For Quick Alerts
  ALLOW NOTIFICATIONS  
  For Daily Alerts

  ಅಪರೂಪದ ಕತೆ ಹೊಂದಿರಲಿದೆ 'ಕ್ರಿಶ್ 4' ಸಿನಿಮಾ

  |

  ಭಾರತದ ಸೂಪರ್ ಹೀರೋ ಸಿನಿಮಾಗಳಲ್ಲಿ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದು 'ಕ್ರಿಶ್' ಮಾತ್ರವೇ. 'ಕ್ರಿಶ್' ಸರಣಿಯ ಮೊದಲ ಸಿನಿಮಾ ಬಿಡುಗಡೆ ಆಗಿ ನಿನ್ನೆ (ಜೂನ್ 23) ಕ್ಕೆ ಹದಿನೈದು ವರ್ಷವಾಗಿದ್ದು, ಇದೇ ದಿನ 'ಕ್ರಿಶ್ 4'ವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ ಹೃತಿಕ್ ರೋಷನ್.

  ಈ ಹಿಂದಿನ 'ಕ್ರಿಶ್' ಸಿನಿಮಾಗಳನ್ನು ನಿರ್ದೇಶನ ಮಾಡಿರುವ ರಾಕೇಶ್ ರೋಷನ್ ಅವರೇ 'ಕ್ರಿಶ್ 4' ಸಿನಿಮಾವನ್ನು ನಿರ್ದೇಶನ ಮಾಡಲಿದ್ದು, ಸಿನಿಮಾದ ಕತೆಯ ಎಳೆ ಇದೀಗ ಬಹಿರಂಗಗೊಂಡಿದೆ.

  'ಕ್ರಿಶ್ 4' ಸಿನಿಮಾವು ಟೈಮ್ ಟ್ರಾವೆಲ್ ಪರಿಕಲ್ಪನೆಯ ಮೇಲೆ ಆಧರಿತವಾಗಿರುತ್ತದೆ. 'ಕ್ರಿಶ್ 4' ನಲ್ಲಿ ಸೂಪರ್ ಹೀರೊ ಕ್ರಿಶ್ ವರ್ತಮಾನವನ್ನು ಮೀರಿ ಭವಿಷ್ಯ ಹಾಗೂ ಭೂತಕಾಲಕ್ಕೆ ಪ್ರಯಾಣ ಬೆಳೆಸಲಿದ್ದಾರೆ. ಭವಿಷ್ಯ, ಭೂತ, ವರ್ತಮಾನಗಳ ನಡುವೆ ನಡೆವ ಕತೆ 'ಕ್ರಿಶ್ 4'ನಲ್ಲಿರಲಿದೆ.

  ಟೈಮ್ ಟ್ರಾವೆಲ್ ಕತೆ ಆಗಿರುವ ಕಾರಣ ಈ ಹಿಂದಿನ 'ಕ್ರಿಶ್' ಸಿನಿಮಾಗಳಲ್ಲಿ ನಟಿಸಿರುವ ಪಾತ್ರಗಳು ಸಹ 'ಕ್ರಿಶ್ 4'ನಲ್ಲಿ ಇರಲಿವೆ ಎನ್ನಲಾಗುತ್ತಿದೆ. ಪ್ರೀತಿ ಜಿಂಟಾ, ಪ್ರಿಯಾಂಕಾ ಚೋಪ್ರಾ ಅವರುಗಳು ಸಹ 'ಕ್ರಿಶ್ 4' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ಹಾಲಿವುಡ್‌ನಲ್ಲಿ ಟೈಮ್ ಟ್ರಾವೆಲ್ ಕುರಿತ ಸಿನಿಮಾಗಳು ಬಹಳಷ್ಟು ಬಂದಿವೆ ಆದರೆ ಭಾರತ ಸಿನಿಮಾರಂಗದಲ್ಲಿ ಈ ವಿಷಯ ಕುರಿತಂತೆ ಸಿನಿಮಾಗಳು ಕಡಿಮೆ. 1997 ರಲ್ಲಿಯೇ ಕನ್ನಡದಲ್ಲಿ 'ಮಾನವ 2022' ಹೆಸರಿನ ಸಿನಿಮಾ ಬಂದಿದ್ದು ಗಮನಾರ್ಹ. ಹಿಂದಿಯಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದ 'ಲವ್ ಸ್ಟೋರಿ 2050' ಎಂಬ ಸಿನಿಮಾ ಸಹ ಬಂದಿತ್ತು. ತಮಿಳಿನ 'ನ್ಯೂ', ತೆಲುಗಿನ 'ನಾನಿ' ಸಹ ತುಸು ಅದೇ ಮಾದರಿ ಕತೆ ಹೊಂದಿತ್ತು.

  Hamsalekha - ರವಿಚಂದ್ರನ್ ದಾಖಲೆ ಯಾರಿಂದಲೂ ಅಳಿಸೋಕೆ ಸಾಧ್ಯವಿಲ್ಲ | Oneindia Kannada

  ಇನ್ನು ಹೃತಿಕ್ ರೋಷನ್ 'ಫೈಟರ್' ಸಿನಿಮಾದಲ್ಲಿ ನಟಿಸಲಿದ್ದಾರೆ. ಅದರ ಬಳಿಕ 'ಕ್ರಿಶ್ 4' ಪ್ರಾರಂಭವಾಗಲಿದೆ. ಶಾರುಖ್ ನಟನೆಯ 'ಪಠಾಣ್' ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಹೃತಿಕ್ ರೋಷನ್.

  English summary
  Hrithik Roshan starer Krish 4 likely to be based on Time Travel concept. Rakesh Roshan directing the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X