ಮುಂಬೈನಲ್ಲಿ 100 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ ಹೃತಿಕ್ ರೋಶನ್
ಮನೆ, ಜಮೀನು ಖರೀದಿಸುವುದು ಬಹುತೇಕ ಎಲ್ಲರ ಕನಸು, ನಟ-ನಟಿಯರಿಗೂ ಸಹ ಈ ಆಸೆ ಇರುವುದೇ. ಉದ್ಯಮಿಯಾಗಿಯೂ ಯಶಸ್ವಿ ಆಗುತ್ತಿರುವ ನಟ ಹೃತಿಕ್ ತಮಗಾಗಿ ಭಾರಿ ದುಬಾರಿ ಮೊತ್ತದ ಆಸ್ತಿ ಖರೀದಿ ಮಾಡಿದ್ದಾರೆ.
ಹೌದು, ಎಚ್‌ಆರ್‌ಎಕ್ಸ್ ಹೆಸರಿನ ಫ್ಯಾಷನ್ ಬ್ರ್ಯಾಂಡ್ ಮಾಲೀಕರಾಗಿರುವ ಹೃತಿಕ್ ರೋಷನ್, ಫ್ಯಾಷನ್ ಜಗತ್ತಿನಲ್ಲಿ ನಿಧಾನಕ್ಕೆ ತಮ್ಮ ಬ್ರ್ಯಾಂಡ್ ಗೆ ನೆಲೆ ಕಲ್ಪಿಸುತ್ತಿದ್ದಾರೆ. ಎಚ್‌ಆರ್‌ಎಕ್ಸ್ ಉತ್ತರ ಬ್ರ್ಯಾಂಡ್ ಹೆಸರು ಈಗಾಗಲೇ ಪಡೆದುಕೊಂಡಿದೆ.
ಈಗ ಮತ್ತೆ ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡಿರುವ ಹೃತಿಕ್ ರೋಶನ್, ಮುಂಬೈನ ದುಬಾರಿ ಏರಿಯಾದಲ್ಲಿಯೇ ದೊಡ್ಡ ಮೊತ್ತದ ಆಸ್ತಿ ಖರೀದಿ ಮಾಡಿದ್ದಾರೆ.

ಮುಂಬೈನ ಜುಹು ಏರಿಯಾದಲ್ಲಿ ಮನೆ
ಮುಂಬೈನ ಜನಪ್ರಿಯ ಬಡಾವಣೆ ಜುಹು-ವರ್ಸೋವಾ ರಸ್ತೆಯಲ್ಲಿ ದೊಡ್ಡದೊಂದು ಅಪಾರ್ಟ್‌ಮಿಂಟ್ ಖರೀದಿಸಿದ್ದಾರೆ ನಟ ಹೃತಿಕ್. ಜುಹು ಏರಿಯಾದಲ್ಲಿ ಅಪಾರ್ಟ್‌ಮೆಂಟ್ ಖರೀದಿ ಬಾರಿ ದುಬಾರಿ ಮೊತ್ತವನ್ನೇ ಬೇಡುತ್ತದೆ.

100 ಕೋಟಿ ಪಾವತಿಸಿರುವ ಹೃತಿಕ್ ರೋಶನ್
ಅಪಾರ್ಟ್‌ಮಿಂಟ್ ಜೊತೆಗೆ ಪೆಂಟ್‌ಹೌಸ್ ಒಂದನ್ನೂ ಸಹ ಖರೀದಿಸಿದ್ದಾರೆ ನಟ ಹೃತಿಕ್ ರೋಷನ್. ಎರಡಕ್ಕೂ ಸೇರಿ ಬರೋಬ್ಬರಿ 100 ಕೋಟಿ ರೂಪಾಯಿ ಪಾವತಿಸಿದ್ದಾರಂತೆ ಹೃತಿಕ್ ರೋಷನ್.

ವಿಶಾಲವಾದ ಅಪಾರ್ಟ್‌ಮಿಂಟ್ ಖರೀದಿ
ಅಪಾರ್ಟ್‌ಮಿಂಟ್ ನಲ್ಲಿ ಹೃತಿಕ್ ಕುಟುಂಬಕ್ಕಾಗಿಯೇ ಪ್ರತ್ಯೇಕ ಲಿಫ್ಟ್, 10 ವಾಹನಗಳ ಪಾರ್ಕಿಂಗ್ ಸ್ಥಳವನ್ನು ನಿಗದಿಪಡಿಸಲಾಗಿರುತ್ತದೆ. ಅದ್ಧೂರಿ ಒಳಾಂಗಣ ವಿನ್ಯಾಸ, ಸೀ ವ್ಯೂ ಸಹ ಇರಲಿದೆಯಂತೆ ಅಪಾರ್ಟ್‌ಮಿಂಟ್‌ನಲ್ಲಿ. ಹೃತಿಕ್ ಅವರದ್ದು ಕೂಡು ಕುಟುಂಬ ಹಾಗಾಗಿ ದೊಡ್ಡ ಮನೆಯನ್ನೇ ಖರೀದಿಸಿದ್ದಾರೆ ಹೃತಿಕ್.

ದುಬಾರಿ ಬಾಡಿಗೆ ಪಾವತಿಸುತ್ತಿದ್ದರಂತೆ ಹೃತಿಕ್
ನಟ ಹೃತಿಕ್ ರೋಷನ್ ಹಾಗೂ ಕುಟುಂಬ ಇಷ್ಟು ದಿನ ಮುಂಬೈನಲ್ಲಿ ಬಾಡಿಗೆ ಸ್ಥಳದಲ್ಲಿ ವಾಸವಿದ್ದರಂತೆ. ಅದೂ ಭಾರಿ ದುಬಾರಿ ಬಾಡಿಗೆಯನ್ನೇ ಆಪಾರ್ಟ್‌ಮಿಂಟ್ ಗೆ ನೀಡುತ್ತಿದ್ದರಂತೆ. ಆದರೆ ಈಗ ಸ್ವಂತಕ್ಕೆ ಎರಡು ವೈಭವೋಪೇತ ಮನೆಗಳನ್ನು ಖರೀದಿಸಿದ್ದಾರೆ ಹೃತಿಕ್.


Click it and Unblock the Notifications











