ವೆಬ್ ಸರಣಿಯಾಗಿ ನಿರ್ಮಾಣಗೊಂಡಿರುವ 'ದಿ ರಿಂಗ್ಸ್ ಆಫ್ ಪವರ್' ಸೆಪ್ಟೆಂಬರ್ 02 ರಂದು ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಲಿದೆ.

  English summary
  Actor Hrithik Roshan shared how the idea of making movie Krrish came to his father Rakesh Roshan.
  Thursday, August 18, 2022, 23:29
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X