For Quick Alerts
  ALLOW NOTIFICATIONS  
  For Daily Alerts

  ವಿವಾದಕ್ಕೆ ಸಿಲುಕಿದ ಹೃತಿಕ್ ರೋಷನ್ ನಟಿಸಿದ ಜೊಮ್ಯಾಟೊ ಜಾಹೀರಾತು: ಕ್ಷಮೆ ಕೇಳಿದ್ಯಾಕೆ?

  |

  ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ವಿವಾದಗಳಿಗೆ ಸಿಕ್ಕಿಕೊಳ್ಳದ ಬಾಲಿವುಡ್‌ ನಟ ಹೃತಿಕ್ ರೋಷನ್ ಇತ್ತೀಚೆಗೆ ಕೆಲವು ವಿವಾದಗಳಲ್ಲಿ ಅವರ ಹೆಸರು ಕೇಳಿಬರುತ್ತಿದೆ.

  ಬಾಲಿವುಡ್‌ನ ಶಿಸ್ತಿನ ನಟರಲ್ಲಿ ಹೃತಿಕ್ ರೋಷನ್ ಕೂಡ ಒಬ್ಬರು. ವಿಚ್ಛೇದನ ಹಾಗೂ ಕಂಗನಾ ಜೊತೆಗಿನ ಅಫೇರ್ ವಿಷಯದಲ್ಲಿ ಹೃತಿಕ್ ರೋಷನ್ ಸಾಕಷ್ಟು ಸುದ್ದಿಯಲ್ಲಿದ್ದರು. ಆ ಬಳಿಕ ಹೃತಿಕ್ ತಾನಾಯ್ತು ತನ್ನ ಕೆಲಸ ಆಯ್ತು ಅಂತಿದ್ದವರು. ಕಳೆದೊಂದು ವಾರದಿಂದ ಬೇರೆಯವರ ವಿವಾದಗಳಲ್ಲಿ ಹೃತಿಕ್ ಹೆಸರು ಕೇಳಿಬರುತ್ತಿದೆ. ಸದ್ಯ ವಿವಾದದ ಸುಳಿಯಲ್ಲಿ ಸಿಲುಕಿರುವ ಪುಡ್‌ ಡಿಲೇವರಿ ಚೈನ್ ಜೊಮ್ಯಾಟೊದಲ್ಲಿ ಹ್ಯಾಂಡ್ಸಮ್ ಹಂಕ್ ಹೆಸರು ಕೇಳಿಬರುತ್ತಿದೆ.

  ಭಾರತದ ಅಪ್ರತಿಮ ಸೂಪರ್ ಹೀರೋ 'ಕ್ರಿಶ್' ಹುಟ್ಟಿದ್ದು ಹೇಗೆ?ಭಾರತದ ಅಪ್ರತಿಮ ಸೂಪರ್ ಹೀರೋ 'ಕ್ರಿಶ್' ಹುಟ್ಟಿದ್ದು ಹೇಗೆ?

  ಹೌದು, ಹೊಸ ವಿವಾದದಲ್ಲಿ ಹೃತಿಕ್ ರೋಷನ್ ಹೆಸರು ಪ್ರರೋಕ್ಷವಾಗಿ ಸೇರಿಕೊಂಡಿದೆ. ಜೊಮ್ಯಾಟೊ ಮಾಡಿದ ಒಂದೇ ಒಂದು ಎಡವಟ್ಟು. ವಿವಾದಕ್ಕೆ ಸಿಲುಕಿ ಕ್ಷಮೆಯನ್ನೂ ಕೇಳುವಂತೆ ಮಾಡಿದೆ. ಅಷ್ಟಕ್ಕೂ ಹೃತಿಕ್ ರೋಷನ್ ನಟಿಸಿದ ಜಾಹೀರಾತು ವಿವಾದಕ್ಕೆ ಸಿಲುಕಿದ್ದು ಯಾಕೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

  ಹೃತಿಕ್ ಜಾಹೀರಾತಿನ ವಿವಾದವೇನು?

  ಹೃತಿಕ್ ಜಾಹೀರಾತಿನ ವಿವಾದವೇನು?

  ಪುಡ್ ಡಿಲೇವರಿ ಚೈನ್ ಸಂಸ್ಥೆ ಜೊಮ್ಯಾಟೊ ಇತ್ತೀಚೆಗೆ ಜಾಹೀರಾತನ್ನು ರಿಲೀಸ್ ಮಾಡಿತ್ತು. ಈ ಜಾಹೀರಾತಿನಲ್ಲಿ ಉಜ್ಜೈನಿಯ ಮಹಾಕಾಲದಿಂದ "ಥಾಲಿ" ( ಊಟ) ಆರ್ಡರ್ ಮಾಡಬೇಕೆಂಬ ಆಸೆ ಆಗಿದೆ ಎಂದು ಹೃತಿಕ್ ರೋಷನ್ ಹೇಳಿದ್ದರು. ಇದೇ ಡೈಲಾಗ್‌ ಈಗ ವಿವಾದಕ್ಕೆ ಸಿಲುಕಿದೆ. ಇದು ಮಧ್ಯಪ್ರದೇಶದ ಮಹಾಕಾಲೇಶ್ವರ ದೇವಸ್ಥಾನದ ಉಜ್ಜೇನಿ ಅರ್ಚಕರ ನಿದ್ದೆಕೆಡಿಸಿತ್ತು. ಹೀಗಾಗಿ ಜಮ್ಯಾಟೊ ಜಾಹೀರಾತಿನ ವಿರುದ್ಧ ತಿರುಗಿ ಬಿದ್ದಿದ್ದರು.

  'ಸಲಾರ್' Vs 'ಫೈಟರ್'; ಮದಗಜಗಳ ಮಹಾ ಕಾಳಗ'ಸಲಾರ್' Vs 'ಫೈಟರ್'; ಮದಗಜಗಳ ಮಹಾ ಕಾಳಗ

  ಹಿಂದೂ ಭಾವನೆಗಳಿಗೆ ಧಕ್ಕೆ

  ಹಿಂದೂ ಭಾವನೆಗಳಿಗೆ ಧಕ್ಕೆ

  ಜೊಮ್ಯಾಟೊ ಜಾಹೀರಾತಿನಲ್ಲಿ ಹೃತಿಕ್ ರೋಷನ್ ಹೇಳಿದ ಡೈಲಾಗ್ ಹಿಂದೂ ಭಾವನೆಗಳಿಗೆ ಧಕ್ಕೆಯಾಗಿದೆ. ಹೀಗಾಗಿ ಜೊಮ್ಯಾಟೊ ಸಂಸ್ಥೆ ಕ್ಷಮೆ ಕೇಳಲೇಬೇಕು. ಜೊತೆ ಜಾಹೀರಾತನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದರು. ಅಲ್ಲದೆ ಉಜ್ಜೈನ್‌ನ ಡಿಸಿಗೆ ಜೊಮ್ಯಾಟೊ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮನವಿ ಕೂಡ ಮಾಡಿಕೊಂಡಿದ್ದರು. ಹೃತಿಕ್ ರೋಷನ್ ಜೊತೆಗಿನ ಜಾಹೀರಾತು ವಿವಾದಕ್ಕೆ ತಿರುಗುತ್ತಿದ್ದಂತೆ ಜೊಮ್ಯಾಟೊ ಕ್ಷಮೆ ಕೇಳಿದೆ. ಈ ಪತ್ರ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  ಪತ್ರದಲ್ಲಿ ಹೇಳಿದ್ದೇನು?

  ಪತ್ರದಲ್ಲಿ ಹೇಳಿದ್ದೇನು?

  ವಿವಾದ ಎದ್ದೇಳುತ್ತಿದ್ದಂತೆ ಜೊಮ್ಯಾಟೊ ಸಂಸ್ಥೆ ಜಾಹೀರಾತು ಪ್ರಸಾರ ಮಾಡುವುದನ್ನು ನಿಲ್ಲಿಸಿದೆ. ಅಲ್ಲದೆ ಕ್ಷಮೆಯನ್ನೂ ಕೇಳಿದೆ. ಜೊಮ್ಯಾಟೊ ರಿಲೀಸ್ ಮಾಡಿದ ಕ್ಷಮಾಪಣಾ ಪತ್ರದಲ್ಲಿ ಜಾಹೀರಾತು ಯಾವುದೇ ಭಾವನೆಗಳಿಗೆ ಧಕ್ಕೆ ಮಾಡುವುದಾಗಿರಲಿಲ್ಲ. ಜಾಹೀರಾತಿನಲ್ಲಿ ಮಹಾಕಾಲ್ ಅನ್ನೋ ಉಜ್ಜೈನ್‌ನ ಸುಪ್ರಸಿದ್ಧ ರೆಸ್ಟೋರೆಂಟ್‌ನ ಬಗ್ಗೆ ಉಲ್ಲೇಖ ಮಾಡಲಾಗಿದ್ದು, ಮಹಾಕಾಲೇಶ್ವರ ದೇವಸ್ಥಾನದ ಬಗ್ಗೆ ಅಲ್ಲ. ಅಲ್ಲದೆ "ಥಾಲಿ" ಅಂತ ಹೇಳಿದ್ದು, ಅದೇ ರೆಸ್ಟೋರೆಂಟ್‌ನ ಜನಪ್ರಿಯ ಫುಡ್ ಮೆನ್ಯೂ ಎಂದು ಹೇಳಿದೆ.

  ವಿವಾದಗಳ ಸುಳಿಯಲ್ಲಿ ಹೃತಿಕ್ ರೋಷನ್

  ವಿವಾದಗಳ ಸುಳಿಯಲ್ಲಿ ಹೃತಿಕ್ ರೋಷನ್

  ಹೃತಿಕ್ ರೋಷನ್ ಇತ್ತೀಚೆಗೆ ವಿವಾದಗಳ ಸುಳಿಗೆ ಸಿಲುಕುತ್ತಲೇ ಇದ್ದಾರೆ. ಆಮಿರ್ ಖಾನ್ ನಟಿಸಿದ 'ಲಾಲ್ ಸಿಂಗ್ ಚಡ್ಡ' ಸಿನಿಮಾ ನೋಡಿ ಬಂದಿದ್ದ ಹೃತಿಕ್ ರೋಷನ್ ಸಿನಿಮಾವನ್ನು ಹೊಗಳಿ ಟ್ವೀಟ್ ಮಾಡಿದ್ದರು. ಅದೇ ಟ್ವೀಟ್ ವಿರುದ್ಧ ನೆಟ್ಟಿಗರು ತಿರುಗಿಬಿದ್ದಿದ್ದರು. ಹೃತಿಕ್ ರೋಷನ್ ಮುಂಬರುವ ಸಿನಿಮಾ 'ವಿಕ್ರಂ ವೇದ'ವನ್ನು ಬಾಯ್‌ಕಾಟ್ ಮಾಡುತ್ತೇವೆ ಎಂದು ಟ್ರೆಂಡ್ ಮಾಡಿದ್ದರು. ಈಗ ಜಾಹೀರಾತು ವಿವಾದಕ್ಕೆ ಸಿಲುಕಿದೆ. ಯಾವುದಕ್ಕೂ ಸಿಕ್ಕಿಕೊಳ್ಳದ ಹೃತಿಕ್ ಯಾಕೋ ಇತ್ತೀಚೆಗೆ ವಿವಾದಕ್ಕೆ ಸಿಲುಕುತ್ತಿದ್ದಾರೆ.

  English summary
  Hrithik Roshan Zomato Ad Controversy: Zomato Ask Apology, Know More
  Monday, August 22, 2022, 19:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X