ತ್ರಿಬಲ್ ಧಮಾಕ: ಒಂದೇ ಚಿತ್ರದಲ್ಲಿ ಸಲ್ಲು, ಶಾರುಖ್, ಹೃತಿಕ್: ಅಭಿಮಾನಿಗಳಿಗೆ ಹಬ್ಬ
ಭಾರತೀಯ ಚಿತ್ರರಂಗದಲ್ಲೀಗ ಮಲ್ಟಿಸ್ಟಾರರ್ ಸಿನಿಮಾಗಳ ಟ್ರೆಂಡ್ ನಡೀತಿದೆ. ಅಕ್ಕ ಪಕ್ಕ ಇಂಡಸ್ಟ್ರಿ ಸ್ಟಾರ್ ನಟರು ಒಂದೇ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಪ್ಯಾನ್ ಇಂಡಿಯಾ ಕ್ರೇಜ್ ಇರುವುದರಿಂದ ಕೆಲವೊಮ್ಮೆ ಇದು ಪ್ಲಸ್ ಆಗುತ್ತಿದೆ. ಇದೀಗ ಬಾಲಿವುಡ್‌ನಲ್ಲೊಂದು ಮೆಗಾ ಮಲ್ಟಿಸ್ಟಾರರ್ ಚರ್ಚೆ ನಡೀತಿದೆ.
ಸಲ್ಮಾನ್ ಖಾನ್, ಶಾರುಖ್ ಖಾನ್, ಹೃತಿಕ್ ರೋಷನ್ ಬಾಲಿವುಡ್ ಸ್ಟಾರ್ ಸ್ಟಾರ್‌ಗಳು. ಮೂವರಿಗೂ ದೊಡ್ಡ ಅಭಿಮಾನಿಗಳ ಬಳಗವಿದೆ. ಇನ್ನು ಪರ್ಫಾರ್ಮನ್ಸ್ ವಿಚಾರಕ್ಕೆ ಬಂದರೂ ಒಬ್ಬರಿಗಿಂತ ಒಬ್ಬರು ಗ್ರೇಟ್ ಎಂದೇ ಹೇಳಬೇಕು. ಇದೀಗ ಸಲ್ಲು, ಶಾರುಖ್, ಹೃತಿಕ್ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಳ್ಳುವ ಬಗ್ಗೆ ಚರ್ಚೆ ನಡೀತಿದೆ. ಈಗಾಗಲೇ ಮೂವರು ನಟಿಸಿದ್ದಾರೆ ಎನ್ನಲಾಗ್ತಿದೆ.

ಸಲ್ಮಾನ್ ಖಾನ್ ನಟನೆಯ 'ಟೈಗರ್ - 3' ಚಿತ್ರದಲ್ಲಿ 'ಪಠಾಣ್' ಆಗಿ ಶಾರುಖ್ ಖಾನ್ ಗೆಸ್ಟ್ ಅಪಿಯರೆನ್ಸ್ ಮಾಡ್ತಿರೋದು ಗೊತ್ತೇಯಿದೆ. ಅಚ್ಚರಿ ಎಂದರೆ ಇದೇ ಚಿತ್ರದಲ್ಲಿ 'ವಾರ್' ಚಿತ್ರದ ಮೇಜರ್ ಕಬೀರ್ ಕಾಣಿಸಿಕೊಳ್ಳುತ್ತಾನೆ ಎನ್ನಲಾಗ್ತಿದೆ. ಅಂದರೆ 'ಟೈಗರ್ - 3' ಚಿತ್ರದಲ್ಲಿ ಹೃತಿಕ್ ಕೂಡ ಅತಿಥಿ ಪಾತ್ರದಲ್ಲಿ ದರ್ಶನ ಕೊಡುತ್ತಾರೆ ಎನ್ನುವ ಚರ್ಚೆ ಶುರುವಾಗಿದೆ. ದೀಪಾವಳಿ ಸಂಭ್ರಮದಲ್ಲಿ ಸಿನಿಮಾ ಮುಂದಿನ ವಾರ ತೆರೆಗೆ ಬರಲಿದೆ. ಇಂತಾ ಹೊತ್ತಲ್ಲೇ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲಿ 'ಟೈಗರ್' ಸರಣಿ, 'ಪಠಾಣ್' ಹಾಗೂ 'ವಾರ್' ಸಿನಿಮಾಗಳು ಬಂದಿದೆ. ಮುಂದೆ ಈ ಮೂರು ಸಿನಿಮಾ ಕತೆಗಳನ್ನು ಸೇರಿಸಿ ಒಂದು ಮೆಗಾ ಪ್ರಾಜೆಕ್ಟ್ ಮಾಡುವ ಲೆಕ್ಕಾಚಾರ ನಡೀತಿದೆ. ಆದರೆ 'ಟೈಗರ್ - 3' ಚಿತ್ರದಲ್ಲೇ ಅದರ ಸಣ್ಣ ಝಲಕ್ ತೋರಿಸುತ್ತಾರೆ ಎನ್ನಲಾಗ್ತಿದೆ. ಕಬೀರ್ ಆಗಿ ಹೃತಿಕ್, ಟೈಗರ್ ಸಲ್ಲು, ಪಠಾಣ್ ಶಾರುಕ್ ಜೊತೆ ಮಿಂಚುವ ಸುಳಿವು ಸಿಗುತ್ತಿದೆ. ಅದೇ ನಿಜವಾದರೆ ಬಾಲಿವುಡ್ ಪ್ರೇಕ್ಷಕರಿಗೆ ಹಬ್ಬವೇ ಸರಿ.

ಆದಿತ್ಯಾ ಚೋಪ್ರಾ ಈಗಾಗಲೇ 'ವಾರ್-2' ಸಿನಿಮಾ ಘೋಷಿಸಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ಎದುರು ತೆಲುಗು ನಟ ಜ್ಯೂ. ಎನ್‌ಟಿಆರ್ ನಟಿಸಲಿದ್ದಾರೆ. 'ಟೈಗರ್' Vs 'ಪಠಾಣ್' ಸಿನಿಮಾ ಕೂಡ ಫಿಕ್ಸ್ ಆಗಿದೆ. ಇದೆಲ್ಲದರ ನಡುವೆ 'ಟೈಗರ್- 3' ಹೃತಿಕ್ ಕೂಡ ನಟಿಸುತ್ತಾರೆ ಅನ್ನೋದು ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಮನೀಶ್ ಶರ್ಮಾ ನಿರ್ದೇಶನದ 'ಟೈಗರ್'-3 ಚಿತ್ರದಲ್ಲಿ ಕತ್ರೀನಾ ಕೈಫ್ ನಾಯಕಿಯಾಗಿ ಮಿಂಚಿದ್ದಾರೆ.
ಅವಿನಾಶ್ ಟೈಗರ್ ಸಿಂಗ್ ರಾಥೋರ್ ಆಗಿ ಸಲ್ಮಾನ್ ಖಾನ್ ಈಗಾಗಲೇ 2 ಸಿನಿಮಾಗಳಲ್ಲಿ ಸಕ್ಸಸ್ ಕಂಡಿದ್ದಾರೆ. 2012ರಲ್ಲಿ 'ಏಕ್ ಥಾ ಟೈಗರ್' ಸಿನಿಮಾ ಬಂದಿತ್ತು. 5 ವರ್ಷಗಳ ಬಳಿಕ ಅದರ ಸೀಕ್ವೆಲ್ 'ಟೈಗರ್ ಜಿಂದಾ ಹೈ' ತೆರೆ ಕಂಡಿತ್ತು. ಅಲ್ಲಿಂದ ಮುಂದೆ 'ವಾರ್' ಹಾಗೂ 'ಪಠಾಣ್' ಸಿನಿಮಾಗಳು ಬಂದವು. ನವೆಂಬರ್ 12ಕ್ಕೆ 'ಟೈಗರ್'-3 ಸಿನಿಮಾ ರಿಲೀಸ್ ಆಗಲಿದೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಸಾಂಗ್ಸ್ ರಿಲೀಸ್ ಆಗಿ ಸದ್ದು ಮಾಡ್ತಿವೆ.
'ಟೈಗರ್'-3 ಚಿತ್ರದಲ್ಲಿ ಇಮ್ರಾನ್ ಹಶ್ಮಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಇನ್ನುಳಿದಂತೆ ರೇವತಿ, ವಿಶಾಲ್ ಜೆತ್ವಾ, ಕುಮುದ್ ಮಿಶ್ರಾ, ರಣ್‌ವೀರ್ ಶೌರಿ ತಾರಾಗಣದಲ್ಲಿದ್ದಾರೆ. ಹೃತಿಕ್ ರೋಷನ್ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಲಾಗ್ತಿದೆ. ಆದರೆ ಸ್ಯಾಂಪಲ್‌ಗಳಲ್ಲಿ ಅದರ ಝಲಕ್ ಮಾತ್ರ ಕಾಣಿಸಿಲ್ಲ. ಟೈಗರ್, ಪಠಾಣ್, ಕಬೀರ್ ಒಂದೇ ಫ್ರೇಮ್‌ನಲ್ಲಿ ಕಂಡರೆ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇರಲ್ಲ. ಒಟ್ನಲ್ಲಿ ಈ ಬಾರಿ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ದೀಪಾವಳಿ ಸಡಗರ ಧಾಮ್ ಧೂಮ್ ಎನ್ನುವಂತಿರುತ್ತದೆ ಅನ್ನೋದು ಗೊತ್ತಾಗುತ್ತಿದೆ.


Click it and Unblock the Notifications











