ಕಂಗನಾಗೆ ಭಯಪಟ್ಟು ಸಿನಿಮಾ ರಿಲೀಸ್ ಡೇಟ್ ಬದಲಾಯಿಸಿದ್ರಾ ಹೃತಿಕ್?
ಬಾಲಿವುಡ್ ನಟ ಹೃತಿಕ್ ರೋಷನ್ ಮತ್ತು ನಟಿ ಕಂಗನಾ ರಣಾವತ್ ನಡುವಿನ ಕಿತ್ತಾಟ ಬಹುತೇಕರಿಗೆ ಗೊತ್ತಿರುವುದೆ. ಕಳೆದ ವರ್ಷ ಇಬ್ಬರ ಜಗಳ ಬಿ ಟೌನಲ್ಲಿ ದೊಡ್ಡ ಮಟ್ಟಕ್ಕೆ ಸದ್ದು ಮಾಡಿತ್ತು. ಸದ್ಯ ಇಬ್ಬರ ನಡುವಿನಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತ್ತಿತ್ತು. ಆದ್ರೀಗ ಮತ್ತೆ ಹೃತಿಕ್ ಮತ್ತು ಕಂಗನಾ ವಾರ್ ಶುರುವಾಗಿದೆ.
ಹೌದು, ಇಬ್ಬರ ಜಗಳ ಇನ್ನೇನು ತಣ್ಣಗಾಗುತ್ತಾ ಬಂದಿದೆ ಎನ್ನುವಷ್ಟೊತ್ತಿಗೆ ಮತ್ತೆ ಕಂಗನಾ ಕಿತ್ತಾಟ ಶುರು ಮಾಡಿಕೊಂಡಿದ್ದಾರೆ. ಕಂಗನಾ ಕೋಪಕ್ಕೆ ಕಾರಣವಾಗಿದ್ದು ಹೃತಿಕ್ ರೋಷನ್ ಅಭಿನಯದ 'ಸೂಪರ್ 30' ಸಿನಿಮಾ. ಬಿ ಟೌನ್ ಕ್ರಿಶ್ ಅಭಿನಯದ 'ಸೂಪರ್ 30' ಸಿನಿಮಾ ಜುಲೈ 26ಕ್ಕೆ ತೆರೆಗೆ ಬರಲು ಸಜ್ಜಾಗಿತ್ತು. ಈ ರಿಲೀಸ್ ಡೇಟ್ ಕಂಗನಾಗೆ ನಿದ್ದೆ ಗೆಡಿಸಿತ್ತು.
ಯಾಕೆಂದ್ರೆ ಕಂಗನಾ ಅಭಿನಯದ 'ಮೆಂಟಲ್ ಹೈ ಕ್ಯಾ' ಸಿನಿಮಾ ಕೂಡ ಜುಲೈ 26ಕ್ಕೆ ರಿಲೀಸ್ ಆಗುತ್ತಿದೆ. ಕಂಗನಾ ಬೇಕು ಅಂತಾನೆ ತನ್ನ ಸಿನಿಮಾವನ್ನು ಹೃತಿಕ್ ಸಿನಿಮಾದ ಜೊತೆ ರಿಲೀಸ್ ಮಾಡಿಸುತ್ತಿದ್ದಾರೆ ಎಂದು ಬಾಲಿವುಡ್ ನಲ್ಲಿ ಮಾತನಾಡಿಕೊಳ್ಳಲು ಶುರುಮಾಡಿದ್ರು.

ಇದರಿಂದ ಕಂಗನಾ ಸಹೋದರಿ ರಂಗೋಲಿ ಮತ್ತೆ ಹೃತಿಕ್ ವಿರುದ್ಧ ಗರಂ ಆಗಿದ್ದರು. ಇದೆಲ್ಲ ಹೃತಿಕ್ ಬೇಕು ಅಂತಾನೆ ಮಾಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದ್ರ ನಡುವೆ 'ಮೆಂಟಲ್ ಹೈ ಕ್ಯಾ' ಚಿತ್ರದ ನಿರ್ಮಾಪಕಿ ಈ ಸಿನಿಮಾ ರಿಲೀಸ್ ಡೇಟನ್ನು ಫಿಕ್ಸ್ ಮಾಡಿದ್ದು ನಾನೆ. ಯಾರ ಹಸ್ತಕ್ಷೇಪವು ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಇದೆಲ್ಲ ಬೆಳವಣೆಯ ನಂತರ ಈಗ ಹೃತಿಕ್ ರೋಷನ್ ಅಭಿನಯದ 'ಸೂಪರ್ 30' ಸಿನಿಮಾ ರಿಲೀಸ್ ಡೇಟನ್ನು ಬದಲಾಯಿಸಿದ್ದಾರೆಎನ್ನುವ ಮಾತುಗಳು ಕೇಳಿ ಬರುತ್ತಿವೆ. ಜುಲೈ 26ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ ಈಗ ಎರಡು ವಾರ ಮುಂಚಿತವಾಗಿ ಅಂದ್ರೆ ಜುಲೈ 12ಕ್ಕೆ ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ.
'ಸೂಪರ್ 30' ಸಿನಿಮಾ ತಂಡ ಈ ನಿರ್ಧಾರ ತೆಗೆದುಕೊಳ್ಳುತ್ತಿದಂತೆ ಹೃತಿಕ್ ಕಂಗನಾಗೆ ಭಯಪಟ್ಟು ಸಿನಿಮಾ ರಿಲೀಸ್ ಡೇಟನ್ನು ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ 'ಸೂಪರ್ 30' ಸಿನಿಮಾ ಜುಲೈ 12ಕ್ಕೆ ತೆರೆಗೆ ಬರುವ ಬಗ್ಗೆ ಚಿತ್ರತಂಡ ಇನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದ್ರೆ ಇಬ್ಬರ ಸಿನಿಮಾ ಮಾತ್ರ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.


Click it and Unblock the Notifications











