For Quick Alerts
  ALLOW NOTIFICATIONS  
  For Daily Alerts

  ವಿಜಯ್ ಸೇತುಪತಿ ಪಾತ್ರಕ್ಕಾಗಿ ಹೃತಿಕ್ ರೋಷನ್ ಭರ್ಜರಿ ತಯಾರಿ

  |

  ತಮಿಳಿನ ಸೂಪರ್ ಹಿಟ್ ಸಿನಿಮಾ ವಿಕ್ರಂವೇದ ಬಾಲಿವುಡ್‌ನಲ್ಲಿ ರೀಮೇಕ್ ಆಗ್ತಿದೆ ಎನ್ನುವ ವಿಚಾರ ಬಹಳ ದಿನಗಳಿಂದ ಸುದ್ದಿಯಲ್ಲಿದೆ. ನಟ ಸೈಫ್ ಅಲಿ ಖಾನ್ ಮತ್ತು ಹೃತಿಕ್ ರೋಷನ್ ಹಿಂದಿ ಅವತರಣಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.

  ವಿಜಯ್ ಸೇತುಪತಿ ಪಾತ್ರದಲ್ಲಿ ಹೃತಿಕ್ ರೋಷನ್ ಹಾಗೂ ಮಾಧವನ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ಬಣ್ಣ ಹಚ್ಚಲಿದ್ದಾರೆ. ಈ ಚಿತ್ರಕ್ಕಾಗಿ ಎಲ್ಲ ಸಿದ್ದತೆ ನಡೆದಿದ್ದು, ಬೇಸಿಗೆಯಲ್ಲಿ ಸಿನಿಮಾ ಶುರುವಾಗಲಿದೆ.

  ಪ್ರಭಾಸ್ ಜೊತೆ ಸೇರಲಿದ್ದಾರೆ ಬಾಲಿವುಡ್ ಸೂಪರ್ ಹೀರೋಪ್ರಭಾಸ್ ಜೊತೆ ಸೇರಲಿದ್ದಾರೆ ಬಾಲಿವುಡ್ ಸೂಪರ್ ಹೀರೋ

  ವಿಜಯ್ ಸೇತುಪತಿ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ನಟಿಸಿದ್ದರು. ಹಿಂದಿಯಲ್ಲಿ ಆ ಪಾತ್ರವನ್ನು ಹೃತಿಕ್ ನಿರ್ವಹಿಸುತ್ತಿದ್ದು, ಪಾತ್ರಕ್ಕಾಗಿ ವರ್ಕೌಟ್ ಆರಂಭಿಸಿದ್ದಾರೆ. ದೇಹದ ತೂಕ ಸಹ ಇಳಿಸಿಕೊಳ್ಳುತ್ತಿದ್ದಾರಂತೆ.

  ಇನ್ನು ಮಾಧವನ್ ಪೊಲೀಸ್ ಆಫೀಸರ್ ಆಗಿದ್ದರು. ಆ ಪಾತ್ರಕ್ಕೆ ಸೈಫ್ ಆಯ್ಕೆಯಾಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಪುಷ್ಕರ್ ಮತ್ತು ಗಾಯಿತ್ರಿ ಅವರೇ ಹಿಂದಿಯಲ್ಲೂ ಸಿನಿಮಾ ನಿರ್ದೇಶಿಸುತ್ತಿದ್ದಾರೆ.

  ವಿಶೇಷ ಅಂದ್ರೆ ಹೃತಿಕ್ ರೋಷನ್ ಪಾಲಿಗೆ ಇದು 25ನೇ ಚಿತ್ರವಾಗಿದೆ. ನಾಯಕನಾಗಿ ನಟಿಸುತ್ತಿರುವ 25ನೇ ಪ್ರಾಜೆಕ್ಟ್ ಎಂಬ ಕಾರಣಕ್ಕೆ ಹೃತಿಕ್ ವೈಯಕ್ತಿಕವಾಗಿ ಹೆಚ್ಚು ಆಸಕ್ತಿ ತೋರಿಸಿ ಪಾತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ.

  ಹೃತಿಕ್ ರಾವಣನಾದರೇ ರಾಮ ಆಗ್ತಾರಾ ಮಹೇಶ್ ಬಾಬು? ಸೀತೆ ಯಾರು? ಇಲ್ಲಿದೆ '3ಡಿ ರಾಮಾಯಣ'ದ ಮಾಹಿತಿಹೃತಿಕ್ ರಾವಣನಾದರೇ ರಾಮ ಆಗ್ತಾರಾ ಮಹೇಶ್ ಬಾಬು? ಸೀತೆ ಯಾರು? ಇಲ್ಲಿದೆ '3ಡಿ ರಾಮಾಯಣ'ದ ಮಾಹಿತಿ

  ಪುನೀತ್ ದರ್ಶನ್ಗೆ ಎಚ್ಚರಿಕೆ ನೀಡಿದ್ರು ಸಚಿವ ಡಿ ಸುಧಾಕರ್ | Filmibeat Kannada

  ಹಿಂದಿಯಲ್ಲಿ ಸಿನಿಮಾದ ಹೆಸರು ಅಂತಿಮವಾಗಿಲ್ಲ. ಪ್ರಿ-ಪ್ರೊಡಕ್ಷನ್ ಕೆಲಸ ಪ್ರಗತಿಯಲ್ಲಿದೆ. ಈ ಚಿತ್ರದ ಜೊತೆಗೆ ಹಲವು ಸಿನಿಮಾಗಳನ್ನು ಹೃತಿಕ್ ತಮ್ಮ ಕಿಸೆಯಲ್ಲಿಟ್ಟುಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಜೊತೆ ಕ್ರಿಶ್ 4 ಹಾಗೂ ಮಧು ಮಂತೇನಾ ಅವರ ರಾಮಾಯಣ ಸಿನಿಮಾನೂ ಸಾಲಿನಲ್ಲಿದೆ. ಜೊತೆಗೆ 'ವಾರ್' ಚಿತ್ರದ ಸೀಕ್ವೆಲ್ ಸಹ ಸಿದ್ಧತೆ ನಡೆಯುತ್ತಿದೆ.

  English summary
  Hrithik Roshan begins the shoot for the Vikram Vedha remake in Summer 2021. He will be seen reprising the role of Vijay Sethupati.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X