For Quick Alerts
  ALLOW NOTIFICATIONS  
  For Daily Alerts

  ಹೊಸ ನಾಯಕಿಗೆ ಸ್ವಾಗತ ಮಾಡಿದ ಸಲ್ಮಾನ್ ಖಾನ್

  By Pavithra
  |

  ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಚಿತ್ರತಂಡ ಸಲ್ಲು ಜೊತೆ ಯಲ್ಲಿ ಅಭಿನಯಿಸಲು ನಾಯಕಿಯರನ್ನ ಆಯ್ಕೆ ಮಾಡುವುದರಲ್ಲಿ ಬ್ಯುಸಿ ಆಗಿತ್ತು. ಇತ್ತೀಚಿಗಷ್ಟೆ ಪ್ರಿಯಾಂಕ ಚೋಪ್ರ ಅವರನ್ನು ಸಿನಿಮಾಗೆ ಹೀರೋಯಿನ್ ಆಯ್ಕೆ ಮಾಡಿದ ಚಿತ್ರತಂಡ ಸದ್ಯ ಮತ್ತೊಬ್ಬ ನಾಯಕಿಯನ್ನು ತಮ್ಮ ತಂಡಕ್ಕೆ ಖುದ್ದು ಸಲ್ಮಾನ್ ಖಾನ್ ವೆಲ್ ಕಂ ಮಾಡಿದ್ದಾರೆ.

  ಸಲ್ಲು ಜೋಡಿಯಾಗಿ ಇದೇ ಮೊದಲ ಬಾರಿಗೆ ದಿಶಾ ಪಠಾನಿ ಅಭಿನಯ ಮಾಡುತ್ತಿದ್ದಾರೆ. ಟ್ವಿಟ್ಟರ್ ಮೂಲಕ ಸಲ್ಮಾನ್ ಖಾನ್ ದಿಷಾ ಗೆ ಸ್ವಾಗತ ಕೋರಿದ್ದಾರೆ. ಸುದ್ದಿಗಳ ಪ್ರಕಾರ ಇದೇ ಪಾತ್ರಕ್ಕೆ ಮೊದಲು ಶ್ರದ್ದಾ ಕಪೂರ್ ಅವರನ್ನ ಆಫರ್ ಮಾಡಲಾಗಿತ್ತಂತೆ. ಶ್ರದ್ದಾ ಗ್ರೀನ್ ಸಿಗ್ನಲ್ ನೀಡದ ಕಾರಣ ಅದೇ ಪಾತ್ರಕ್ಕೆ ದಿಶಾರನ್ನ ಆಯ್ಕೆ ಮಾಡಿಕೊಂಡಿದೆ ಸಿನಿಮಾತಂಡ.

  10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ10 ವರ್ಷದ ನಂತರ ಮತ್ತೆ ಒಂದಾದ ಸಲ್ಮಾನ್-ಪ್ರಿಯಾಂಕಾ

  ಭಾರತ್ ಸಿನಿಮಾದಲ್ಲಿ ಸಾಕಷ್ಟು ವಿಶೇಷತೆಗಳಿಂದ ಕೂಡಿದ್ದು ಇದೇ ಮೊದಲ ಬಾರಿಗೆ ಸಲ್ಮಾನ್ ಖಾನ್ ಅವರನ್ನು ಐದು ವಿಭಿನ್ನ ಗೆಟಪ್ ನಲ್ಲಿ ನೋಡುವ ಅವಕಾಶ ಅವರ ಅಭಿಮಾನಿಗಳಿಗೆ ಸಿಕ್ಕಿದೆ.

  ಅಂದ್ಹಾಗೆ, 'ಭಾರತ್' ಸಿನಿಮಾ ಐತಿಹಾಸಿಕ ಚಿತ್ರವಾಗಿದ್ದು, 1947ರಲ್ಲಿ ಆರಂಭವಾಗಿ 2000ನೇ ಇಸವಿಯಲ್ಲಿ ಅಂತ್ಯವಾಗುವಂತಹ ಕಥೆ ಮಾಡಿದ್ದಾರಂತೆ ನಿರ್ದೇಶಕರು. ಭಾರತ್ ಸಲ್ಮಾನ್ ಖಾನ್ ಹಾಗೂ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರ ಹ್ಯಾಟ್ರಿಕ್ ಕಾಂಬಿನೇಶನ್ ಆಗಲಿದೆ.

  English summary
  After the huge success of Baaghi2, Disha Patani has been roped in to play a pivotal role in Ali Abbas Zafar's Bharat. Disha will join Salman Khan and Priyanka Chopra, ಸಲ್ಲು ಜೋಡಿಯಾಗಿ ಇದೇ ಮೊದಲ ಬಾರಿಗೆ ದಿಶಾ ಪಠಾನಿ ಅಭಿನಯ ಮಾಡುತ್ತಿದ್ದಾರೆ. ಟ್ವಿಟ್ಟರ್ ಮೂಲಕ ಸಲ್ಮಾನ್ ಖಾನ್ ದಿಷಾ ಗೆ ಸ್ವಾಗತ ಕೋರಿದ್ದಾರೆ.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X