ಶ್ರೀರಾಮನ ಪಾತ್ರದಲ್ಲಿ ಹೃತಿಕ್ ರೋಷನ್: ಸೀತೆ ಪಾತ್ರಕ್ಕೆ ಯಾವ ನಟಿ?

'ರಾಮಾಯಣ' ಕುರಿತು ಎರಡು ಬಿಗ್‌ ಬಜೆಟ್ ಸಿನಿಮಾಗಳು ಏಕಕಾಲಕ್ಕೆ ತೆರೆಗೆ ಬರುವ ನಿರೀಕ್ಷಿ ಇದೆ.

ಪ್ರಭಾಸ್ ನಟಿಸುತ್ತಿರುವ 'ಆದಿಪುರುಷ್' ಸಿನಿಮಾದಲ್ಲಿ ಪ್ರಭಾಸ್ ರಾಮನಾಗಿ ನಟಿಸುತ್ತಿದ್ದಾರೆ. ಮತ್ತೊಂದೆಡೆ ಹೃತಿಕ್ ರೋಷನ್ ಸಹ ರಾಮಾಯಣ ಆಧರಿಸಿದ ಸಿನಿಮಾದಲ್ಲಿ ರಾಮನಾಗಿ ನಟಿಸುತ್ತಿದ್ದಾರೆ. ಎರಡೂ ಸಿನಿಮಾಗಳು ಬಹುತೇಕ ಏಕಕಾಲಕ್ಕೆ ಸೆಟ್ಟೇರುತ್ತಿವೆ.

ಹೃತಿಕ್ ನಟಿಸಲಿರುವ ಸಿನಿಮಾವನ್ನು ನಿರ್ಮಾಪಕ ಮಧು ಮಂತೇನಾ ನಿರ್ಮಿಸುತ್ತಿದ್ದು. 300 ಕೋಟಿ ರೂಪಾಯಿಗಳ ಬಜೆಟ್ ನ ಈ ಸಿನಿಮಾವನ್ನು 3 ಡಿ ತಂತ್ರಜ್ಞಾನದಲ್ಲಿ ನಿರ್ಮಾಣ ಮಾಡಲಾಗುತ್ತದೆ.

Hritik Roshan Act As Sri Ram And Deepika As Sita

ಹೃತಿಕ್ ನಟನೆಯ ರಾಮಾಯಣದಲ್ಲಿ ಸೀತೆಯಾಗಿ ನಟಿ ದೀಪಿಕಾ ಪಡುಕೋಣೆಯನ್ನು ಆಯ್ಕೆ ಮಾಡಲಾಗಿದ್ದು. ಸಿನಿಮಾದಲ್ಲಿ ಬಾಲಿವುಡ್‌ ನ 'ಎ ಕ್ಯಾಟಗರಿ' ನಟ-ನಟಿಯರನ್ನೇ ಆಯ್ಕೆ ಮಾಡಲಾಗುವುದು ಎಂದು ನಿರ್ಮಾಪಕ ತಿಳಿಸಿದ್ದಾರೆ.

ಹೃತಿಕ್ ನಟನೆಯ ರಾಮಾಯಣ ಸಿನಿಮಾವನ್ನು ನಿತೇಶ್ ತಿವಾರಿ ನಿರ್ದೇಶಿಸಲಿದ್ದಾರೆ. ರಾಮಾಯಣದ ಪ್ರತಿ ಮುಖ್ಯ ವಿಷಯವನ್ನೂ ಸಿನಿಮಾದಲ್ಲಿ ತೋರಿಸಲಾಗುವುದು ಎಂದಿರುವ ತಿವಾರಿ, ಸಿನಿಮಾವನ್ನು ಎರಡು ಭಾಗದಲ್ಲಿ ತೆರೆಗೆ ತರಲಿದ್ದೇವೆ ಎಂದಿದ್ದಾರೆ.

ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಈಗಾಗಲೇ 'ಫೈಟರ್' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಆ ಸಿನಿಮಾದ ಬಳಿಕ ರಾಮಾಯಣ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.

Recommended Video

ಮಾಜಿ ಗೆಳೆಯನ ರಾಬರ್ಟ್ ಸಿನಿಮಾ ಬಗ್ಗೆ ಮಾತನಾಡಿದ ಸುದೀಪ್ | Sudeep | Darshan | Roberrt

ಇನ್ನು ಪ್ರಭಾಸ್ ನಟನೆಯ 'ಆದಿಪುರುಷ್' ಸಿನಿಮಾವನ್ನು ಓಂ ರಾವತ್ ನಿರ್ದೇಶಿಸುತ್ತಿದ್ದು, ರಾವಣನಾಗಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಸೀತೆ ಪಾತ್ರಕ್ಕೆ ಕಿಯಾರಾ ಅಡ್ವಾಣಿ ಅಥವಾ ದಿಶಾ ಪಟಾನಿ ಆಯ್ಕೆ ಆಗುವ ಸಾಧ್ಯತೆ ಇದೆ.

More from Filmibeat

English summary
Hritik Roshan to act in Sri Ram's role and Deepika Padukone to act as Sita in Ramayana movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X