'ಕ್ರಿಶ್- 4' ಚಿತ್ರಕ್ಕೆ ವೇದಿಕೆ ಸಿದ್ಧ; ಭಾರೀ ಟ್ವಿಸ್ಟ್ ಕೊಟ್ಟ ಹೃತಿಕ್ ರೋಷನ್

ಇಂಡಿಯನ್ ಸೂಪರ್ ಹಿಟ್ 'ಕ್ರಿಶ್' ಸರಣಿಯ ಸಿನಿಮಾಗಳು ಹಿಟ್ ಲಿಸ್ಟ್ ಸೇರಿರುವುದು ಗೊತ್ತೇಯಿದೆ. ಸರಣಿಯ 4ನೇ ಚಿತ್ರಕ್ಕೆ ಇದೀಗ ವೇದಿಕೆ ಸಿದ್ಧವಾಗಿದೆ. ಅಚ್ಚರಿ ಎಂದರೆ ಈ ಬಾರಿ ಸ್ವತಃ ಹೃತಿಕ್ ರೋಷನ್ ಆಕ್ಷನ್ ಕಟ್ ಹೇಳಲು ಮುಂದಾಗಿದ್ದಾರೆ. ಇದು ಸಹಜವಾಗಿಯೇ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ಈ ವರ್ಷ 'ವಾರ್- 2' ಸಿನಿಮಾ ಮೂಲಕ ಪ್ರೇಕ್ಷಕರನ್ನು ರಂಜಿಸಲು ಹೃತಿಕ್ ಸಜ್ಜಾಗುತ್ತಿದ್ದಾರೆ. ಇಂತಹ ಹೊತ್ತಲ್ಲೇ 'ಕ್ರಿಶ್'-4 ಸಿನಿಮಾ ಘೋಷಣೆ ಆಗಿದೆ. ಬಹಳ ದಿನಗಳಿಂದ ಅಭಿಮಾನಿಗಳು ಇದಕ್ಕಾಗಿ ಕಾಯುತ್ತಿದ್ದರು. ಆದರೆ ಬ್ರೇಕಿಂಗ್ ನ್ಯೂಸ್ ಸಿಕ್ಕಿಬಿಟ್ಟಿದೆ. 22 ವರ್ಷಗಳ ಹಿಂದೆ ಬಂದಿದ್ದ 'ಕೋಯಿ ಮಿಲ್ ಗಯಾ' ಸಿನಿಮಾ ಸಂಚಲನ ಸೃಷ್ಟಿಸಿತ್ತು. ಈ ಚಿತ್ರದಲ್ಲೇ ಸೂಪರ್ ಹೀರೋ 'ಕ್ರಿಶ್' ಪಾತ್ರ ಸೃಷ್ಟಿಯಾಗಿತ್ತು. ಚಿತ್ರವನ್ನು ಹೃತಿಕ್ ತಂದೆ ರಾಕೇಶ್ ರೋಷನ್ ನಿರ್ಮಿಸಿ ನಿರ್ದೇಶನ ಮಾಡಿದ್ದರು.

Hrithik Roshan turns director for India s biggest super hero franchise film Krrish- 4

2006ರಲ್ಲಿ ಬಂದಿದ್ದ 'ಕ್ರಿಶ್' ಚಿತ್ರವನ್ನು ತಮ್ಮದೇ ಬ್ಯಾನರ್‌ನಲ್ಲಿ ರಾಕೇಶ್ ರೋಷನ್ ಕಟ್ಟಿಕೊಟ್ಟಿದ್ದರು. ಮುಖಕ್ಕೆ ಮಾಸ್ಕ್ ಧರಿಸಿ ಹೃತಿಕ್ ಮೋಡಿ ಮಾಡಿದ್ದರು. ಅಂದಾಜು 40 ಕೋಟಿ ರೂ. ಬಜೆಟ್ ಸಿನಿಮಾ 120 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿ ಗೆದ್ದಿತ್ತು. 12 ವರ್ಷಗಳ ಹಿಂದೆ ಸರಣಿಯ ಮತ್ತೊಂದು ಸಿನಿಮಾ 'ಕ್ರಿಶ್- 3' ತೆರೆಗಪ್ಪಳಿಸಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಹೃತಿಕ್ ಎದುರು ವಿವೇಕ್ ಒಬೆರಾಯ್ ವಿಲನ್ ಆಗಿ ಅಬ್ಬರಿಸಿದ್ದರು.

ರಾಕೇಶ್ ರೋಷನ್ 'ಕ್ರಿಶ್- 3' ಚಿತ್ರದ ಸಾರಥ್ಯ ವಹಿಸಿಕೊಂಡಿದ್ದರು. ಇದೀಗ ಸರಣಿಯ ಮುಂದಿನ ಚಿತ್ರವನ್ನು ಹೃತಿಕ್ ನಿರ್ದೇಶನ ಮಾಡುವ ಸುದ್ದಿ ಬಂದಿದೆ. ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ತಂದೆ ರಾಕೇಶ್ ರೋಷನ್ ಬಳಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಹೀರೊ ಆಗುವುದಕ್ಕೂ ಮುನ್ನ ತೆರೆಹಿಂದೆ ಇದ್ದು ಸಿನಿಮಾ ಮೇಕಿಂಗ್ ಬಗ್ಗೆ ತಿಳಿದುಕೊಂಡಿದ್ದರು. ಹೀಗೆ 4 ಸಿನಿಮಾಗಳಿಗೆ ಸಹಾಯಕರಾಗಿ ದುಡಿದಿದ್ದರು.

'ಕಹೋ ನಾ ಪ್ಯಾರ್ ಹೈ' ಚಿತ್ರದ ಮೂಲಕ ಹೃತಿಕ್ ರೋಷನ್ ಹೀರೊ ಆಗಿ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು. ತಮ್ಮ ಸ್ಟೈಲ್, ಸುಂದರ ಅಂಗ ಸೌಷ್ಠವದಿಂದ ಅಭಿಮಾನಿಗಳಿಗೆ ಗ್ರೀಕ್ ಗಾಡ್ ಎಂಬ ಬಿರುದು ಪಡೆದರು. ಇತ್ತೀಚೆಗೆ ಹೃತಿಕ್ ಸಿನಿಮಾಗಳ ಕ್ರೇಜ್ ಕಮ್ಮಿ ಆಗಿದೆ. ವರ್ಷಕ್ಕೊಂದು ಸಿನಿಮಾ ಮಾಡುತ್ತಾ ಬರ್ತಿದ್ದಾರೆ. ಪತ್ನಿ ಸುಸೈನ್‌ಗೆ ಡಿವೋರ್ಸ್ ಕೊಟ್ಟ ಬಳಿಕ ಕೊಂಚ ಸೈಲೆಂಟ್ ಆಗಿಬಿಟ್ಟಿದ್ದರು.

Hrithik Roshan turns director for India s biggest super hero franchise film Krrish- 4

ತಾನಾಯ್ತು ತನ್ನ ಸಿನಿಮಾ ಆಯ್ತು, ವರ್ಕೌಟ್ ಆಯ್ತು ಎಂದು ಹೃತಿಕ್ ರೋಷನ್ ಸುಮ್ಮನಾಗಿಬಿಟ್ಟಿದ್ದಾರೆ. 'ಟೈಗರ್- 3' ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದ ಹೃತಿಕ್ ಕಳೆದ ವರ್ಷ ಬಂದಿದ್ದ 'ಫೈಟರ್' ಚಿತ್ರದಲ್ಲಿ ಅಬ್ಬರಿಸಿದ್ದರು. ಆ ಸಿನಿಮಾ ಗೆಲುವಿನ ದಡ ಸೇರಿತ್ತು. 'ವಾರ್- 2' ಸಿನಿಮಾದಲ್ಲಿ ಜ್ಯೂ. ಎನ್‌ಟಿಆರ್ ಜೊತೆ ಸದ್ಯ ಹೃತಿಕ್ ನಟಿಸುತ್ತಿದ್ದಾರೆ. ಇದರ ಬೆನ್ನಲ್ಲೇ 'ಕ್ರಿಶ್- 4' ಸುದ್ದಿ ಹೊರ ಬಿದ್ದಿದೆ.

ಬಹಳ ದಿನಗಳಿಂದ ಅಭಿಮಾನಿಗಳು ರಾಕೇಶ್ ರೋಷನ್ ಬಳಿ 'ಕ್ರಿಶ್- 4' ಮಾಡುವಂತೆ ಮನವಿ ಮಾಡುತ್ತಿದ್ದರು. ಈ ಬಗ್ಗೆ ಸಾಕಷ್ಟು ಸಂದರ್ಭಗಳಲ್ಲಿ ಅವರು ಪ್ರತಿಕ್ರಿಯಿಸಿದ್ದರು. ಕಥೆ ಬರೆಯುತ್ತಿರುವುದಾಗಿಯೂ ಕೆಲ ದಿನಗಳ ಹಿಂದೆ ಹೇಳಿದ್ದರು. ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ವರ್ಕ್ ಶುರುವಾಗಿದೆ. ರಾಕೇಶ್ ರೋಷನ್ ಹಾಗೂ ಆದಿತ್ಯಾ ಚೋಪ್ರಾ ಚಿತ್ರಕ್ಕೆ ಹಣ ಹೂಡಲಿದ್ದಾರೆ. ಮುಂದಿನ ವರ್ಷ ಸಿನಿಮಾ ಚಿತ್ರೀಕರಣ ಆರಂಭವಾಗಲಿದೆ.

ಈ ಬಾರಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹಳ ದೊಡ್ಡದಾಗಿ 'ಕ್ರಿಶ್- 4' ಸಿನಿಮಾ ಪ್ಲ್ಯಾನ್ ಮಾಡಲಾಗ್ತಿದೆ. ಚಿತ್ರದ ತಾರಾಗಣ, ಬಜೆಟ್ ಎಲ್ಲವೂ ದೊಡ್ಡದಾಗಿಯೇ ಇರುತ್ತದೆ. ಹೃತಿಕ್ ಡೈರೆಕ್ಟರ್ ಕ್ಯಾಪ್ ತೊಟ್ಟಿರುವುದು ಮತ್ತಷ್ಟು ಕುತೂಹಲ ಮೂಡುವಂತೆ ಮಾಡಿದೆ. ಈಗಾಗಲೇ ಚಿತ್ರದ ಓಟಿಟಿ ರೈಟ್ಸ್ ನೆಟ್‌ಫ್ಲಿಕ್ಸ್ ಪಾಲಾಗಲಿದೆ ಎಂದು ಚರ್ಚೆ ಶುರುವಾಗಿದೆ.

More from Filmibeat

English summary
Hrithik Roshan will make his directorial debut with Krrish- 4;
Read more about: hrithik roshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X