'ಕ್ರಿಶ್' ಚಿತ್ರಕ್ಕೆ 15 ವರ್ಷದ ಸಂಭ್ರಮ: ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಹೃತಿಕ್

ಬಾಲಿವುಡ್ ನಟ ಹೃತಿಕ್ ರೋಷನ್ ನಟನೆಯ ಕ್ರಿಶ್ ಮೊದಲ ಸರಣಿ ಬಿಡುಗಡೆಯಾಗಿ 15 ವರ್ಷಗಳು ಕಳೆದಿವೆ. ಈಗಾಗಲೇ ಕ್ರಿಶ್ 3 ಸರಣಿಗಳನ್ನು ಯಶಸ್ವಿಯಾಗಿ ಮುಗಿಸಿದೆ. ಚಿತ್ರಾಭಿಮಾನಿಗಳ ನೆಚ್ಚಿನ ಸರಣಿಗಳಲ್ಲಿ ಕ್ರಿಶ್ ಕೂಡ ಒಂದು. 15 ವರ್ಷ ತುಂಬಿದ ಸಂತಸದಲ್ಲೇ ಹೃತಿಕ್ ಅಭಿಮಾನಿಗಳಿಗೆ ಮತ್ತೊಂದು ಸರ್ಪ್ರೈಸ್ ನೀಡಿದ್ದಾರೆ.

ಕ್ರಿಶ್ 4 ಸಿನಿಮಾದ ಟೀಸರ್ ಬಿಡುಗಡೆ ಮಾಡಿದ್ದಾರೆ. ವಾರ್ ಸಿನಿಮಾ ಬಳಿಕ ಹೃತಿಕ್ ಅಧಿಕೃತವಾಗಿ ಯಾವುದೇ ಅನೌನ್ಸ್ ಮಾಡಿರಲಿಲ್ಲ. ಇದೀಗ ಕ್ರಿಶ್ 4ನೇ ಸರಣಿ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬರಲು ಸಜ್ಜಾಗುತ್ತಿದ್ದಾರೆ. ಈ ಬಗ್ಗೆ ಸ್ವತಃ ಹೃತಿಕ್ ಬಹಿರಂಗ ಪಡಿಸಿದ್ದಾರೆ.

ಕ್ರಿಶ್ 4 ಸರಣಿ ಬಗ್ಗೆ 5 ಸೆಕೆಂಡ್ ಗಳ ಟೀಸರ್ ಶೇರ್ ಮಾಡಿದ್ದಾರೆ. ಟೀಸರ್ ನಲ್ಲಿ, "ಕ್ರಿಶ್ ಚಿತ್ರಕ್ಕೆ 15 ವರ್ಷಗಳು. ಹಿಂದಿನದು ಮುಗಿದಿದೆ. ಭವಿಷ್ಯ ಏನನ್ನು ತರುತ್ತೆ ಎಂದು ನೋಡೋಣ" ಎಂದು ಬರೆದುಕೊಂಡಿದ್ದಾರೆ. 2006ರಲ್ಲಿ ಬಂದ ಕ್ರಿಶ್ ಮೊದಲ ಸರಣಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಹೃತಿಕ್ ರೋಷನ್ ತಂದೆ ರಾಕೇಶ್ ರೋಷನ್ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿತ್ತು.

Hrithik Roshan shares teaser of Krrish 4 on 1st Krrish 15th anniversary

ಬಳಿಕ ಬಂದ 2 ಮತ್ತು 3ನೇ ಸರಣಿಗಳು ಕೂಡ ಅಷ್ಟೆ ಯಶಸ್ಸು ಕಂಡಿವೆ. 2013ರಲ್ಲಿ ಕ್ರಿಶ್ ಮೂರನೇ ಸರಣಿ ಬಿಡುಗಡೆಯಾಗಿದೆ. ಹೃತಿಕ್ ರೋಷನ್ ದ್ವಿಪಾತ್ರದಲ್ಲಿ ಮಿಂಚಿದ್ದರು. ಪ್ರಿಯಾಂಕಾ ಚೋಪ್ರಾ, ಕಂಗನಾ ರಣಾವತ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಟ ವಿವೇಕ್ ಒಬೆರಾಯ್ ಕೂಡ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.

Recommended Video

ಕರೀನಾ ಕಪೂರ್ ಸೀತೆ ಅಲ್ಲ ಎಂದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ | Filmibeat Kannada

ಈಗಾಗಲೇ ಪ್ರಿ ಪ್ರೊಡಕ್ಷನ್ ಕೆಲಸ ಪ್ರಾರಂಭವಾಗಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ರಾಕೇಶ್ ರೋಷನ್ ಕ್ರಿಶ್-4ಗಾಗಿ ಎಲ್ಲಾ ತಯಾರಿಗಳನ್ನು ನಡೆಸುತ್ತಿದ್ದು, ಸದ್ಯದಲ್ಲೇ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಈ ಬಾರಿ ಹೃತಿಕ್ ಜೊತೆ ಯಾರೆಲ್ಲ ಕಾಣಿಸಿಕೊಳ್ಳುತ್ತಾರೆ, ಪ್ರಿಯಾಂಕಾ ಚೋಪ್ರಾ ಸೇರ್ಪಡೆಯಾಗ್ತಾರಾ ಎಂದು ಕಾದು ನೋಡಬೇಕು.

More from Filmibeat

English summary
Bollywood Actor Hrithik Roshan shares teaser of Krrish 4 on 1st Krrish 15th anniversary.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X