ಐಶ್ವರ್ಯ ರೈ ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದೆ: ನಟ ಹೃತಿಕ್ ರೋಷನ್
ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್, ಗ್ರೀಕ್ ಗಾಡ್ ಹೃತಿಕ್ ರೋಷನ್, ನಟಿ ಐಶ್ವರ್ಯ ರೈ ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದ ಬಗ್ಗೆ ಇತ್ತೀಚಿಗೆ ಬಹಿರಂಗ ಪಡಿಸಿದ್ದಾರೆ. ಬಾಲಿವುಡ್ ನ ಖ್ಯಾತ ಜೋಡಿಗಳಲ್ಲಿ ಹೃತಿಕ್ ರೋಷನ್ ಮತ್ತು ಐಶ್ವರ್ಯ ರೈ ಜೋಡಿ ಕೂಡ ಒಂದು.
Recommended Video
ಧೂಮ್-2, ಜೋಧಾ ಅಕ್ಬರ್, ಗುಜಾರಿಶ್ ಅಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಅಭಿಮಾನಿಗಳ ನೆಚ್ಚಿನ ಜೋಡಿಗಳಲ್ಲಿ ಒಂದಾಗಿದೆ. ಹೃತಿಕ್, ಐಶ್ವರ್ಯ ರೈ ಜೊತೆ ಅಭಿನಯಿಸುವ ಮೊದಲು ಮಾಜಿ ವಿಶ್ವ ಸುಂದರಿಯ ಬಗ್ಗೆ ತಪ್ಪು ಕಲ್ಪನೆ ಹೊಂದಿದ್ದರಂತೆ. ಈ ಬಗ್ಗೆ ಹೃತಿಕ್ ಇತ್ತೀಚಿಗೆ ನೀಡಿದ ಸಂದರ್ಶವೊಂದರಲ್ಲಿ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ..

'ಐಶ್ವರ್ಯ ರೈ ಬಗ್ಗೆ ತಪ್ಪು ತಿಳಿದುಕೊಂಡಿದ್ದೆ..'
ನಟ ಹೃತಿಕ್ ರೋಷನ್ ಗೆ ಐಶ್ವರ್ಯ ರೈ ಅಭಿನಯದ ಬಗ್ಗೆ ಅನುಮಾನ ಹೊಂದಿದ್ದರಂತೆ. ಈ ಬಗ್ಗೆ ಹೃತಿಕ್ ರೋಷನ್ ಈಗ ಬಹಿರಂಗ ಪಡಿಸಿದ್ದಾರೆ. "ಐಶ್ವರ್ಯ ರೈ ಅವರು ಬರೀ ಸುಂದರವಾಗಿದ್ದಾರೆ. ಅವರಿಗೆ ನನೆ ಬರುವುದಿಲ್ಲ ಎಂದುಕೊಂಡಿದ್ದೆ. ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದು ನನ್ನ ಮೂರ್ಖತನ. ಕೆಲವೊಮ್ಮೆ ಸೌಂದರ್ಯವು ಉಳಿದ ಎಲ್ಲಾ ಪ್ರತಿಭೆಗಳನ್ನು ಮರೆಮಾಚಿಸುತ್ತೆ. ಐಶ್ವರ್ಯ ಅವರು ಹೆಚ್ಚಿನ ಪ್ರತಿಭೆಯನ್ನು ಹೊಂದಿದ್ದಾರೆ" ಎಂದು ಹೇಳಿದ್ದಾರೆ.

ಹೃತಿಕ್ ಆಲೋಚನೆ ಬದಲಾಗಿದ್ದು ಯಾವಾಗ?
ಹೃತಿಕ್ ರೋಷನ್ ಗೆ ಐಶ್ವರ್ಯ ಬಗ್ಗೆ ಇದ್ದ ಆಲೋಚನೆ ಬದಲಾಗಿದ್ದು ಧೂಮ್-2 ಸಿನಿಮಾದಲ್ಲಂತೆ. ಧೂಮ್-2 ಸಿನಿಮಾದಲ್ಲಿ ಮೊದಲ ಬಾರಿಗೆ ಅವರ ಜೊತೆ ಕೆಲಸ ಮಾಡಿದಾಗ ಅವರ ಬಗ್ಗೆ ಇದ್ದ ಆಲೋಚನೆ ಬದಲಾಯಿತು. ಐಶ್ವರ್ಯ ಅವರ ಬದ್ಧತೆ, ಕಾರ್ಯವೈಕರಿ ನೋಡಿ ಅಚ್ಚರಿಯಾಯಿತು" ಎಂದು ಹೃತಿಕ್ ಹೇಳಿದ್ದಾರೆ.

ಬಾಲಿವುಡ್ ನ ಹಿಟ್ ಜೋಡಿ
ಧೂಮ್-2 ನಂತರ ಹೃತಿಕ್ ಮತ್ತು ಐಶ್ವರ್ಯ ರೈ 2 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಜೋಧಾ ಅಕ್ಬರ್ ಮತ್ತು ಗುಜಾರಿಶ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈ ಎರಡೂ ಸಿನಿಮಾಗಳು ಸಹ ಸೂಪರ್ ಹಿಟ್ ಆಗಿದ್ದು, ಐಶ್ ಮತ್ತು ಹೃತಿಕ್ ಜೋಡಿಯೂ ಬಾಲಿವುಡ್ ನ ಖ್ಯಾತ ಜೋಡಿಗಳಲ್ಲಿ ಒಂದಾಗಿದೆ.

ವಾರ್ ನಂತರ ಹೃತಿಕ್ ಸಿನಿಮಾ ಅನೌನ್ಸ್ ಮಾಡಿಲ್ಲ
ಹೃತಿಕ್ ರೋಷನ್ ಸದ್ಯ ಯಾವುದೆ ಸಿನಿಮಾವನ್ನು ಅನೌನ್ಸ್ ಮಾಡಿಲ್ಲ. ಕೊನೆಯದಾಗಿ ಹ್ಯಾಂಡ್ ಸಮ್ ಹಂಕ್ 'ವಾರ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾದ ಭರ್ಜರಿ ಯಶಸ್ಸಿನ ನಂತರ ಹೃತಿಕ್ ಮತ್ಯಾವ ಸಿನಿಮಾ ಒಪ್ಪಿಕೊಂಡಿಲ್ಲ. ಇನ್ನೂ ನಟಿ ಐಶ್ವರ್ಯ ರೈ ಸಹ ಯಾವುದೇ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ.


Click it and Unblock the Notifications











