ಕುತೂಹಲ ಹೆಚ್ಚಿಸಿದ ಹೃತಿಕ್ ಪೋಸ್ಟ್: ಮತ್ತೆ ಬರ್ತಾನಾ ಸೂಪರ್ ಹೀರೋ 'ಕಿಶ್'?

ಭಾರತದ ಸೂಪರ್ ಹೀರೋ ಕ್ರಿಶ್ ಪಾತ್ರಕ್ಕೆ ಏಳು ವರ್ಷ ತುಂಬಿದೆ. ಕಿಶ್ ಸರಣಿಯ ಮೂರನೇ ಚಿತ್ರ ಬಿಡುಗಡೆಯಾಗಿ ನವೆಂಬರ್ 1ಕ್ಕೆ ಏಳು ವರ್ಷ ಕಳೆದಿದೆ. ಈ ವಿಶೇಷವಾಗಿ ನಟ ಹೃತಿಕ್ ರೋಷನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿದ್ದು, ಕ್ರಿಶ್ 4ರ ಬಗ್ಗೆ ನಿರೀಕ್ಷೆ ಹೆಚ್ಚಿಸಿದೆ.

ತಮ್ಮ ಇನ್ಸ್ಟಾದಲ್ಲಿ ಕಿಶ್ ಪಾತ್ರದ ಸಣ್ಣ ವಿಡಿಯೋ ಹಂಚಿಕೊಂಡಿದ್ದಾರೆ. ಹೃತಿಕ್ ರೋಷನ್ ಕ್ರಿಶ್ 4 ಬಗ್ಗೆ ಎಲ್ಲಿಯೂ ಉಲ್ಲೇಖಿಸಿಲ್ಲ. ಆದ್ರೆ, ಈ ಪೋಸ್ಟ್ ಕಂಡ ನೆಟ್ಟಿಗರು ನಾಲ್ಕನೇ ಭಾಗ ಬರಲಿದೆ ಎಂದು ಸಂತಸ ಪಡುತ್ತಿದ್ದಾರೆ.

ಕೇವಲ ಸಿನಿ ಪ್ರೇಕ್ಷಕರು ಮಾತ್ರವಲ್ಲ ಬಾಲಿವುಡ್‌ನ ಕೆಲವು ಸೆಲೆಬ್ರಿಟಿಗಳು ಸಹ ಕ್ರಿಶ್ ಪಾತ್ರದ ಬಗ್ಗೆ ನೆನಪಿಸಿಕೊಂಡಿದ್ದಾರೆ. ಹೃತಿಕ್ ಪೋಸ್ಟ್ ಗೆ ಪ್ರತಿಕ್ರಿಯೆ ನೀಡಿರುವ ಸುಸೈನ್ ಖಾನ್, ಪಿಂಕಿ ರೋಷನ್ ಸಹ ''ನನ್ನ ನೆಚ್ಚಿನ ಸೂಪರ್ ಹೀರೋ'' ಎಂದಿದ್ದಾರೆ.

Hrithik Roshan starrer Krrish 3 Movie Completes 7 Years

ಕ್ರಿಶ್ ಸರಣಿ ಬಗ್ಗೆ.....

2003ರಲ್ಲಿ ಮೊದಲ ಚಿತ್ರ 'ಕೊಯಿ ಮಿಲ್ ಗಯಾ' ಎಂಬ ಹೆಸರಿನಲ್ಲಿ ಕಿಶ್ ಸರಣಿ ಶುರುವಾಯ್ತು. 2006ರಲ್ಲಿ 'ಕ್ರಿಶ್' ಎಂಬ ಹೆಸರಿನಲ್ಲಿ ಎರಡನೇ ಚಿತ್ರ ಬಿಡುಗಡೆ ಆಯಿತು. ನಂತರ 2013ರಲ್ಲಿ 'ಕ್ರಿಶ್-3' ಎಂಬ ಹೆಸರಿನಲ್ಲಿ ಮೂರನೇ ಸಿನಿಮಾ ಬಂತು.

ಹೃತಿಕ್ ರೋಷನ್ ಅವರ ತಂದೆ ರಾಕೇಶ್ ಈ ಸರಣಿಯ ಮೂರು ಚಿತ್ರಗಳನ್ನು ನಿರ್ದೇಶಿಸುವುದರ ಜೊತೆಗೆ ನಿರ್ಮಾಣ ಸಹ ಮಾಡಿದ್ದಾರೆ. ಮೊದಲ ಚಿತ್ರದಲ್ಲಿ ಪ್ರೀತಾ ಜಿಂಟಾ ನಾಯಕಿಯಾಗಿದ್ದರು. ನಂತರ ಬಂದ ಎರಡು ಚಿತ್ರಗಳಲ್ಲಿ ಪ್ರಿಯಾಂಕಾ ಚೋಪ್ರಾ ನಟಿಸಿದ್ದರು.

Recommended Video

ACT 1978 : 60 ಲಕ್ಷದ ಸೆಟ್ ಹಾಕಿದ್ದು ನೋಡಿ ಪುನೀತ್ ರಾಜ್ ಕುಮಾರ್ ಖುಷಿ ಪಟ್ಟಿದ್ರು | Sanchari Vijay | Puneeth

More from Filmibeat

English summary
Hrithik Roshan starrer Krrish 3 Movie Completes 7 Years. Hrithik hints, Krrish 4 will come Soon?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X