For Quick Alerts
  ALLOW NOTIFICATIONS  
  For Daily Alerts

  ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಹೃತಿಕ್ ರೋಷನ್: ಸಿನಿಮಾ ಯಾವುದು?

  |

  ಕೊರೊನಾ ಲಾಕ್‌ಡೌನ್ ಕಾರಣದಿಂದ ಸುಮಾರು ಎಂಟು ತಿಂಗಳು ಬಂದ್ ಆಗಿದ್ದ ಚಿತ್ರಮಂದಿರಗಳು 50% ಪ್ರೇಕ್ಷಕರಿಗೆ ಮಾತ್ರ ಅವಕಾಶದೊಂದಿಗೆ ಮರಳಿ ತೆರೆದಿವೆ.

  ಚಿತ್ರಮಂದಿರಗಳು ತೆರೆದಿದ್ದರೂ ಸಹ ಚಿತ್ರಮಂದಿರಗಳಿಗೆ ಜನರು ಹೆಚ್ಚಿಗೆ ಹೋಗುತ್ತಿಲ್ಲ. ಕೊರೊನಾ ಒಂದು ಕಾರಣವಾಗಿದ್ದರೆ, ಒಳ್ಳೆಯ ಸಿನಿಮಾಗಳು ಹೆಚ್ಚು ಸಂಖ್ಯೆಯಲ್ಲಿ ಬಿಡುಗಡೆ ಆಗುತ್ತಿಲ್ಲ ಎಂಬುದು ಮತ್ತೊಂದು ಕಾರಣ.

  ಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಖಾನ್, ಗಾಯಕ ಗುರು ರಾಂಧವ ಬಂಧನಹೃತಿಕ್ ರೋಷನ್ ಮಾಜಿ ಪತ್ನಿ ಸುಸೈನ್ ಖಾನ್, ಗಾಯಕ ಗುರು ರಾಂಧವ ಬಂಧನ

  ಈ ನಡುವೆ ಕೆಲವರು ಸ್ಟಾರ್ ನಟರು ತಾವುಗಳು ಚಿತ್ರಮಂದಿರಗಳಿಗೆ ಹೋಗುವ ಮೂಲಕ ಜನರು ಚಿತ್ರಮಂದಿರಗಳಿಗೆ ಬರುವಂತೆ ಪ್ರೇರೇಪಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅಂಥಹವರಲ್ಲಿ ಬಾಲಿವುಡ್ ನಟ ಹೃತಿಕ್ ರೋಷನ್ ಸಹ ಒಬ್ಬರು.

  ತಮ್ಮ ಕುಟುಂಬದೊಂದಿಗೆ ಹೃತಿಕ್ ರೋಷನ್ ನಿನ್ನೆ ಚಿತ್ರಮಂದಿರಕ್ಕೆ ಹೋಗಿದ್ದರು. ಐನಾಕ್ಸ್‌ ಚಿತ್ರಮಂದಿರದಲ್ಲಿ ಹೃತಿಕ್ ಹಾಗೂ ಕುಟುಂಬ 'ವಂಡರ್ ವುಮನ್ 1984' ಸಿನಿಮಾ ವೀಕ್ಷಿಸಿದ್ದಾರೆ ಹೃತಿಕ್ ರೋಷನ್. ತಾವು ಸಿನಿಮಾ ಮಂದಿರದಲ್ಲಿ ಮಾಸ್ಕ್ ಹಾಕಿಕೊಂಡು ಮಕ್ಕಳು ಹಾಗೂ ಪತ್ನಿ ಸೂಸನ್ ಜೊತೆ ಕುಳಿತಿರುವ ಚಿತ್ರಗಳನ್ನು ಹೃತಿಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  'ಚಿತ್ರಮಂದಿರಗಳು ತೆರೆದಿವೆ, ಚಿತ್ರಮಂದಿರಗಳಲ್ಲಿ ಸಿನಿಮಾ ನೋಡುವ ಅನುಭವಕ್ಕಿಂತಲೂ ಮಿಗಿಲಾದ ಅನುಭವ ಇನ್ನಾವುದೂ ಇಲ್ಲ. ಆ ಸೌಂಡ್, ಗ್ರಾಫಿಕ್ಸ್‌ ಎಲ್ಲವನ್ನೂ ದೊಡ್ಡ ಪರದೆಯ ಮೇಲೆ ನೋಡಿಯೇ ಅನುಭವಿಸಬೇಕು' ಎಂದಿದ್ದಾರೆ ಹೃತಿಕ್ ರೋಷನ್.

  ಹೃತಿಕ್ ಅನ್ನು ಮತ್ತೆ ಕೆಣಕಿದ ಕಂಗನಾ; 'ಇನ್ನೂ ಎಲ್ಲಿಯವರೆಗೆ ಅಳುತ್ತೀಯಾ ಹೃತಿಕ್?' ಎಂದು ಪ್ರಶ್ನಿಸಿದ ನಟಿಹೃತಿಕ್ ಅನ್ನು ಮತ್ತೆ ಕೆಣಕಿದ ಕಂಗನಾ; 'ಇನ್ನೂ ಎಲ್ಲಿಯವರೆಗೆ ಅಳುತ್ತೀಯಾ ಹೃತಿಕ್?' ಎಂದು ಪ್ರಶ್ನಿಸಿದ ನಟಿ

  ಒಟ್ಟಿಗೆ ಕಾಣಿಸಿಕೊಂಡ ಶಿವಣ್ಣ, ಸುದೀಪ್, ಸಿಂಪಲ್ ಸುನಿ | Filmibeat Kannada

  'ವಂಡರ್ ವುಮನ್ 1984' ಸಿನಿಮಾ ನಿನ್ನೆಯಷ್ಟೆ ಭಾರತದಲ್ಲಿ ಬಿಡುಗಡೆ ಆಗಿದೆ. ನಾನು ಚಿಕ್ಕವನಾಗಿದ್ದಾಗಿನಿಂದಲೂ 'ವಂಡರ್ ವುಮನ್' ನನ್ನ ಫೇವರೆಟ್ ಎಂದಿದ್ದಾರೆ ಹೃತಿಕ್.

  'ವಂಡರ್ ವುಮನ್ 1984' ಸಿನಿಮಾದಲ್ಲಿ ಗಲ್ ಗಡೋಟ್ ವಂಡರ್ ವುಮನ್ ಆಗಿ ಅಭಿನಯಿಸಿದ್ದಾರೆ. ಇವರ ಜೊತೆಗೆ ಖ್ಯಾತ ನಟರಾದ ಕ್ರಿಸ್ ಪೈನ್, ಕ್ರಿಸ್ಟೆನ್ ವಿಗ್, ಪೆಡ್ರೊ ಪಾಸ್ಕಲ್ ಅವರುಗಳು ನಟಿಸಿದ್ದಾರೆ. ಪ್ಯಾಟಿ ಜಂಕಿನ್ಸ್ ಸಿನಿಮಾವನ್ನು ನಿರ್ದೇಶಿಸಿದ್ದು, ಡಿಸಿ ಫಿಲಮ್ಸ್, ಅಟ್ಲಾಸ್ ಎಂಟರ್ಟೈನ್‌ಮೆಂಟ್, ದಿ ಸ್ಟೋನ್ ಕ್ವಾರಿ ಸಿನಿಮಾವನ್ನು ನಿರ್ಮಿಸಿದ್ದಾರೆ.

  English summary
  Hritik Roshan watched Wonder Woman 1984 movie in theater with family. Said watching movie in theater is best feeling.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X