ಹಲವು ವರ್ಷಗಳ ಬಳಿಕ ಶಾರುಖ್ ಖಾನ್‌ಗೆ ಜೊತೆಯಾಗುತ್ತಿದ್ದಾರೆ ಈ ಸ್ಟಾರ್ ನಟ

ತಮ್ಮ ಹೊಸ ಸಿನಿಮಾ 'ಪಠಾಣ್‌' ಗಾಗಿ ಸ್ಟಾರ್ ನಟರನ್ನೆಲ್ಲಾ ಒಟ್ಟು ಮಾಡುತ್ತಿದ್ದಾರೆ ಶಾರುಖ್ ಖಾನ್. ತಮ್ಮ ಸಿನಿಮಾದಲ್ಲಿ ನಟಿಸಲು ಸಲ್ಮಾನ್ ಖಾನ್ ಅನ್ನು ಈಗಾಗಲೇ ಒಪ್ಪಿಸಿರುವ ಶಾರುಖ್, ಈಗ ಮತ್ತೊಬ್ಬ ಸ್ಟಾರ್ ನಟನಿಗೆ ಗಾಳ ಹಾಕಿದ್ದಾರೆ.

ಹೌದು, ನಟ ಹೃತಿಕ್ ರೋಷನ್ ಸಹ ಶಾರುಖ್ ನಟನೆಯ 'ಪಠಾಣ್' ಸಿನಿಮಾದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಪೂರ್ಣ ಪ್ರಮಾಣದ ಪಾತ್ರದ ಬದಲಿಗೆ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ.

ಶಾರುಖ್ ಖಾನ್ ಹಾಗೂ ಹೃತಿಕ್ ರೋಷನ್ ಒಟ್ಟಾಗಿ 2001 ರಲ್ಲಿ ಬಿಡುಗಡೆ ಆಗಿದ್ದ 'ಕಭಿ ಖುಷಿ ಕಭಿ ಗಮ್' ಸಿನಿಮಾದಲ್ಲಿ ನಟಿಸಿದ್ದರು. ಅದಾದ ನಂತರ ಈ ಇಬ್ಬರೂ ಒಟ್ಟಿಗೆ ತೆರೆ ಹಂಚಿಕೊಂಡಿಲ್ಲ. 'ಓಂ ಶಾಂತಿ ಓಂ' ಹಾಗೂ 'ಡಾನ್ 2 'ಸಿನಿಮಾದಲ್ಲಿ ಹೃತಿಕ್ ರೋಷನ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರಾದರೂ ಶಾರುಖ್-ಹೃತಿಕ್ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಂಡು 19 ವರ್ಷವಾಗಿದೆ.

Hrithik Roshan To Act In Shah Rukh Khans Next Movie Pathan

'ಪಠಾಣ್' ಗುಪ್ತಚರ ಇಲಾಖೆಯ ಕತೆಯುಳ್ಳ ಸಿನಿಮಾ ಆಗಿದ್ದು, ಸಲ್ಮಾನ್ ಖಾನ್ 'ಟೈಗರ್' ಸರಣಿಯ ಸಿನಿಮಾಗಳಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಹೃತಿಕ್ ರೋಷನ್ ಸಹ 'ವಾರ್' ಸಿನಿಮಾದಲ್ಲಿ ಗುಪ್ತಚರ ಇಲಾಖೆ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಗಾಗಿ ಈ ಇಬ್ಬರೂ ನಟರನ್ನು ತಮ್ಮ 'ಪಠಾಣ್' ಸಿನಿಮಾಕ್ಕೆ ಅತಿಥಿ ಪಾತ್ರಕ್ಕಾಗಿ ಕರೆದುಕೊಂಡು ಬರುತ್ತಿದ್ದಾರೆ ಶಾರುಖ್.

Recommended Video

ಹೊಸ ಉದ್ಯಮ ಶುರು ಮಾಡಿದ ಚಿಕ್ಕಣ್ಣ | Chikanna | Darshan | Filmibeat Kannada

ಪಠಾಣ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಾಯಕಿಯಾಗಿದ್ದಾರೆ. ಇದರ ಜೊತೆಗೆ ಜಾನ್ ಅಬ್ರಹಾಂ ಹಾಗೂ ಡಿಂಪಲ್ ಕಪಾಡಿಯಾ ಸಹ ಸಿನಿಮಾದಲ್ಲಿದ್ದಾರೆ. ಸಿನಿಮಾವನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ವಾರ್ ಸಿನಿಮಾವನ್ನು ಇವರೇ ನಿರ್ದೇಶಿಸಿದ್ದರು.

More from Filmibeat

English summary
Hrithik Roshan may act in Shah Rukh Khan's next movie Pathan. Salman Khan also doing a guest appearance in that movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X