Hrithik Roshan:ಮುಂಬೈನಲ್ಲಿ ಆಫೀಸ್ ಕಚೇರಿಗೆ ಹೃತಿಕ್ ರೋಷನ್ ₹28 ಕೋಟಿ ಸುರಿದದ್ದು ಏಕೆ? ಆ ಜಾಗದ ವಿಶೇಷತೆ ಏನು?

ಬಾಲಿವುಡ್‌ನ ಗ್ರೀಕ್ ಗಾಡ್ ಎಂದೇ ಖ್ಯಾತಿ ಪಡೆದಿರುವ ಹ್ಯಾಂಡ್‌ಸಮ್ ಹಂಕ್ ಹೃತಿಕ್ ರೋಷನ್ ಮತ್ತೊಂದು ಪ್ರಾಪರ್ಟಿ ಖರೀದಿ ಮಾಡಿದ್ದಾರೆ. ಬೆಳ್ಳಿ ಪರದೆಯ ಮೇಲೆ ತಮ್ಮ ಅಭಿನಯದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸುವ ಈ ನಟ ರಿಯಲ್ ಎಸ್ಟೇಟ್ ಲೋಕದಲ್ಲೂ ಭರ್ಜರಿ ಸದ್ದು ಮಾಡುತ್ತಿದ್ದಾರೆ. ಮುಂಬೈನ ಅತ್ಯಂತ ಐಷಾರಾಮಿ ಮತ್ತು ದುಬಾರಿ ಪ್ರದೇಶವಾದ ಜುಹುವಿನಲ್ಲಿ ಭಾರಿ ಹೂಡಿಕೆ ಮಾಡಿದ್ದಾರೆ.

ಹೃತಿಕ್ ರೋಷನ್ ಸುಮಾರು ₹28 ಕೋಟಿ ರೂಪಾಯಿಗಳನ್ನು ಪೆಕನ್ ರಿಯಾಲ್ಟಿ ನಿರ್ಮಿಸುತ್ತಿರುವ 'ಯುರಾ' ಎಂಬ ಹೊಸ ಅತ್ಯಾಧುನಿಕ ಆಫೀಸ್ ಪ್ರಾಜೆಕ್ಟ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಸದಾ ತಮ್ಮ ವೃತ್ತಿಪರ ನಿರ್ಧಾರಗಳಿಂದ ಗಮನ ಸೆಳೆಯುವ ಹೃತಿಕ್ ಈ ಹೂಡಿಕೆಯ ಮೂಲಕ ತಮ್ಮ ಆರ್ಥಿಕ ಚಾಣಾಕ್ಷತೆಯನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ.

Hrithik Roshan shells out Rs28 crore for 7 000 Sq ft office space in Juhu in Mumbai

ಹೃತಿಕ್ ಖರೀದಿ ಮಾಡಿರುವ ಆಫೀಸ್ ಕಟ್ಟಡ 'ಎ ಗ್ರೇಡ್' ಕ್ಯಾಟಗರಿಗೆ ಸೇರಿದೆ. ಅಂದರೆ ಅತ್ಯುತ್ತಮ ಗುಣಮಟ್ಟದ ನಿರ್ಮಾಣ, ಅತ್ಯಾಧುನಿಕ ಸೌಲಭ್ಯಗಳು ಮತ್ತು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಹೃತಿಕ್ ಅವರ ಸಿನಿಮಾ ವೃತ್ತಿಜೀವನದ ಜೊತೆಗೆ ಅವರ ವ್ಯವಹಾರ, ಆಸಕ್ತಿಗಳು ಕೂಡ ಎಷ್ಟು ದೊಡ್ಡ ಮಟ್ಟದಲ್ಲಿವೆ ಎಂಬುದಕ್ಕೆ ಈ ಹೂಡಿಕೆ ಸಾಕ್ಷಿಯಾಗಿದೆ.

'ಒಂದು ಮಹಡಿ ಒಂದು ಕುಟುಂಬ' ವಿನ್ಯಾಸ

ಹೃತಿಕ್ ರೋಷನ್ ಖರೀದಿಸಿರುವ ಈ ಕಚೇರಿ ಸಾಮಾನ್ಯವಾದುದ್ದಲ್ಲ. ಇದು ಬರೋಬ್ಬರಿ 7,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ವಿಶಾಲವಾದ ಈ ಜಾಗವು 'ಯುರಾ' ಪ್ರಾಜೆಕ್ಟ್‌ನ 'ಸಿ' ವಿಂಗ್‌ನಲ್ಲಿದೆ. ಒಟ್ಟು ಎರಡು ಮಹಡಿಗಳಲ್ಲಿ ಇದು ಹರಡಿಕೊಂಡಿದೆ. ಈ ಜಾಗ ಹೃತಿಕ್ ರೋಷನ್ ಅವರು ವ್ಯವಹಾರಗಳಿಗೆ ಬೇಕಾದಷ್ಟು ಜಾಗವನ್ನು ಒದಗಿಸಲಿದೆ ಎನ್ನಲಾಗಿದೆ.

ಈ ಬೃಹತ್ ಆಸ್ತಿಯನ್ನು ಹೃತಿಕ್ ತಮ್ಮ ಎರಡು ಪ್ರಮುಖ ಸಂಸ್ಥೆಗಳ ಹೆಸರಿನಲ್ಲಿ ಖರೀದಿಸಿದ್ದಾರೆ. ಅವುಗಳೆಂದರೆ HRX ಡಿಜಿಟೆಕ್ ಎಲ್ಎಲ್ಪಿ ಮತ್ತು ಫಿಲಂಕುಂಜ್ ಎಲ್ಎಲ್ಪಿ ಹೆಸರಿನಲ್ಲಿ ಇವೆ. ಹೃತಿಕ್ ಫಿಟ್ನೆಸ್ ಮತ್ತು ಲೈಫ್‌ಸ್ಟೈಲ್‌ ಬ್ರ್ಯಾಂಡ್ HRX ಇಡೀ ದೇಶದಲ್ಲಿ ಪ್ರಸಿದ್ಧವಾಗಿದೆ. ಈ ಹೂಡಿಕೆಯು ಅವರ ವೃತ್ತಿಪರ ಕಾರ್ಯಕ್ಷಮತೆ ವಿಸ್ತರಣೆಗೆ ಸಹಾಯಕವಾಗಲಿದೆ.

ಈ ಆಫೀಸ್ ಕಟ್ಟಡದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಇದರ ವಿಶೇಷ ವಿನ್ಯಾಸ. 'ಸಿ' ವಿಂಗ್ ಒಟ್ಟು ನಾಲ್ಕು ಹಂತಗಳನ್ನು ಹೊಂದಿದೆ. ಇದರಲ್ಲಿ 'ಒಂದು ಮಹಡಿ ಒಂದು ಕುಟುಂಬದ' ಶೈಲಿಯ ವಿನ್ಯಾಸವನ್ನು ಅಳವಡಿಸಲಾಗಿದೆ. ಇದರಿಂದ ಆ ಜಾಗದ ಮಾಲೀಕರಿಗೆ ಗರಿಷ್ಠ ಖಾಸಗಿ ಜಾಗ ಸಿಗಲಿದೆ. ಹೃತಿಕ್ ರೋಷನ್ ಅವರಂತಹ ಸೂಪರ್‌ಸ್ಟಾರ್‌ಗಳಿಗೆ ಇಂತಹ ಖಾಸಗಿ ಜಾಗ ತುಂಬಾ ಅಗತ್ಯ.

Hrithik Roshan shells out Rs28 crore for 7 000 Sq ft office space in Juhu in Mumbai

ಮುಂಬೈ ರಿಯಲ್ ಎಸ್ಟೇಟ್‌ನಲ್ಲಿ ಸೆಲೆಬ್ರಿಟಿಗಳ ಆಸಕ್ತಿ ಏಕೆ?

ಮುಂಬೈನ ರಿಯಲ್ ಎಸ್ಟೇಟ್ ಮಾರುಕಟ್ಟೆಯಲ್ಲಿ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ಹೂಡಿಕೆ ಮಾಡುವುದು ಹೊಸದೇನಲ್ಲ. ಆದರೆ, ಹೃತಿಕ್ ರೋಷನ್ ಅವರಂತಹ ಸ್ಟಾರ್‌ಗಳು ಇಷ್ಟು ದೊಡ್ಡ ಮೊತ್ತವನ್ನು ಆಫೀಸ್ ಕಟ್ಟಡಗಳಿಗೆ ಹೂಡಿಕೆ ಮಾಡುವುದರಿಂದ ಮುಂಬೈನ ರಿಯಲ್ ಎಸ್ಟೇಟ್ ಗಗನಕ್ಕೇರಿದೆ.

ಸಿನಿಮಾ ತಾರೆಯರು ಸಾಮಾನ್ಯವಾಗಿ ಐಷಾರಾಮಿ ಬಂಗ್ಲೆಗಳಿಗೆ, ಫ್ಲ್ಯಾಟ್‌ಗಳಿಗೆ ಹೂಡಿಕೆ ಮಾಡುತ್ತಾರೆ. ಆದರೆ, ಇತ್ತೀಚೆಗೆ ಅವರು ತಮ್ಮ ವ್ಯವಹಾರಗಳು ಹಾಗೂ ಬ್ರ್ಯಾಂಡ್‌ಗಳನ್ನು ಬೆಳೆಸಲು ಪ್ರೀಮಿಯಂ ವಾಣಿಜ್ಯ ಆಸ್ತಿಗಳ ಕಡೆಗೆ ಗಮನ ಹರಿಸುತ್ತಿದ್ದಾರೆ. ಜುಹು ಪ್ರದೇಶವು ಈಗಾಗಲೇ ಅನೇಕ ಬಾಲಿವುಡ್ ದಿಗ್ಗಜರ ನೆಲೆಯಾಗಿದೆ. ಈ ಪ್ರದೇಶದಲ್ಲಿ ಆಫೀಸ್ ಹೊಂದುವುದು ಅವರಿಗೊಂದು ಪ್ರತಿಷ್ಠೆಯ ವಿಷಯವಾಗಿದೆ.

ಹೃತಿಕ್ ರೋಷನ್ ₹28 ಕೋಟಿ ಹೂಡಿಕೆಯು ಮುಂಬೈ ರಿಯಲ್ ಎಸ್ಟೇಟ್ ಮಾರುಕಟ್ಟೆಗೆ ದೊಡ್ಡ ಉತ್ತೇಜನ ನೀಡಿದೆ. ಮುಂಬೈನ ದುಬಾರಿ ಏರಿಯಾಗಳಲ್ಲಿ ಬಾಲಿವುಡ್‌ನ ಸ್ಟಾರ್‌ಗಳು ಮುಗಿಬಿದ್ದು ಹೂಡಿಕೆ ಮಾಡುತ್ತಿದ್ದಾರೆ. ಹೃತಿಕ್ ಈ ಚಾಣಾಕ್ಷ ನಿರ್ಧಾರವು ಕೇವಲ ಆಸ್ತಿಯ ಮೌಲ್ಯದ ದೃಷ್ಟಿಯಿಂದ ಮಾತ್ರವಲ್ಲ. ಅವರ ವೈಯಕ್ತಿಕ ಮತ್ತು ವೃತ್ತಿಪರ ವ್ಯವಹಾರಗಳ ಭವಿಷ್ಯದ ವಿಸ್ತರಣೆಗೂ ಬಹು ಮುಖ್ಯವಾಗಿದೆ. ಈ ರೀತಿಯ ಪ್ರೀಮಿಯಂ ವರ್ಕ್‌ಸ್ಪೇಸ್‌ನಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಲಾಭದಾಯಕ ರಿಟರ್ನ್ಸ್ ಪಡೆಯುವ ನಿರೀಕ್ಷೆಯಿದೆ.

More from Filmibeat

English summary
Hrithik Roshan shells out Rs28 crore for 7,000 Sq ft office space in Juhu in Mumbai.
Read more about: hrithik roshan actor property
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X