ಮದ್ವೆಯಾಗದೇ ಈ ಬಾಲಿವುಡ್‌ ಸ್ಟಾರ್ ಜೊತೆ ಸಂಸಾರ ನಡೆಸುತ್ತಿದ್ದಾರೆ ಕನ್ನಡ ಚಿತ್ರದಲ್ಲಿ ಅಭಿನಯಿಸಿದ್ದ ಈ ನಟಿ..!

ಪ್ರೀತಿ ಎಂದರೆ ಸಂತೋಷ ಅದರ ಮಾಯೆಯೇ ಅಂತಹದು ಎನ್ನುವುದು ಅನುಭವಿಸಿದವರ ಅಭಿಪ್ರಾಯ. ಪ್ರೀತಿಸುವ ವ್ಯಕ್ತಿಯನ್ನು ಅಳೆಯಲಾಗದಷ್ಟು, ಅಂತ್ಯ ಇಲ್ಲದಷ್ಟು ಪ್ರೀತಿಸುವ ಅನೇಕರು ಪ್ರೀತಿಯ ಸುಖದ ಕ್ಷಣಗಳನ್ನು ಗುನುಗುತ್ತಿರುತ್ತಾರೆ. ಲೇಖ ವಾಷಿಂಗ್ಟನ್ ಇದಕ್ಕೆ ಸದ್ಯದ ಉದಾಹರಣೆ.

ಹೌದು, ಕನ್ನಡದಲ್ಲಿ ಹುಡುಗ ಹುಡುಗಿ ಚಿತ್ರದಲ್ಲಿ ಅಭಿನಯಿಸಿದ್ದ ಲೇಖಾ ಸದ್ಯ ಪ್ರೀತಿಯ ಗುಂಗಿನಲ್ಲಿದ್ದಾರೆ. ಅಮೀರ್ ಖಾನ್ ಅವರ ಸೋದರಳಿಯ ಇಮ್ರಾನ್ ಖಾನ್ ಜೊತೆ ಮದ್ವೆಯಾಗದೇ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದಾರೆ. ಇಂಥಾ ಲೇಖಾ ಸದ್ಯಕ್ಕೆ ತಮ್ಮ ಪ್ರೀತಿಯ ಕುರಿತು ಮಾತನಾಡಿದ್ದಾರೆ. ಇಮ್ರಾನ್ ಖಾನ್ ಅವರನ್ನು ತಾವು ಹುಚ್ಚಿಯಂತೆ ಪ್ರೀತಿಸುತ್ತಿರುವುದಾಗಿ ಹೇಳಿದ್ದಾರೆ.

Huduga Hudugi actress Lekha Washington says she and this actor are mutually madly in love

ತಮ್ಮ ಸಂಬಂಧದ ಕುರಿತು ಮನಿ ಕಂಟ್ರೋಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಲೇಖಾ ಬದಲಾದ ಈ ಕಾಲದಲ್ಲಿ ನಾವು ಇಬ್ಬರು ಪರಸ್ಪರ ಹುಚ್ಚರಂತೆ ಪ್ರೀತಿಯನ್ನು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಪ್ರೀತಿಸಿದ ವ್ಯಕ್ತಿಯ ಜೊತೆ ಇರುವುದು, ಬದುಕುವುದು, ಬೆಳೆಯುವುದು, ತುಂಬಾ ಸವಾಲಿನದ್ದು ಎಂದು ಹೇಳಿದ್ದಾರೆ. ಇಮ್ರಾನ್ ಖಾನ್ ಮಾತನಾಡುವ ರೀತಿ ಮತ್ತು ಅವರು ನನ್ನನ್ನೂ ಅರ್ಥೈಸುವ ರೀತಿ ನನಗೆ ತುಂಬಾ ಇಷ್ಟ ಇದರಿಂದ ನನ್ನನ್ನೂ ನಾನು ಸುಧಾರಿಸಿಕೊಳ್ಳಲು ನಾನು ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಂದ್ಹಾಗೇ ಅಮೀರ್ ಖಾನ್ ಪ್ರಭಾವಳಿಯಲ್ಲಿಯೇ ಚಿತ್ರರಂಗಕ್ಕೆ ಬಂದ ಇಮ್ರಾನ್ ಖಾನ್, ತಮ್ಮ ಮೊದಲನೇ ಸಿನಿಮಾ ಜಾನೇ ತು ಯಾ ಜಾನೇ ನಾ ಚಿತ್ರದ ಮೂಲಕ ರಾತ್ರೋ ರಾತ್ರಿ ಸ್ಟಾರ್ ಆದರು. ಆ ನಂತರ.. ಒಂದಾದ ಮೇಲೊಂದು ಸಿನಿಮಾ ಮಾಡಿದರು. ಇದರ ನಡುವೆ ಹೆಣ್ಮಕ್ಕಳ ಕನಸು ಮತ್ತು ಮನಸನ್ನ ನುಚ್ಚು ನೂರು ಮಾಡಿ ಖ್ಯಾತಿಯ ಶಿಖರಕ್ಕೇರಿದ್ದಾಗಲೇ ತಮ್ಮ ಬಾಲ್ಯದ ಗೆಳತಿ ಅವಂತಿಕಾ ಮಲಿಕ್ ಅವರನ್ನು 2011ರಲ್ಲಿ ಮದುವೆಯೂ ಆದರು.

ಆದರೆ.. ಅದೇನಾಯ್ತೋ ಗೊತ್ತಿಲ್ಲ. ಬಾನೆತ್ತರದಲ್ಲಿ ತೇಲುತ್ತಿದ್ದ ಇಮ್ರಾನ್ ಖಾನ್ ಏಕಾಏಕಿ ಪಾತಾಳಕ್ಕೆ ಕುಸಿದರು. ಮಾಡಿದ ಸಿನಿಮಾ ಗೆಲ್ಲಲಿಲ್ಲ. ವ್ಯೆಯಕ್ತಿಕ ಬದುಕಿನಲ್ಲಿ ಕೂಡ ನೆಮ್ಮದಿ ಸಿಗಲಿಲ್ಲ. ಇಮ್ರಾನ್ ಮತ್ತು ಅವಂತಿಕಾ ನಡುವೆ ಹೊಂದಾಣಿಕೆಯಾಗಲಿಲ್ಲ. ಈ ಕಾರಣಕ್ಕೆ 2019ರಲ್ಲಿ ತಲಾಖ್ ಪಡೆದು ದೂರವಾದ ಇಮ್ರಾನ್ ಮತ್ತು ಆವಂತಿಕಾ ತಮ್ಮ ಈ ಕಷ್ಟದ ಅನುಭವಗಳಿಂದ ಜೀವನ ಸ್ಫೂರ್ತಿಯನ್ನ ಪಡೆದು ಪ್ರತ್ಯೇಕವಾಗಿ ವಾಸ ಮಾಡಲು ಶುರು ಮಾಡಿದರು.

ಇನ್ನೂ ಲೇಖಾ ವಾಷಿಂಗ್ಟನ್ ಈ ಹಿಂದೆ ಪತ್ರಕರ್ತ ಪಾಬ್ಲೋ ಚಟರ್ಜಿ ಅವರ ಜೊತೆ 08 ವರ್ಷಗಳ ಕಾಲ ಪ್ರೀತಿಯಲ್ಲಿ ಬಿದ್ದಿದ್ದರು. 05 ವರ್ಷ ಲಿವ್ ಇನ್ ಸಂಬಂಧದಲ್ಲಿದ್ದರು. ಆ ನಂತರ 2017ರಲ್ಲಿ ಮದುವೆ ಕೂಡ ಆದರು. ಮದುವೆಯಾದ ಬೆನ್ನಲ್ಲೇ ವಿಚ್ಛೇದನವನ್ನು ಕೂಡ ಪಡೆದರು. ಹೀಗೆ ಮೊದಲ ಸಂಬಂಧ ಕಡಿದುಕೊಂಡ ಇಬ್ಬರು ಕೊರೊನಾ ಕಾಲದಲ್ಲಿ ಒಬ್ಬರಿಗೊಬ್ಬರು ಹತ್ತಿರವಾದರು. ವಿಶ್ವದೆಲ್ಲೆಡೆ ಜನ ಕಂಗಲಾದ ಸಮಯದಲ್ಲಿ ಇಮ್ರಾನ್ ಮತ್ತು ಲೇಖಾ ಪ್ರೇಮದ ಅಮಲಿನಲ್ಲಿ ವಾಲಾಡಿದ್ದರು. ಆಮೀರ್ ಖಾನ್ ಮಗಳು ಇರಾ ಮದುವೆಯಲ್ಲಿ ಜೊತೆ ಜೊತೆಯಾಗಿಯೇ ಬಂದು ನವ ಜೋಡಿಗೆ ಹರಸಿ ಹಾರೈಸಿದರು. ಎಲ್ಲರೆದುರು ನಾವು ಇಬ್ಬರು ಈಗ ಲವ್ ಬರ್ಡ್ಸ್‌ ಎಂದು ಘಂಟಾ ಘೋಷವಾಗಿ ಹೇಳಿದರು. ಹೀಗೆ ಹೆಚ್ಚು ಕಡಿಮೆ ಕಳೆದ ಐದು ವರ್ಷದಿಂದ ಒಬ್ಬರನ್ನೊಬ್ಬರು ಇಷ್ಟ ಪಡ್ತಿರುವ ಇಮ್ರಾನ್ ಖಾನ್ ಮತ್ತು ಲೇಖಾ ವಾಷಿಗ್ಟಂನ್ ಈಗ ಲಿವ್ ಇನ್ ರಿಲೇಷನ್ ಷಿಪ್ ನಲ್ಲಿದ್ದಾರೆ. ಜೊತೆಯಾಗಿ ಕಾಲ ಕಳೆಯುತ್ತಿದ್ದಾರೆ.

More from Filmibeat

Read more about: imran khan love bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X